16/10/2021 ಮಾಜಿ ಸಚಿವ ಬಿಜೆಪಿಯ ಸೊಗಡು ಶಿವಣ್ಣ ಕಾಂಗ್ರೆಸ್ ಅಧ್ಯಕ್ಷರ ಮೇಲೆ ನೀಡಿರುವ ಆಧಾರರಹಿತ ಆರೋಪವನ್ನು ಖಂಡಿಸಿ ಪ್ರತಿಕೃತಿ ದಹಿಸಿ ಪ್ರತಿಭಟನೆ ನಡೆಸಲಾಯಿತು .
ಬಿಜೆಪಿ ನಾಯಕರಿಗೆ ದಿನನಿತ್ಯ ಬುದ್ಧಿಭ್ರಮಣೆಯಾದಂತೆ ತೋರುತ್ತಿದೆ ಬಿಜೆಪಿಯ ಭ್ರಷ್ಟಾಚಾರವನ್ನು ವಿರೋಧ ಪಕ್ಷಗಳ ಮೇಲೆ ಹೊರಿಸಿ ತನ್ನ ಭ್ರಷ್ಟಾಚಾರವನ್ನು ಮರೆ ಮಾಚುವ ಕುತಂತ್ರದ ಬಗ್ಗೆ ನಿತ್ಯವೂ ಬಿಜೆಪಿಯ ಕೇಂದ್ರ ಕಚೇರಿಯಲ್ಲಿ ಇಂತಹ ನಿರುದ್ಯೋಗಿ ಬಿಜೆಪಿ ನಾಯಕರಿಗೆ ತರಬೇತಿ ನೀಡುತ್ತಿದ್ದಾರೆ .
ಕೇವಲ ಅಪಪ್ರಚಾರ ನಡೆಸಿ ತನ್ನ ಭ್ರಷ್ಟಾಚಾರವನ್ನು ಮರೆ ಮಾಚುವ ಇಂತಹ ಕೀಳುಮಟ್ಟದ ರಾಜಕೀಯವನ್ನು ಬಿಜೆಪಿ ದಿನನಿತ್ಯ ಮಾಡುತ್ತಲೇ ಬಂದಿದೆ ಬಿಜೆಪಿಯಲ್ಲಿ ಹತ್ತಾರು ಕೋಟಿ ಹಾಗೂ ನೂರರಿಂದ ಸಾವಿರ ಕೋಟಿ ಹಗರಣ ನಡೆದಿದೆ
ಎಂದು ಬಿಜೆಪಿ ಪಕ್ಷದ ಹಾಗೂ ಮಾಜಿ ಸಚಿವರು ಶಾಸಕರೇ ಬಹಿರಂಗಪಡಿಸಿದ್ದಾರೆ , ಇದರ ಬಗ್ಗೆ ತನಿಖೆ ನಡೆಸುವ ಯೋಗ್ಯತೆ ಈ ಸರಕಾರಕ್ಕೆ ಇಲ್ಲವೇ .?
ಬಿಜೆಪಿಯ ದುರಾಡಳಿತ ನಡೆದಿರುವ ಭ್ರಷ್ಟಾಚಾರದ ಬಗ್ಗೆ ಮೊದಲು ಸಿಬಿಐ ತನಿಖೆ ನಡೆದಲ್ಲಿ ನಂತರ ಎಲ್ಲಾ ಹಗರಣಗಳ ಬಗ್ಗೆ ತನಿಖೆ ನಡೆಸದೆ ಕೇವಲ ಸಿಬಿಐ ಹೆಸರನ್ನು ಪ್ರಸ್ತಾಪಿಸಿ ಬೆದರಿಸುವ ತಂತ್ರಕ್ಕೆ ಕಾಂಗ್ರೆಸ್ ಪಕ್ಷ ಮಣಿಯುವುದಿಲ್ಲ ಸಿಬಿಐ ಇಡಿ ಐಟಿ ಇಲಾಖೆಯನ್ನ ಯಾವ ರೀತಿ ದುರ್ಬಳಕೆ ಮಾಡಿಕೊಂಡಿದೆ ಬಿಜೆಪಿ ಹಾಗೂ ಕೇಂದ್ರ ಸರ್ಕಾರ ಎಂಬುದು ಈಗ ಜನತೆಗೆ ತಿಳಿದ ವಿಷಯವಾಗಿದೆ .
ಬಿಜೆಪಿಯ ಮಾಜಿ ಸಚಿವ ಸೊಗಡು ಶಿವಣ್ಣ ನೀಡಿರುವ ಹೇಳಿಕೆ ಬಗ್ಗೆ ಕೂಡಲೆ ದಾಖಲೆ ಬಹಿರಂಗಪಡಿಸಬೇಕು ಇಲ್ಲದೆ ಹೋದರೆ ತಾನೆ ತನಿಖಾ ಸಂಸ್ಥೆಯ ಮುಂದೆ ಹೊಗೆ ತಪ್ಪೊಪ್ಪಿಕೊಂಡು ಬಿಜೆಪಿಯ ಭ್ರಷ್ಟಾಚಾರದ ಬಗ್ಗೆ ತನಿಖೆ ನಡೆಸಲು ಒತ್ತಾಯಿಸಬೇಕೆಂದು ಆಗ್ರಹಿಸಿ ಪ್ರತಿಭಟನೆ ಪ್ರತಿಕೃತಿ ದಹಿಸುವುದರ ಮೂಲಕ ಪ್ರತಿಭಟನೆ ನಡೆಸಲಾಯಿತು .
ಬೆಂಗಳೂರು ನಗರ ಕಾಂಗ್ರೆಸ್ ಪ್ರಚಾರ ಸಮಿತಿ ವತಿಯಿಂದ ನಡೆದ ಈ ಪ್ರತಿಭಟನೆಯಲ್ಲಿ ಕಾಂಗ್ರೆಸ್ ಮುಖಂಡರಾದ ಎಸ್ ಮನೋಹರ್ ಜಿ ಜನಾರ್ಧನ್ ಎ ಆನಂದ್ ಎಲ್ ಜಯಸಿಂಹ ಪ್ರಕಾಶ್ ನವೀನ್ ಪುಟ್ಟರಾಜು ಮಹೇಶ್ ಚಂದ್ರಶೇಖರ್ ವೆಂಕಟೇಶ್ ಸುಪ್ರಜ್ ಹಾಗೂ ಇತರ ಕಾಂಗ್ರೆಸ್ ಕಾರ್ಯಕರ್ತರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *