ದಾವಣಗೆರೆ,ಅ.22
      ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖಾ
ವತಿಯಿಂದ ಮೈಸೂರಿನ ಸರ್ಕಾರಿ ಅಂಧ ಮಕ್ಕಳ ಪಾಠಶಾಲೆಯ
ಆವರಣದಲ್ಲಿ ಅಂಧ ಹಾಗೂ ಹಾಗೂ ಶ್ರವಣದೋಷವುಳ್ಳ ಮಕ್ಕಳ
ಶಿಕ್ಷಣ ಕ್ಷೇತ್ರದಲ್ಲಿ ಡಿಪ್ಲೊಮೊ ಇನ್ ಸ್ಪೆಷಲ್ ಎಜುಕೇಶನ್ (ಹೆಚ್.ಐ) ಹಾಗೂ
ಡಿಪ್ಲೊಮೊ ಇನ್ ಸ್ಪೆಷಲ್ ಎಜುಕೇಶನ್ (ವಿ.ಐ) ನ ಶಿಕ್ಷಕರ ತರಬೇತಿ
ಕಾರ್ಯಕ್ರಮವನ್ನು ಆಯೋಜಿಸಿರುತ್ತಾರೆ.  
     ಶಿಕ್ಷಕರ ತರಬೇತಿಗಳಿಗೆ ಸೇರಬಯಸುವ ಎಸ್.ಸಿ, ಎಸ್.ಟಿ ಹಾಗೂ
ವಿಕಲಚೇತನ ಅಭ್ಯರ್ಥಿಗಳಿಗೆ ವಿದ್ಯಾರ್ಹತೆಯು ಶೇ.45 ಹಾಗೂ ಇತರೆ
ಅಭ್ಯರ್ಥಿಗಳಿಗೆ ಶೇ.50 ರಷ್ಟು ಅಂಕಗಳನ್ನು ಪಡೆದು
ಪಿ.ಯು.ಸಿ/10+2 ಉತ್ತೀರ್ಣರಾಗಿರಬೇಕು. ಕಲಾ, ವಾಣಿಜ್ಯ, ವಿಜ್ಞಾನ ಎಲ್ಲಾ
ಅಭ್ಯರ್ಥಿಗಳಿಗೂ ಅವಕಾಶವಿದೆ. ಅರ್ಜಿ
ನಮೂನೆ hಣಣಠಿs://ಡಿಛಿiಚಿಠಿಠಿಡಿovಚಿಟ.oಡಿg/ಡಿಛಿi_ಚಿಜmissioಟಿ/ ನಲ್ಲಿ ಲಭ್ಯವಿದ್ದು,
ಆನ್‍ಲೈನ್ ನಲ್ಲಿ ಅರ್ಜಿ ಸಲ್ಲಿಸಲು ನ.11 ಕೊನೆಯ ದಿನವಾಗಿರುತ್ತದೆ.
ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
ಹೆಚ್ಚಿನ ಮಾಹಿತಿಗಾಗಿ ಉಪನಿರ್ದೇಶಕರು (ತರಬೇತಿ), ಅಂಧ ಹಾಗೂ
ಶ್ರವಣದೋಷವುಳ್ಳ ಮಕ್ಕಳ ಶಿಕ್ಷಕರ ತರಬೇತಿ ಕೇಂದ್ರ,
ಪುಲಿಕೇಶಿ ರಸ್ತೆ, ತಿಲಕ್‍ನಗರ, ಮೈಸೂರು-21. ಇ-
ಮೇಲ್ hಞheಟeಟಿಞeಟಟeಡಿ91@gmಚಿiಟ.ಛಿom  ದೂರವಾಣಿ ಸಂಖ್ಯೆ : 0821-2491600 /
0821-2959600,  ಆಶಾ.ವಿ.ಹಿರೇಮಠ್-9113561620, ಟಿ.ಡಿ.ಮಂಜುನಾಥ-
9686762378, ಮುರಳಿ.ಹೆಚ್.ಹೆಚ್.-7829115275, ಮಹದೇವನಾಯಕ.ಕೆ-
9611773697, ಉಮೇಶ.ಡಿ-9743503262, ಅನ್ನಪೂರ್ಣ ಎಂ.ನ್-7411965971,

ಉಷಾರಾಣಿ ಎನ್.ಎಸ್-6362962400 ಅಥವಾ ವಿಕಲಚೇತನರ ಸಹಾಯವಾಣಿ
ಮತ್ತು ಮಾಹಿತಿ ಸಲಹಾ ಕೇಂದ್ರದ ದೂರವಾಣಿ ಸಂಖ್ಯೆ 08192-263939
ಸಂಪರ್ಕಿಸಬಹುದೆಂದು ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕ
ಕಲ್ಯಾಣಾಧಿಕಾರಿ ಡಾ.ಕೆ.ಕೆ ಪ್ರಕಾಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *