ಮಾನ್ಯ ನಗರಾಭಿವೃದ್ದಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಎ
ಬಸವರಾಜ(ಬೈರತಿ)ಇವರು ಅ.19 ರಂದು ಜಿಲ್ಲಾ ಪ್ರವಾಸ
ಕೈಗೊಳ್ಳಲಿದ್ದಾರೆ.
ಅಂದು ಬೆಳಿಗ್ಗೆ 6.30ಕ್ಕೆ ಬೆಂಗಳೂರಿನಿಂದ ಹೊರಟು 11 ಗಂಟೆಗೆ
ನ್ಯಾಮತಿಗೆ ಆಗಮಿಸುವರು. ನಂತರ 11.30ಕ್ಕೆ ನ್ಯಾಮತಿಯ
ಸರ್ಕಾರಿ ಬಾಲಕಿಯರ ಪದವಿಪೂರ್ವ ಕಾಲೇಜು ಮೈದಾನದಲ್ಲಿ
ನಡೆಯುವ ಹೊನ್ನಾಳಿ ತಾಲ್ಲೂಕಿನಲ್ಲಿ ಕೋವಿಡ್-19 ನಿಯಂತ್ರಣಕ್ಕೆ
ಸಹಕರಿಸಿದ 4 ಸಾವಿರ ಕೊರೋನಾ ವಾರಿಯರ್ಸ್‍ಗಳ ಸನ್ಮಾನ
ಸಮಾರಂಭದಲ್ಲಿ ಭಾವಹಿಸುವರು. ಮದ್ಯಾಹ್ನ 2.30ಕ್ಕೆ
ನ್ಯಾಮತಿಯಿಂದ ಹೊರಟು ಬೆಂಗಳೂರು ತಲುಪುವರೆಂದು
ಸಚಿವರ ಅಪ್ತ ಕಾರ್ಯದರ್ಶಿ ಸಿ.ನಾಗರಾಜು ಪ್ರಕಟಣೆಯಲ್ಲಿ
ತಿಳಿಸಿದ್ದಾರೆ.