ಜಿಲ್ಲೆಯಲ್ಲಿ  ಅ.11 ರಂದು 23.23 ಮಿ.ಮೀ ಸರಾಸರಿ ಉತ್ತಮ
ಮಳೆಯಾಗಿದ್ದು, ಒಟ್ಟು ರೂ.59.35 ಲಕ್ಷ ರೂ. ನಷ್ಟದ ಅಂದಾಜು
ಮಾಡಲಾಗಿದೆ.
ಚನ್ನಗಿರಿ ತಾಲ್ಲೂಕಿನಲ್ಲಿ 24.87 ಮಿ.ಮೀ, ದಾವಣಗೆರೆ 8.31 ಮಿ.ಮೀ,
ಹರಿಹರ 50.25 ಮಿ.ಮೀ, ಹೊನ್ನಾಳಿ 18.70 ಮಿ.ಮೀ, ಜಗಳೂರು
ತಾಲ್ಲೂಕಿನಲ್ಲಿ 14.06 ಮಿ.ಮೀ ವಾಸ್ತವ ಮಳೆಯಾಗಿದೆ.
ಹರಿಹರ ತಾಲ್ಲೂಕು ವ್ಯಾಪ್ತಿಯಲ್ಲಿ 6 ಪಕ್ಕಾ ಮನೆಗೆ ತೀವ್ರ
ಹಾನಿಯಾಗಿದ್ದು, ರೂ.22.00 ಲಕ್ಷ, 1 ಪಕ್ಕಾ ಮನೆ ಭಾಗಶ:
ಹಾನಿಯಾಗಿದ್ದು ರೂ.0.80 ಲಕ್ಷ ಹಾಗೂ 2 ಕಚ್ಚಾ ಮನೆ ತೀವ್ರ
ಹಾನಿಯಾಗಿದ್ದು, ರೂ.10.00 ಲಕ್ಷ, 1 ದನದ ಕೊಟ್ಟಿಗೆ ಹಾನಿಯಾಗಿದ್ದು
ರೂ.0.05 ಲಕ್ಷ ಒಟ್ಟು ರೂ.32.85 ಲಕ್ಷ ಅಂದಾಜು ನಷ್ಟ
ಸಂಭವಿಸಿರುತ್ತದೆ 
ನ್ಯಾಮತಿ ತಾಲ್ಲೂಕು ವ್ಯಾಪ್ತಿಯಲ್ಲಿ 2 ಪಕ್ಕಾ ಮನೆ ಭಾಗಶ:
ಹಾನಿಯಾಗಿದ್ದು, ರೂ.0.50 ಲಕ್ಷ ಅಂದಾಜು ನಷ್ಟ ಸಂಭವಿಸಿರುತ್ತದೆ.
ಚನ್ನಗಿರಿ ತಾಲ್ಲೂಕು ವ್ಯಾಪ್ತಿಯಲ್ಲಿ 3 ಪಕ್ಕಾ ಮನೆ
ತೀವ್ರಹಾನಿಯಾಗಿದ್ದು ರೂ.7.20 ಲಕ್ಷ, 6 ಪಕ್ಕಾ ಮನೆ ಭಾಗಶ:
ಹಾನಿಯಾಗಿದ್ದು, ರೂ. 3.00 ಲಕ್ಷ ಮತ್ತು 9 ಕಚ್ಚಾ ಮನೆಗೆ
ತೀವ್ರಹಾನಿಯಾಗಿದ್ದು, ರೂ.12.80 ಲಕ್ಷ, 4 ಕಚ್ಚಾ ಮನೆ ಭಾಗಶ:
ಹಾನಿಯಾಗಿದ್ದು, ರೂ. 1.80 ಲಕ್ಷ ಹಾಗೂ 10 ಎಕರೆ ಮೆಕ್ಕೆಜೋಳದ
ಬೆಳೆ ಹಾನಿಯಾಗಿದ್ದು, ರೂ. 1.20 ಲಕ್ಷ ಒಟ್ಟು 26.00 ಲಕ್ಷ ಅಂದಾಜು ನಷ್ಟ
ಸಂಭವಿಸಿರುತ್ತದೆ.
ಸರ್ಕಾರದ ಮಾರ್ಗಸೂಚಿ ಅನ್ವಯ ಸಂತ್ರಸ್ತರಿಗೆ ಪರಿಹಾರ
ವಿತರಿಸಲು ಕ್ರಮ ವಹಿಸಲಾಗುವುದೆಂದು ಜಿಲ್ಲಾಧಿಕಾರಿಗಳು
ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *