ದಾವಣಗೆರೆ ಜಿಲ್ಲೆ ನ್ಯಾಮತಿ ತಾಲೂಕು ದಿನಾಂಕ 12 /10/ 2021 ರಂದು ಇಂದು ಕಂಕನಹಳ್ಳಿ ಗ್ರಾಮದಲ್ಲಿ ಶ್ರೀ ಶ್ರೀ ಪಂಡಿತರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳ ದಿವ್ಯಸಾನಿಧ್ಯದಲ್ಲಿ ದಿವಂಗತ ಶರಣ ಪಾಲ್ದಾರ್ ಗೌಡ್ರು ರುದ್ರಪ್ಪ ಶಿವಾಧೀನರಾಧಾ ಪ್ರಯುಕ್ತ ಮೃತರ ಶಾಂತಿಗಾಗಿ ಇಂದು ಕೈಲಾಸ ಶಿವಗಣಾರಾಧನೆ ಮತ್ತು ಸರ್ವ ಶರಣ ಸಮ್ಮೇಳ ಸಮಾರಂಭದ ಉದ್ಘಾಟನೆಯನ್ನು ಮಾಜಿ ಶಾಸಕರಾದ ಡಿ ಜಿ ಶಾಂತನಗೌಡ್ರು ದೀಪವನ್ನು ಬೆಳಗಿಸುವುದರ ಮೂಲಕ ಚಾಲನೆ ನೀಡಲಾಯಿತು.
ನಂತರ ಮಾತನಾಡಿದ ಡಿ ಜಿ ಶಾಂತನಗೌಡ ರವರು ಮಾತನಾಡುತ್ತಾ ಪಂಡಿತಾರಾಧ್ಯರು ಕಂಕನಹಳ್ಳಿ ಗ್ರಾಮಕ್ಕೆ ಬಂದು ಪಾಲ್ ದಾರ್ ಗೌಡ್ರು ರವರ ಕೈಲಾಸ ಶಿವಗಣಾರಾಧನೆ ಹಾಗೂ ಸರ್ವ ಶರಣ ಸಮ್ಮೇಳನಕ್ಕೆ ಬಂದಿರುವುದು ಅವರ ಕುಟುಂಬಕ್ಕೂ ಹಾಗೂ ಕಂಕನಹಳ್ಳಿ ಗ್ರಾಮಕ್ಕೂ ನನ್ನ ವೈಯಕ್ತಿಕವಾಗಿ ನಮ್ಮೆಲ್ಲರ ಸೌಭಾಗ್ಯ ಎಂದು ಹೇಳಿದರು.
ಈಗಿನ ಯುವಕರುಗಳು ಮದ್ಯವ್ಯಸನಿಗಳು ಆಗುತ್ತಿದ್ದಾರೆ ,ಇದನ್ನು ಬಿಡಿಸಲಿಕ್ಕೆ ನಮ್ಮ ಕೈಯಿಂದ ಸಾಧ್ಯವಿಲ್ಲ ಗುರುಗಳಾದ ತಾವುಗಳು ತಮ್ಮ ವಾಣಿಯ ಮುಖಾಂತರ ಸಮಾಜಕ್ಕೆ ಸಂದೇಶ ತಿಳಿಸುವಂತಾಗಬೇಕು ಎಂದು ಗುರುಗಳಿಗೆ ಮನವಿ ಮಾಡಿಕೊಂಡರು.
ಪಾಲ್ದಾರ್ ಗೌಡ್ರು ರುದ್ರಪ್ಪನವರು ಸುಮಾರು ವರ್ಷಗಳಿಂದ ರೈತಾಪಿ ಕಾರ್ಮಿಕರಾಗಿ ಕೆಲಸವನ್ನು ಮಾಡುತ್ತಾ ತಮ್ಮ ಸ್ವಂತ ದುಡಿಮೆಯಿಂದ ಜಮೀನನ್ನು ಖರೀದಿ ಮಾಡಿಕೊಂಡು ದಾಂಪತ್ಯ ಜೀವನಕ್ಕೆ ಕಾಲಿಟ್ಟು ಏಳು ಜನ ಗಂಡು ಮಕ್ಕಳು ಮೂರು ಜನ ಹೆಣ್ಣು ಮಕ್ಕಳನ್ನು ಹೆತ್ತು ಪ್ರತಿಯೊಬ್ಬರಿಗೂ ಬದುಕಲಿಕ್ಕೆ ಹಾದಿಯನ್ನು ತೋರಿಸಿ ಸುಮಾರು 105 ವರ್ಷಗಳ ಕಾಲ ಬದುಕಿ ಮರಣದ ನಂತರವೂ ಜನರ ಮನಸ್ಸಿನಲ್ಲಿ ಬದುಕಿರುವುದು ಅವರು ದೇವರ ಸ್ಥಾನದಲ್ಲಿದ್ದಾರೆ ಎಂದು ತಿಳಿಸಿದರು.


ನಂತರ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು ಆಶೀರ್ವಚನ ಪ್ರಾರಂಭ ಮಾಡಿ ಹಾಲಪ್ಪ ಮತ್ತು ಹಾಲಮ್ಮ ಹೆಸರನ್ನು ಇಟ್ಟಿರುತ್ತಾರೆ ಅವರ ಮನೆಯಲ್ಲಿ ಹಾಲು ವಂತ ಆಗಿರುವುದಿಲ್ಲ.
ಶೀಲವಂತ ಹೆಸರು ಇಟ್ಟಿರುತ್ತಾರೆ. ಅವರು ಶೀಲವಂತರ್ ಆಗಿರುವುದಿಲ್ಲ ಗುಣವಂತ ಹೆಸರನ್ನು ಇಟ್ಟಿರುತ್ತಾರೆ. ಅವರು ಗುಣವಂತ ಆಗಿರುವುದಿಲ್ಲ .ಒಂದು ಕಡೆ ಬಸವಣ್ಣನವರ ಮಾತು ಹೇಳಿರುತ್ತಾರೆ .ನಡೆ ನಡೆ ನಡೆದಂತನಕ್ಕ ಇದರ ಅರ್ಥ ನುಡಿದಂತೆ ನಾವು ನಡೆಯುದಿಲ್ಲ .ನಾವುಗಳು ನುಡಿದಂತೆ ನಡಡೆದರೆ ನಮ್ಮ ಬದುಕು ಪಾವನವಾಗುತ್ತದೆ. ಜನರ ದುಡಿಮೆಯ ಜೊತೆಗೆ ಒಳ್ಳೆಯ ಸಂಸ್ಕಾರ ವನ್ನು ಕಲಿತು ನಮ್ಮ ಮಕ್ಕಳಿಗೆ ಒಳ್ಳೆಯ ನಡೆ ನುಡಿ ಆಚಾರ ವಿಚಾರ ಕಲಿಸುವಂತಹ ಆಗಬೇಕು. ರಸ್ತೆ ಮತ್ತು ಮನೆ ಸುಚಿತ್ವ ಆಗುವುದು ಮುಖ್ಯವಲ್ಲ ,ಮೊದಲು ಜನರ ಮನಸ್ಸು ಶುದ್ದಿಯಾಗಬೇಕು ಎನ್ನುತ್ತ ಮಾತನ್ನು ಮುಂದುವರಿಸಿ ಈಗಿನ ಗುರುಗಳು ಆದಂತವರು ಡಂಬಾಚಾರ ತೋರಿದರೆ ಸಾಲದು ,ಭಕ್ತರನ್ನು ಸರಿಯಾದ ದಾರಿಗೆ ತರುವಂತಹ ಕೆಲಸ ಮಾಡಿದರೆ ಮಾತ್ರ ಅದು ಗುರುಗಳ ಕರ್ತವ್ಯವಾಗುತ್ತದೆ ಎಂದು ತಿಳಿಸುತ್ತಾ ಫಾಲ್ದರ್ ಗೌಡ್ರು ರುದ್ರಪ್ಪನವರ್ ಕುಟುಂಬದ ಸರ್ವ ಸದಸ್ಯರುಗಳಿಗೆ ಹಾಗೂ ಅಲ್ಲಿ ಸೇರುವ ಬಂಧುಗಳಿಗೆ ಮತ್ತು ಶರಣ ಶರಣಿಯರುಗಳಿಗೆ ಆಶೀರ್ವಚನವನ್ನು ನೀಡಿದರು.

ಉಪಸ್ಥಿತಿಯಲ್ಲಿ:- ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು, ಡಿ.ಜಿ ಶಾಂತನಗೌಡ್ರು ಮಾಜಿ ಶಾಸಕರು, ನ್ಯಾಮತಿ ತಾಲೂಕಿನ ಸಾಧು ವೀರಶೈವ ಸಮಾಜದ ಅಧ್ಯಕ್ಷರಾದ ಶಿವಣ್ಣ ಕೋಡಿಕೊಪ್ಪ ನವರು, zp ವಿಶ್ವನಾಥ್, ಜಿ ಆರ ಪರಮೇಶ್ವರಪ್ಪ ,ಮತ್ತು ಸಹೋದರರು ಹೆಂಡೇರ ರುದ್ರೇಶ್ ಣ್ಣ ,ಎ ಜಿ ಪಂಚಪ್ಪ ಗೌಡರು ,ಮಲ್ಲಿಕಾರ್ಜುನ್ ದಾವಣಗೆರೆ ,ಶರಣ ಶ್ರೀ ಎಸ್ ಟಿ ಗಂಗಾಧರ, ಹಾಗೂ ಪಾಲ್ದಾರ್ ಗೌಡ್ರು ರುದ್ರಪ್ಪನವರ ಅಣ್ಣ-ತಮ್ಮಂದಿರು ಮಕ್ಕಳು ಸೊಸೆಯಂದಿರು ಮೊಮ್ಮಕ್ಕಳು ಮರಿ ಮೊಮ್ಮಕ್ಕಳು ಮತ್ತು ಮಲ್ಲಜ್ಜಿ ವಂಶಸ್ಥರು ಅಲ್ಲಿ ಸೇರಿರುವ ಸರ್ವ ಶರಣರು ಹಾಗೂ ಕಂಕನಹಳ್ಳಿ ಗ್ರಾಮದ ಹಿರಿಯರು ಮತ್ತು ಕಿರಿಯರು ಸಹ ಭಾಗಿಯಾಗಿದ್ದರು.

Leave a Reply

Your email address will not be published. Required fields are marked *