ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಗಳಾದ
ಎಂ.ಪಿ.ರೇಣುಕಾಚಾರ್ಯ ಅವರು ಅ.13 ರಿಂದ 19 ರವರೆಗೆ ಜಿಲ್ಲಾ ಪ್ರವಾಸ
ಕೈಗೊಳ್ಳಲಿದ್ದಾರೆ.
ಅ.13 ರ ಬೆಳಿಗ್ಗೆ 10.30 ಕ್ಕೆ ಹೊನ್ನಾಳಿಗೆ ತೆರಳಿ,
ಮುಖ್ಯಮಂತ್ರಿಗಳು, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್
ರಾಜ್ ಸಚಿವರು ಹಾಗೂ ಕಂದಾಯ ಸಚಿವರ ಪ್ರವಾಸ
ಕಾರ್ಯಕ್ರಮದ ಪೂರ್ವಸಿದ್ಧತೆಗಾಗಿ ತಾಲ್ಲೂಕು ಕಚೇರಿಯಲ್ಲಿ
ಜರುಗುವ ಹೊನ್ನಾಳಿ ಹಾಗೂ ನ್ಯಾಮತಿ ತಾಲ್ಲೂಕುಗಳ ತಾಲ್ಲೂಕು
ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಪಾಲ್ಗೊಳ್ಳುವರು. ಮಧ್ಯಾಹ್ನ
12.30 ಗಂಟೆಗೆ ಸುರಹೊನ್ನೆ, ಮಧ್ಯಾಹ್ನ 1.45 ಗಂಟೆಗೆ ನ್ಯಾಮತಿ,
ಮಧ್ಯಾಹ್ನ 04 ಗಂಟಗೆ ಕುಂದೂರಿಗೆ ತೆರಳಿ ಗ್ರಾಮವಾಸ್ತವ್ಯ
ಕಾರ್ಯಕ್ರಮದ ಪೂರ್ವಸಿದ್ಧತೆ ಪರಿಶೀಲನೆ ನಡೆಸಿ, ರಾತ್ರಿ 7.30
ಗಂಟೆಗೆ ಹೊನ್ನಾಳಿಗೆ ತೆರಳಿ ವಾಸ್ತವ್ಯ ಮಾಡುವರು.
ಅ.14 ರಿಂದ 15 ರವರೆಗೆ ಕುಂದೂರು ಮತ್ತು ಸುರಹೊನ್ನೆ
ಗ್ರಾಮಗಳಿಗೆ ತೆರಳಿ ಕಂದಾಯ ಸಚಿವರ ಗ್ರಾಮ ವಾಸ್ತವ್ಯ
ಕಾರ್ಯಕ್ರಮ ಹಾಗೂ ಮುಖ್ಯಮಂತ್ರಿಗಳ ಪ್ರವಾಸ
ಕಾರ್ಯಕ್ರಮದ ಪೂರ್ವ ಸಿದ್ಧತೆ ಬಗ್ಗೆ ಪರಿಶೀಲನೆ ನಡೆಸಿ, ರಾತ್ರಿ 7.30
ಗಂಟೆಗೆ ಹೊನ್ನಾಳಿಗೆ ತೆರಳಿ ವಾಸ್ತವ್ಯ ಮಾಡುವರು.
ಅ.16 ರ ಶನಿವಾರ ಹೊನ್ನಾಳಿಯಿಂದ ಹೊರಟು ಬೆಳಿಗ್ಗೆ 9.15ಕ್ಕೆ
ಸುರಹೊನ್ನೆಗೆ ಆಗಮಿಸುವರು. ಬೆಳಿಗ್ಗೆ 10.30 ಕ್ಕೆ ನ್ಯಾಮತಿ
ತಾಲ್ಲೂಕಿನ ಸುರಹೊನ್ನೆ ಗ್ರಾಮದ ಸರ್ಕಾರಿ ಪದವಿ ಪೂರ್ವ ಮಹಿಳಾ
ಕಾಲೇಜಿನಲ್ಲಿ ಏರ್ಪಡಿಸಿರುವ ಮುಖ್ಯಮಂತ್ರಿಗಳು, ಕಂದಾಯ
ಸಚಿವರು, ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಸಚಿವರು
ಹಾಗೂ ದಾವಣಗೆರೆ ಲೋಕಸಭಾ ಸದಸ್ಯರು ಇವರಿಂದ ಸರ್ಕಾರದ
ವಿವಿಧ ಸವಲತ್ತುಗಳನ್ನು ಫಲಾನುಭವಿಗಳಿಗೆ ವಿತರಣೆ, ವಿವಿಧ
ಅಭಿವೃದ್ಧಿ ಕಾಮಗಾರಿಗಳ ಶಂಕು ಸ್ಥಾಪನೆ ಹಾಗೂ ಉದ್ಘಾಟನೆಯನ್ನು
ನೆರವೇರಿಸುವ ಕಾರ್ಯಕ್ರಮದಲ್ಲಿ ಭಾಗವಹಿಸುವರು.
ಅಂದು ಮಧ್ಯಾಹ್ನ 2.15 ಕ್ಕೆ ಕುಂದೂರು ಗ್ರಾಮಕ್ಕೆ ಆಗಮಿಸಿ
ಮಧ್ಯಾಹ್ನ 3 ಕ್ಕೆ ಗ್ರಾಮದ ಕಸ್ತೂರಭ ವಸತಿ ಶಾಲೆಯಲ್ಲಿ
ಮುಖ್ಯಮಂತ್ರಿಗಳು ಗ್ರಾಮ ವಾಸ್ತವ್ಯವನ್ನು ಉದ್ಘಾಟಿಸಲಿರುವ
ಹಾಗೂ ಸಾಮಾಜಿಕ ಭದ್ರತಾ ಯೋಜನೆಗಳ ಸವಲತ್ತುಗಳನ್ನು
ಫಲಾನುಭವಿಗಳಿಗೆ ವಿತರಣೆ ಹಾಗೂ ವಿವಿಧ ಅಭಿವೃದ್ಧಿ
ಕಾಮಗಾರಿಗಳ ಶಂಕುಸ್ಥಾಪನೆ ಮತ್ತು ಉದ್ಘಾಟನೆ ನೆರವೇರಿಸುವ
ಹಾಗೂ ಕಂದಾಯ ಸಚಿವರು ಕೈಗೊಳ್ಳಲಿರುವ ಗ್ರಾಮವಾಸ್ತವ್ಯ
ಕಾರ್ಯಕ್ರಮದಲ್ಲಿ ಪಾಳ್ಗೊಳ್ಳುವರು. ಗ್ರಾಮದ ಕಸ್ತೂರಭಾ
ಕಾಲೇಜಿನಲ್ಲಿ ವಾಸ್ತವ್ಯ ಮಾಡುವರು.
ಅ.17 ಮತ್ತು 18 ರಂದು ಹೊನ್ನಾಳಿ ಮತ್ತು ನ್ಯಾಮತಿ
ತಾಲ್ಲೂಕಿನ ಗ್ರಾಮಗಳಲ್ಲಿ ಪ್ರವಾಸಗೊಂಡು ರಾತ್ರಿ
ಹೊನ್ನಾಳಿಯಲ್ಲಿ ವಾಸ್ತವ್ಯ ಮಾಡುವರು.
ಅ.19 ರ ಮಂಗಳವಾರ ಬೆಳಿಗ್ಗೆ 10 ಗಂಟೆಗೆ ನ್ಯಾಮತಿಯ
ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ ನಿಕಟಪೂರ್ವ
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ನಗರಾಭಿವೃದ್ಧಿ ಸಚಿವರು,
ಆರೋಗ್ಯ ಸಚಿವರು, ಗ್ರಾಮೀಣಾಭಿವೃದ್ಧಿ ಸಚಿವರು, ಲೋಕಸಭಾ
ಸದಸ್ಯರು ಭಾಗವಹಿಸಿ, ಕೊರೊನಾ ವಾರಿಯರ್ಸ್‍ಗಳಿಗೆ ಅಭಿನಂದನಾ
ಕಾರ್ಯಕ್ರಮದಲ್ಲಿ ಭಾಗವಹಿಸುವರು. ಸಂಜೆ 4.15 ಕ್ಕೆ ಹೊನ್ನಾಳಿಗೆ
ತೆರಳಿ ವಾಸ್ತವ್ಯ ಮಾಡುವರು ಎಂದು ವಿಶೇಷ ಕರ್ತವ್ಯಾಧಿಕಾರಿ
ತಿಳಿಸಿದ್ದಾರೆ.