ಸರ್ಕಾರದ ಮಾರ್ಗಸೂಚಿಯನ್ವಯ ಈ ಬಾರಿಯ ಮಹರ್ಷಿ ವಾಲ್ಮೀಕಿ
ಜಯಂತಿಯನ್ನು ಅ. 20 ರಂದು ಜಿಲ್ಲಾಡಳಿತ ಭವನದ
ತುಂಗಭದ್ರಾ ಸಭಾಂಗಣದಲ್ಲಿ ಸರಳ ಹಾಗೂ ಶ್ರದ್ಧಾ ಭಕ್ತಿಯಿಂದ
ಆಚರಿಸಲಾಗುವುದು, ಯಾವುದೇ ಮೆರವಣಿಗೆಯನ್ನು ಸರ್ಕಾರ
ನಿಷೇಧಿಸಿದ್ದು, ವಾಲ್ಮೀಕಿ ಜಯಂತಿಯನ್ನು ಭಕ್ತಿ ಪೂರ್ವಕವಾಗಿ
ಆಚರಿಸುವ ನಿಟ್ಟಿನಲ್ಲಿ ಸಮಾಜದ ಬಾಂಧವರು ಸೇರಿದಂತೆ ಇನ್ನೂಳಿದ
ಎಲ್ಲ ಸಮಾಜದವರು ಒಟ್ಟುಗೂಡಿ ಕಾರ್ಯಕ್ರಮವನ್ನು
ಯಶಸ್ವಿಗೊಳಿಸಬೇಕು ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ
ಹೇಳಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಮಹರ್ಷಿ
ವಾಲ್ಮೀಕಿ ಜಯಂತಿ ಆಚರಣೆ ಕುರಿತು ಆಯೋಜಿಸಿದ್ದ ಪೂರ್ವಭಾವಿ
ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮಹರ್ಷಿ ವಾಲ್ಮೀಕಿ
ಜಯಂತಿ ಹಾಗೂ ಈದ್‍ಮಿಲಾದ್ ಹಬ್ಬಗಳ ಆಚರಣೆ ಸಂಬಂಧ ಅ. 07
ರಂದು ಸರ್ಕಾರ ಹೊರಡಿಸಿರುವ ಕೋವಿಡ್-19
ಮಾರ್ಗಸೂಚಿಗಳನ್ವಯ ವಾಲ್ಮೀಕಿ ಜಯಂತಿ ಹಾಗೂ ಈದ್‍ಮಿಲಾದ್
ಆಚರಣೆಯನ್ನು ಸರಳವಾಗಿ ಹಾಗೂ ಅರ್ಥಪೂರ್ಣವಾಗಿ ಆಚರಿಸಬೇಕಿದೆ.
ಎಲ್ಲಾ ಮಹಾನ್ ಚೇತನರ ಆಚರಣೆಯನ್ನು ಕೋವಿಡ್ ಕಾರಣದಿಂದ
ಜಿಲ್ಲಾಡಳಿತ ಭವನದಲ್ಲಿಯೇ ಆಚರಿಸಲಾಗುತ್ತಿದೆ. ಹೀಗಾಗಿ ಅ.20
ರಂದು ನಡೆಯುವ ವಾಲ್ಮೀಕಿ ಜಯಂತಿ ಆಚರಣೆಯನ್ನು
ಜಿಲ್ಲಾಡಳಿತ ಭವನದ ತುಂಗಭದ್ರ ಸಭಾಂಗಣದಲ್ಲಿ ಭಕ್ತಿ
ಪೂರ್ವಕವಾಗಿ ಆಚರಿಸುವ ಜೊತೆಗೆ, ವಿಶೇಷ ಚಿಂತಕರಿಂದ ಅವರ
ಜೀವನಚರಿತ್ರೆಯನ್ನು ಸಮಾಜಕ್ಕೆ ತಿಳಿಸುವಂತಹ ಕಾರ್ಯಕ್ರಮ
ಏರ್ಪಡಿಸಲಾಗುವುದು, ಇದು ಎಲ್ಲರಿಗೂ ಪ್ರೇರಣೆಯಾಗಬೇಕು
ಹಾಗೂ ಎಲ್ಲಾ ಸಮುದಾಯದವರು ಕಾರ್ಯಕ್ರಮಕ್ಕೆ ಹಾಜರಾಗಿ
ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.
ಸಾಮೂಹಿಕ ಮೆರವಣಿಗೆ ನಿಷೇಧ: ವಾಲ್ಮೀಕಿ ಜಯಂತಿ
ಆಚರಣೆಯನ್ನು ಸರಳವಾಗಿ ಆಚರಿಸಬೇಕು ಹಾಗೂ ಯಾವುದೇ
ಸಾಮೂಹಿಕ ಮೆರವಣಿಗೆಯನ್ನು ಮಾಡುವಂತಿಲ್ಲ ಮತ್ತು
ಮಾಸ್ಕ್‍ನ್ನು ಕಡ್ಡಾಯವಾಗಿ ಧರಿಸಬೇಕು, ಪ್ರವಚನ, ಸಾಂಸ್ಕøತಿಕ
ಕಾರ್ಯಕ್ರಮ, ಸಭೆ ಸಮಾರಂಭಗಳಲ್ಲಿ 100 ಕ್ಕಿಂತ ಹೆಚ್ಚು
ಜನರು ಸೇರುವಂತಿಲ್ಲ, ಸಾಮಾಜಿಕ ಅಂತರವನ್ನು ಪಾಲಿಸಬೇಕು,
ಸಾರ್ವಜನಿಕ ಪ್ರದೇಶಗಳಲ್ಲಿ ಧ್ವನಿವರ್ಧಕಗಳು ಅಥವಾ ಡಿಜಿಟಲ್ ಸೌಂಡ್
ಸಿಸ್ಟಂಗಳನ್ನು ಬಳಸುವಂತಿಲ್ಲ, 60 ವರ್ಷಕ್ಕಿಂತ ಮೇಲ್ಪಟ್ಟ
ನಾಗರಿಕರು ಹಾಗೂ 10 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು
ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವÀಂತಿಲ್ಲ ಎಂದು ಈಗಾಗಲೆ ಸರ್ಕಾರ

ಮಾರ್ಗಸೂಚಿಯಲ್ಲಿ ಸ್ಪಷ್ಟಪಡಿಸಿದ್ದು, ಇದರನ್ವಯ
ಜಿಲ್ಲೆಯಲ್ಲಿಯೂ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಆಚರಿಸೋಣ
ಎಂದು ಜಿಲ್ಲಾಧಿಕಾರಿಗಳು ಹೇಳಿದರು. ಸಭೆಯಲ್ಲಿ ಉಪಸ್ಥಿತರಿದ್ದ,
ಸಮಾಜದ ಮುಖಂಡರು ಪ್ರತಿಕ್ರಿಯಿಸಿ, ಸರ್ಕಾರದ ಆದೇಶವನ್ನು
ಪಾಲಿಸುವುದು ನಮ್ಮೆಲ್ಲರ ಕರ್ತವ್ಯವಾಗಿದ್ದು, ಸರ್ಕಾರದ
ಮಾರ್ಗಸೂಚಿಯಂತೆಯೇ ಕಾರ್ಯಕ್ರಮ ಆಯೋಜಿಸಲು ಸಮ್ಮತಿ
ಸೂಚಿಸಿದರು.


ಸಭೆಯಲ್ಲಿ ಭಾಗವಹಿಸಿದ್ದ ನಿವೃತ್ತ ಉಪನ್ಯಾಸಕ
ಎ.ಬಿ.ರಾಮಚಂದ್ರಪ್ಪ ಮಾತನಾಡಿ, ಮಹರ್ಷಿ ವಾಲ್ಮೀಕಿ ಒಂದು
ಸಮುದಾಯದ ನಾಯಕರಲ್ಲ. ಇಡೀ ಸಮಾಜದ ನಾಯಕ. ಇಂತಹ
ಮಹಾನ್ ಚೇತನರ ಜನ್ಮದಿನದ ಆಚರಣೆಗೆ ಎಲ್ಲಾ
ಸಮುದಾಯದವರು ಜಾತ್ಯತೀತವೆನ್ನದೇ ಸಾರ್ವತ್ರಿಕವಾಗಿ ಎಲ್ಲರೂ
ಕಾರ್ಯಕ್ರಮಕ್ಕೆ ಆಗಮಿಸಿ ಯಶಸ್ವಿಗೊಳಿಸಬೇಕು ಎಂದರು.
ಇದಕ್ಕೆ ಜಿಲ್ಲಾಧಿಕಾರಿಗಳು ಪ್ರತಿಕ್ರಿಯಿಸಿ, ಮನುಕುಲದ ಉದ್ಧಾರಕ್ಕೆ
ಶ್ರಮಿಸಿದ ಮಹಾನ್ ನಾಯಕರನ್ನು ಎಲ್ಲ ಸಮಾಜದವರು, ತಮ್ಮ
ತಮ್ಮ ಸಮುದಾಯಕ್ಕೆ ಕಟ್ಟಿಹಾಕಿ ಸೀಮಿತವಾಗುವಂತೆ
ಮಾಡುವುದು ಸರಿಯಲ್ಲ. ಇಂತಹ ಸಂಸ್ಕøತಿ, ಸಮಾಜದ ದ್ವಂದ್ವ
ನಿಲುವು ಬದಲಾಗಬೇಕು, ಆಗಲೇ ಸಮ ಸಮಾಜ ನಿರ್ಮಾಣವಾಗಲು
ಸಾಧ್ಯ, ಜಗಜ್ಯೋತಿ ಬಸವೇಶ್ವರರು, ಅಲ್ಲಮಪ್ರಭು ಮುಂತಾದ
ಶರಣರು ಕೂಡ ಇದನ್ನೇ ಪ್ರತಿಪಾದಿಸಿದ್ದಾರೆ. ವಾಲ್ಮೀಕಿ ಜಯಂತಿ
ಆಚರಣೆಯಲ್ಲಿ ಎಲ್ಲ ಸಮಾಜದವರೂ ಪಾಲ್ಗೊಳ್ಳುವ ಮೂಲಕ
ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವಂತಾಗಲಿ ಎಂದು ಆಶಿಸಿದರು.
ಸಮಾಜದ ಮುಖಂಡರಾದ ಆಂಜನೇಯ ಗುರೂಜಿ ಮಾತನಾಡಿ,
ಸರ್ಕಾರದ ಮಾರ್ಗಸೂಚಿಯಂತೆ ಸರಳ ಆಚರಣೆಗೆ ನಾವು ಎಲ್ಲ
ಸಹಕಾರ ನೀಡುತ್ತೇವೆ, ಜಿಲ್ಲಾಡಳಿತ ಭವನ ಆವರಣದಲ್ಲಿ
ವಾಲ್ಮೀಕಿಯವರ ಮೂರ್ತಿ ಪ್ರತಿಷ್ಠಾಪನೆ ಮಾಡಬೇಕು ಎಂದು ಈ
ಸಮದರ್ಭದಲ್ಲಿ ಅವರು ಮನವಿ ಮಾಡಿದರು. ಸಭೆಯಲ್ಲಿ ಸಮಾಜದ
ಮುಖಂಡರುಗಳಾದ ಮಲ್ಲಿಕಾರ್ಜುನ, ಅಣಜಿ ಅಂಜನಪ್ಪ, ವೀರಣ್ಣ,
ಹಾಲೇಶಪ್ಪ, ವಿಜಯಲಕ್ಷ್ಮಿ ಮುಂತಾದವರು ಭಾಗವಹಿಸಿದ್ದರು. ಜಿಲ್ಲಾ
ಪಂಚಾಯತ್ ಉಪಕಾರ್ಯದರ್ಶಿ ಆನಂದ್, ಅಪರ ಜಿಲ್ಲಾಧಿಕಾರಿ ಪೂಜಾರ್
ವೀರಮಲ್ಲಪ್ಪ, ಡಿವೈಎಸ್‍ಪಿ ಬಸವರಾಜ್ ಸೇರಿದಂತೆ ವಿವಿಧ ಇಲಾಖೆಗಳ
ಅಧಿಕಾರಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *