ದಾವಣಗೆರೆ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಬರುವ ವಿವಿಧ
ಸ್ಥಳಗಳಲ್ಲಿ ನಿತ್ಯ ಹಾಗೂ ವಾರದ ಸಂತೆಗಳಲ್ಲಿ ಬೀದಿ ಬದಿ
ವ್ಯಾಪಾರಸ್ತರಿಂದ ಸುಂಕ ವಸೂಲಾತಿ ಮಾಡಲು ನೀಡಿದ
ಕಾರ್ಯದೇಶದ ಅವಧಿ ಮುಕ್ತಾಯವಾಗಿದ್ದು, ಸುಂಕ ವಸೂಲಾತಿ
ಹಕ್ಕಿನ ಬಹಿರಂಗ ಹರಾಜು ಪ್ರಕ್ರಿಯೆ ಕೋವಿಡ್-19 ಮತ್ತು ಇತರೆ
ಕಾರಣಗಳಿಂದ ಪ್ರಕ್ರಿಯೆಯಲ್ಲಿರುತ್ತದೆ. ಆದ್ದರಿಂದ ಮಹಾನಗರ
ಪಾಲಿಕೆಯ ಗುರುತಿನ ಚೀಟಿ ಇಲ್ಲದೆ ಜಕಾತಿ ವಸೂಲಾತಿ ಮಾಡುವುದು
ಕಂಡುಬಂದಲ್ಲಿ ಸುಂಕ ನೀಡಬಾರದು ಹಾಗೂ ಅಂತಹವರ
ವಿವರಗಳನ್ನು ಪಾಲಿಕೆಗೆ ನೀಡಬಹುದೆಂದು ಮಹಾನಗರ ಪಾಲಿಕೆ
ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *