ಹಾವೇರಿ ಜಿಲ್ಲೆ ದಿ:-21/10/2021ರಂದು ಇಂದು ಹಾನಗಲ್ ತಾಲೂಕು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾದ ಶ್ರೀನಿವಾಸ್ ಮಾನೆಯವರ ಪರವಾಗಿ ಸತತವಾಗಿ ಮೂರು ದಿನಗಳಿಂದ ಹಗಲು-ರಾತ್ರಿಯೆನ್ನದೆ,
ಹೊನ್ನಾಳಿ ತಾಲೂಕಿನ ಮಾಜಿ ಶಾಸಕರಾದ ಡಿ ಜಿ ಶಾಂತನಗೌಡ ರವರು ಅಕ್ಕಿ ಆಲೂರು ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ಪ್ರತಿಯೊಂದು ಹಳ್ಳಿಗಳಿಗೂ ಹಾಗೂ ಮನೆ ಮನೆಗೆ ತೆರಳಿ ಪಕ್ಷದ ಕಾರ್ಯಕರ್ತರೊಂದಿಗೆ ಚರ್ಚಿಸಿ
ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾದ ಶ್ರೀನಿವಾಸ್ ಮಾನೆಯವರನ್ನು ಅತಿ ಹೆಚ್ಚು ಮತ ಚಲಾಯಿಸುವುದರ ಮೂಲಕ ವಿಧಾನಸಭೆಗೆ ಆಯ್ಕೆ ಮಾಡಿ ಕಳಿಸಬೇಕೆಂದು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಲ್ಲಿ ಮನವಿ ಮಾಡಿಕೊಂಡರು ಎಂದು ಅವರ ಆಪ್ತರಿಂದ ತಿಳಿದುಬಂದಿದೆ.