ಸಮಾಜದಿಂದ ಗಳಿಸಿದ್ದನ್ನು ಸಮಾಜಕ್ಕೆ
ಕೋಡುವುದರಲ್ಲಿಯ ಖುಷಿ ಬೇರೆ ಎಲ್ಲೂ ಸಿಗುವುದಿಲ್ಲ. ಜನರು
ಸಮಾಜದಿಂದ ಗಳಿಸಿದ್ದನ್ನು ಸಮಾಜಕ್ಕೆ ಹೇಗೆ ನೀಡಬಹುದು
ಎಂಬುದನ್ನು ಗ್ರಾಮೀಣ ಕೂಟ ಮೈಕ್ರೊ ಪೈನಾನ್ಸ್ ಮತ್ತು ಕ್ರೆಡಿಟ್
ಆಕ್ಸೆಸ್ ಇಂಡಿಯಾ ಪೌಂಡೇಶನ್ ಸಂಸ್ಥೆಯವರು ತೋರಿಸಿಕೊಟ್ಟಿದ್ದಾರೆ
ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಿಗಿ ಹೇಳಿದರು.
ಶುಕ್ರವಾರ ನಗರದ ಚಿಗಟೇರಿ ಜಿಲ್ಲಾ ಆಸ್ಪತ್ರೆಯಲ್ಲಿ ಗ್ರಾಮೀಣ
ಕೂಟ ಮೈಕ್ರೊ ಪೈನಾನ್ಸ್ ಮತ್ತು ಕ್ರೆಡಿಟ್ ಆಕ್ಸೆಸ್ ಇಂಡಿಯಾ
ಪೌಂಡೇಶನ್ ತೀರ್ವ ನಿಗಾ ಘಟಕಕ್ಕೆ ಕೊಡಮಾಡಿದ ವಿವಿಧ
ವೈದ್ಯಕೀಯ ಸಲಕರಣೆಗಳ ದೇಣಿಗೆಯನ್ನು ಸ್ವೀಕರಿಸಿ
ಮಾತನಾಡಿದ ಅವರು, ಕೋವಿಡ್ ಮೂರನೇ ಅಲೆ ಮಕ್ಕಳ ಮೇಲೆ
ಪ್ರಭಾವ ಬೀರುವ ಸಂಭವವಿರುವುದರಿಂದ ಅಗತ್ಯ ರೇಡಿಯೆಟರ್
ಬೆಡ್, ಮಕ್ಕಳ ಐಸಿಯು ಸಿದ್ದತೆ ಮಾಡಿಕೊಳ್ಳಲಾಗುತ್ತಿದೆ. ಈಗಾಗಲೇ
ಸಮರ್ಥನಂ ಸಂಸ್ಥೆಯವರು 10 ಐಸಿಯು ಕಾಟ್‍ಗಳನ್ನು
ನೀಡಿದ್ದರು. ಸರ್ಕಾರದದ ಅನುದಾನದಲ್ಲಿ 10 ಕಾಟ್‍ಗಳನ್ನು 
ನೀಡಲಾಗಿತ್ತು. ಒಟ್ಟು 38 ಬೆಡ್‍ಗಳನ್ನು ನಿಭಾಯಿಸುವ ಸಾಮಥ್ಯವಿರುವ
65-66ನೇ ವಾರ್ಡಗಳು ಈಗಾಗಲೆ ಉದ್ಘಾಟನೆಗೊಂಡಿವೆ. ಇದೇ ವಾರ್ಡ್‍ಗಳಲ್ಲಿ
10 ಕಾಟ್‍ಗಳನ್ನು ಇರಿಸಿ ತಯಾರಿ ಮಾಡಿಕೊಳ್ಳಲಾಗುವುದು. ಗ್ರಾಮೀಣ
ಕೂಟ ಮೈಕ್ರೊ ಪೈನಾನ್ಸ್ ಮತ್ತು ಕ್ರೆಡಿಟ್ ಆಕ್ಸೆಸ್ ಇಂಡಿಯಾ
ಪೌಂಡೇಶನ್ 10 ಫೌಲರ್ಸ್ ಕಾಟ್‍ಗಳು, 10 ಸಾಮಾನ್ಯ ಕಾಟ್‍ಗಳು ಹಾಗೂ
4 ಕ್ರಾಶ್ ಕಾಟ್‍ಗಳನ್ನು ನೀಡಿದ್ದಾರೆ ಸಂಸ್ಥೆಗೆ ಚಿಗಟೇರಿ ಜಿಲ್ಲಾ
ಆಸ್ಪತ್ರೆಯ ವತಿಯಿಂದ ಹೃದಯಪೂರ್ವಕ ಕೃತಜ್ಞತೆ
ಸಲ್ಲಿಸುತ್ತೇನೆ ಎಂದರು.
ಈ ಸಂಸ್ಥೆಯು ಬಹಳ ಒಳ್ಳೆಯ ಕೆಲಸವನ್ನು ಮಾಡುತ್ತಾ
ಬಂದಿದೆ. ಒಟ್ಟು ರೂ.12,664 ಕೋಟಿ ಹಣವನ್ನು ಹೊಂದಿದ್ದು,  14
ರಾಜ್ಯಗಳಲ್ಲಿ 1424 ಶಾಖೆಗಳ ಮೂಲಕ 14357 ನೌಕರರು ಕಾರ್ಯ

ನಿರ್ವಹಿಸುದ್ದಾರೆ. 37.85 ಲಕ್ಷ ಕುಟುಂಬಗಳಿಗೆ ಆರ್ಥಿಕವಾಗಿ ಆಭಿವೃದ್ಧಿ
ಹೊಂದಲು ಸಹಾಯ ಮಾಡುತ್ತಿದೆ. ಇಲ್ಲಿಯವರೆಗೂ ಶೇ.99
ಮರುಪಾವತಿಯನ್ನು ಹೊಂದಿರುವುದು ಈ ಸಂಸ್ಥೆಯ ಮೇಲೆ ಜನ
ಇಟ್ಟಿರುವ ವಿಶ್ವಾಸವನ್ನು ತೊರಿಸುತ್ತದೆ. ಮೈಕ್ರೋ ಪೈನಾನ್ಸ್
ಕೇತ್ರದಲ್ಲಿ ಈ ಸಂಸ್ಥೆ ದೊಡ್ಡ ಕ್ರಾಂತಿ ಮಾಡಲಿದೆ ಎಂದರು.
ಚಿಗಟೇರಿ ಜಿಲ್ಲಾ ಆಸ್ಪತ್ರೆ ಸಾಮಾನ್ಯ ಆಸ್ಪತ್ರೆಯಲ್ಲ. ದಾವಣಗೆರೆ,
ಬಳ್ಳಾರಿ, ಚಿತ್ರದುರ್ಗ, ಹಾವೇರಿ ಹಾಗೂ ಶಿವಮೊಗ್ಗ ಜಿಲ್ಲೆಯಿಂದ ಬರುವ
ರೋಗಿಗಳಿಗೆ ಇಲ್ಲಿ ಉತ್ತಮ ಚಿಕಿತ್ಸೆ ನೀಡಲಾಗುತ್ತದೆ. ಉಳಿದ
ಜಿಲ್ಲೆಗಳಿಗೆ ಹೋಲಿಸಿದಲ್ಲಿ ನಮ್ಮ ಜಿಲ್ಲೆಯು ಕೋವಿಡ್ ಸಮಯದಲ್ಲಿ
ಅತ್ಯುತ್ತಮ ಕೆಲಸ ಮಾಡಿ ಅನೇಕ ಜೀವಗಳನ್ನು ಉಳಿಸಿದೆ. ಅಂತಹ
ಸಮಯದಲ್ಲಿ ಅನೇಕ ಸಂಘ ಸಂಸ್ಥೆಯವರು ನೀಡಿರುವ
ಸಹಕಾರವನ್ನು ನಾವು ಮರೆಯುವುದಿಲ್ಲ. ಕೋವಿಡ್ ಲಾಕ್‍ಡೌನ್
ಹಾಗೂ ನಂತರದ ಸಮಯದಲ್ಲಿ ಅನೇಕರು ತಮ್ಮ ಕೈಲಾದ
ಸಹಾಯವನ್ನು ಮಾಡಿ ದಾವಣಗೆರೆ ದಾನಿಗಳ ಊರು ಎಂಬುದನ್ನು
ಮತ್ತೊಮ್ಮೆ ತೋರಿಸಿದ್ದಾರೆ ಎಂದು ಜಿಲ್ಲಾಧಿಕಾರಿಗಳು ಹೇಳಿದರು.
       ಈ ಸಂದರ್ಭದಲ್ಲಿ ಡಿಹೆಚ್‍ಓ ಡಾ.ನಾಗರಾಜ್, ಜಿಲ್ಲಾ ಸರ್ಜನ್
ಡಾ.ಜಯಪ್ರಕಾಶ್, ಆರ್‍ಎಂಒ ಡಾ. ಎಸ್‍ಎಸ್.ಕುಲಕರ್ಣಿ, ಡಾ.ಸುಭಾಶ್‍ಚಂದ್ರ.
ಸಂಸ್ಥೆಯ ಪ್ರಾದೇಶಿಕ ವ್ಯವಸ್ಥಾಪಕ ಸಚಿನ್ ಎಂ.ಆರ್., ಸಂಸ್ಥೆಯ
ಕೇಂದ್ರೀಯ ವ್ಯವಸ್ಥಾಪಕ ವೆಂಕಟನಾಯಕ ಎಸ್. ಸಂಸ್ಥೆಯ
ಸಿಬ್ಬಂದಿಗಳು ಹಾಗೂ ಗ್ರಾಮೀಣ ಕೂಟ ಮೈಕ್ರೊ ಪೈನಾನ್ಸ್‍ನ ಕೆಲ
ಗ್ರಾಹಕರು, ಲೀಡ್ ಬ್ಯಾಂಕ್ ಜಿಲ್ಲಾ ವ್ಯವಸ್ಥಾಪಕ ಸುಶ್ರುತ್ ಶಾಸ್ತ್ರಿ
ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *