ಮಂಜೂರು ಮಾಡಿ : ಡಾ.ಜಿ.ಎಂ.ಸಿದ್ದೇಶ್ವರ

ಕೇಂದ್ರ ಸರ್ಕಾರ ಬಡವರು ಸ್ವಾವಲಂಬಿಗಳಾಗಲು ಅರ್ಹ
ಫಲಾನುಭವಿಗಳಿಗೆ ಅನುಕೂಲವಾಗಲಿ ಎಂದು ಯೋಜನೆಗಳನ್ನು
ರೂಪಿಸಿದೆ. ಬ್ಯಾಂಕ್‍ಗಳಿಗೆ ಅರ್ಜಿ ಸಲ್ಲಿಕೆಯಾದ ಕೆಲ ದಿನಗಳಲ್ಲಿ
ಬ್ಯಾಂಕ್‍ಗಳು ಸಾಲ ಸೌಲಭ್ಯ ಒದಗಿಸಬೇಕು. ಆದರೆ ಬ್ಯಾಂಕ್‍ಗಳು
ತಿಂಗಳುಗಟ್ಟಲೆ ಅರ್ಜಿಯನ್ನೇ ವಿಲೇವಾರಿ ಮಾಡದೆ ವಿಳಂಬ ಧೋರಣೆ
ಅನುಸರಿಸುತ್ತಿರುವುದು ಸರಿಯಲ್ಲ. ಇಂತಹ ಅರ್ಜಿಗಳನ್ನು
ಬ್ಯಾಂಕ್‍ಗಳು ಒಂದು ತಿಂಗಳಲ್ಲಿ ಇತ್ಯರ್ಥಪಡಿಸಬೇಕು ಎಂದು
ಸಂಸದ ಡಾ. ಜಿ.ಎಂ. ಸಿದ್ದೇಶ್ವರ ಅವರು ಬ್ಯಾಂಕ್ ಅಧಿಕಾರಿಗಳಿಗೆ ಸೂಚನೆ
ನೀಡಿದರು.
ಬುಧವಾರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಜಿಲ್ಲಾ
ಮಟ್ಟದ ಪುನರಾವಲೋಕನ ಸಮಿತಿ ಸಭೆಯಲ್ಲಿ ಭಾಗವಹಿಸಿ
ಮಾತನಾಡಿದ ಅವರು, ಪ್ರಧಾನಮಂತ್ರಿ ಜೀವನ್ ಜ್ಯೋತಿ ಬಿಮಾ,
ಪ್ರಧಾನಮಂತ್ರಿ ಸುರಕ್ಷಾ ಬಿಮಾ ಯೋಜನೆಗಳ ಬಗೆಗೆ ಹೆಚ್ಚು
ಪ್ರಚುರಪಡಿಸಬೇಕು. ಕೆಲವೊಮ್ಮೆ ಬೆಳೆ ವಿಮೆ ಯೋಜನೆಯಡಿ
ಮಂಜೂರಾಗಿರುವ ವಿಮಾ ಮೊತ್ತದ ಬಗ್ಗೆ ಸಂಬಂಧಿತÀ
ಫಲಾನುಭವಿಗಳಿಗೇ ಮಾಹಿತಿ ಇರುವುದಿಲ್ಲ. ಪರಿಹಾರ ಮೊತ್ತ ಬ್ಯಾಂಕ್
ಖಾತೆಗೆ ಜಮೆ ಆಗಿರುವ ಬಗ್ಗೆ ಬ್ಯಾಂಕ್ ಅಧಿಕಾರಿಗಳು ಸಂಬಂಧಿತರÀ
ಗಮನಕ್ಕೆ ತರಬೇಕು ಎಂದು ಸೂಚಿಸಿದರು.
ಲೀಡ್‍ಬ್ಯಾಂಕ್ ವ್ಯವಸ್ಥಾಪಕ ಸುಶ್ರುತ್ ಡಿ. ಶಾಸ್ತ್ರಿ ಪ್ರತಿಕ್ರಿಯಿಸಿ
ಕೇಂದ್ರ ಸರ್ಕಾರ ಕೃಷಿ ಉತ್ಪನ್ನಗಳ ಆಧರಿಸಿ ಸಣ್ಣ ಪ್ರಮಾಣದ
ಆಹಾರ ಸಂಸ್ಕರಣಾ ಘಟಕಗಳ ಪ್ರಾರಂಭಿಸುವ ಮೂಲಕ ರೈತಾಪಿ
ವರ್ಗದವರು ಉದ್ಯಮಿಗಳಾಗಬೇಕು ಎಂಬ ಸದುದ್ದೇಶದಿಂದ
ನೂತನವಾಗಿ ಪ್ರಾರಂಭಿಸಿರುವ ಪಿಎಂಎಫ್‍ಎಂಇ ಯೋಜನೆಯಡಿ
ಜಿಲ್ಲೆಯಲ್ಲಿ ಒಟ್ಟು 36 ಅರ್ಜಿಗಳು ಸಲ್ಲಿಕೆಯಾಗಿವೆ. 6 ರೈತರಿಗೆ 35 ಲಕ್ಷ
ರೂಪಾಯಿ ಸಾಲ ನೀಡಲಾಗಿದೆ. 17 ಅರ್ಜಿಗಳು ಪರಿಶೀಲನಾ ಹಂತದಲ್ಲಿವೆ. 16
ಅರ್ಜಿಗಳು ತಿರಸ್ಕøತಗೊಂಡಿವೆ ಎಂದು ಮಾಹಿತಿ ನೀಡಿದರು. ಜಿಲ್ಲೆಯಲ್ಲಿ
ಮೊದಲ ತ್ರೈಮಾಸಿಕ ಅವಧಿಯಲ್ಲಿ ಕೃಷಿ, ಸಣ್ಣ ಕೈಗಾರಿಕೆ, ಇತರೆ
ಆದ್ಯತಾ ವಲಯಗಳು ಒಳಗೊಂಡಂತೆ 1431. 31 ಕೋಟಿ ಸಾಲ
ನೀಡುವ ಗುರಿಯ ಬದಲಿಗೆ, ಶೇ. 108.12 ರಷ್ಟು ಪ್ರಮಾಣದಲ್ಲಿ ಅಂದರೆ
1547.50 ಕೋಟಿ ಸಾಲ ನೀಡಲಾಗಿದೆ. ಶೈಕ್ಷಣಿಕ, ಗೃಹ ನಿರ್ಮಾಣ ಸಾಲ
ಸೌಲಭ್ಯ ಹೊಂದಿರುವ ಇತರೆ ಆದ್ಯತಾ ವಲಯದಲ್ಲಿ ಸಾಲ ಸೌಲಭ್ಯದ
ಪ್ರಮಾಣ ಕಡಿಮೆ ಇದೆ ಎಂದು ಮಾಹಿತಿ ನೀಡಿದರು. ಪ್ರತಿಕ್ರಿಯಿಸಿದ
ಸಂಸದರು ಮುಂದಿನ ಸಭೆಯ ವೇಳೆಗೆ ಶೇ.60 ರಷ್ಟು ಸಾಲ
ಸೌಲಭ್ಯ ಒದಗಿಸಬೇಕು ಎಂದು ಸೂಚಿಸಿದರು.

ಸಂಸದರು ಮಾತಾನಾಡಿ, ಕೇಂದ್ರ ಸರ್ಕಾರ ಕೃಷಿ ಉತ್ಪನ್ನಗಳ
ಆಧರಿಸಿ ಸಣ್ಣ ಪ್ರಮಾಣದ ಆಹಾರ ಸಂಸ್ಕರಣಾ ಘಟಕಗಳ
ಪ್ರಾರಂಭಿಸುವ ಮೂಲಕ ರೈತಾಪಿ ವರ್ಗದವರು ಸಹ
ಉದ್ಯಮಿಗಳಾಗಬೇಕು ಎಂಬ ಸದುದ್ದೇಶದಿಂದ ನೂತನವಾಗಿ
ಪಿಎಂಎಫ್‍ಎಂಇ ಯೋಜನೆ ಪ್ರಾರಂಭಿಸಿ 10 ಸಾವಿರ ಕೋಟಿ ಅನುದಾನ
ಮೀಸಲಿಟ್ಟಿದೆ. ದಾವಣಗೆರೆ ಜಿಲ್ಲೆಯಲ್ಲಿ 25 ರಿಂದ 26 ಕೋಟಿಯಲ್ಲಿ ಕೇವಲ 6
ಜನ ರೈತರಿಗೆ 35 ಲಕ್ಷ ರೂಪಾಯಿಯಷ್ಟು ಸಾಲ ನೀಡಿರುವ ಸಾಧನೆ
ಶೂನ್ಯಕ್ಕೆ ಸಮವಾಗುತ್ತದೆ. ಸಿಬಿಲ್.. ಅಂಕಗಳ ಮಾನದಂಡದಲ್ಲಿ
ಸಾಲದ ಅರ್ಜಿಗಳನ್ನು ತಿರಸ್ಕರಿಸುವುದು ಸರಿಯಲ್ಲ. ಕೃಷಿಕರು ಸಹ
ಉದ್ಯಮಗಳ ಪ್ರಾರಂಭಿಸಲು ಉತ್ತೇಜನ ನೀಡುವ ಯೋಜನೆಗೆ
ಬ್ಯಾಂಕ್ ವಲಯ ಸಹ ಪೂರಕವಾಗಿ ಸ್ಪಂದಿಸಬೇಕು. ಹೆಚ್ಚಿನ
ಪ್ರಮಾಣದಲ್ಲಿ ಸಾಲ ಸೌಲಭ್ಯ ಒದಗಿಸುವ ಮೂಲಕ ಯೋಜನೆಯ
ಮೂಲ ಉದ್ದೇಶ ಈಡೇರಿಸಬೇಕು ಎಂದು ಸಂಸದ ಡಾ| ಜಿ.ಎಂ. ಸಿದ್ದೇಶ್ವರ
ತಿಳಿಸಿದರು. ಕೆಲವರು ಕೇವಲ ಸಹಾಯಧನ ಪಡೆಯುವ
ಉದ್ದೇಶದಿಂದಲೇ ಸಾಲಕ್ಕೆ ಅರ್ಜಿ ಸಲ್ಲಿಸುವುದು ಉಂಟು. ಸಾಲ ಮಂಜೂರಾತಿ
ಮಾಡುವಾಗ ಎಲ್ಲವನ್ನೂ ಗಮನಿಸಬೇಕು. ಪಡೆದಂತಹ ಸಾಲ
ಸದುಪಯೋಗ ಆಗುತ್ತಿದೆಯೇ ಎಂದು ಸಂಬಂಽತ ಇಲಾಖೆ
ಅಕಾರಿಗಳು ಪರಿಶೀಲನೆ ನಡೆಸಬೇಕು. ಕೇಂದ್ರ ಸರ್ಕಾರದ
ಯೋಜನೆಗಳಿಗೆ ಸಂಬಂಧಿಸಿದಂತೆÉ ಆದಷ್ಟು ಬೇಗ ಸಾಲ ಮಂಜೂರಾತಿ
ಮಾಡಬೇಕು ಎಂದು ಸಂಸದರು ಸೂಚಿಸಿದರು.
ಕೃಷಿ ಇಲಾಖೆ ಜಂಟಿ ನಿರ್ದೇಶಕ ಡಾ.ಶ್ರೀನಿವಾಸ್ ಚಿಂತಾಲ್ ಮಾತಾನಾಡಿ
ಪಿಎಂಎಫ್‍ಎಂಇ ಯೋಜನೆಯಡಿ ಸಾಲಕ್ಕೆ ಅರ್ಜಿ ಸಲ್ಲಿಸಿರುವ 16 ರೈತರ ಸಿಬಿಲ್
ಸ್ಕೋರ್ ಉತ್ತಮವಾಗಿಲ್ಲ ಎಂಬ ಕಾರಣಕ್ಕೆ ಅರ್ಜಿಗಳನ್ನು ತಿರಸ್ಕರಿಸಲಾಗಿದೆ.
ಹೆಚ್ಚಿನ ಅರ್ಜಿಗಳು ತಿರಸ್ಕøತಗೊಳ್ಳುತ್ತವೆ ಎಂಬ ಕಾರಣಕ್ಕೆ
ರೈತರು ಸಾಲ ಪಡೆಯುವುದಕ್ಕೆ ಮುಂದೆ ಬರುವುದೇ ಇಲ್ಲ. ಹಾಗಾಗಿ
ಪಿಎಂಎಫ್‍ಎಂಇ ಯೋಜನೆಯಡಿ ಸಿಬಿಲ್ ಸ್ಕೋರ್ ಮಾನದಂಡಕ್ಕೆ ವಿನಾಯತಿ
ನೀಡಬೇಕು ಎಂದು ಸಭೆಯ ಗಮನ ಸೆಳೆದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ವಿಜಯ
ಮಹಾಂತೇಶ್ ದಾನಮ್ಮನವರ್ ಅಧ್ಯಕ್ಷತೆ ವಹಿಸಿದ್ದರು. ಆರ್‍ಬಿಐನ
ಎನ್.ಎಂ. ಪಾಠಕ್, ನಬಾರ್ಡ್ ಡಿಡಿಎಂ ರವೀಂದ್ರ, ಕೆನರಾ ಬ್ಯಾಂಕ್ ಕ್ಷೇತ್ರೀಯ
ವ್ಯವಸ್ಥಾಪಕ ಜಿ.ಜಿ. ದೊಡ್ಡಮನಿ ಭಾಗವಹಿಸಿದ್ದರು.

Leave a Reply

Your email address will not be published. Required fields are marked *