ದಾವಣಗೆರೆ: ದಾವಣಗೆರೆ ಕೆ.ಆರ್.ರಸ್ತೆಯ ಸರ್ಕಾರಿ ಪದವಿ ಪೂರ್ವ
ಕಾಲೇಜು(ಮಾಜಿ ಪುರಸಭೆ)ನಲ್ಲಿ ಹೆಚ್ಚುವರಿ ತರಗತಿ ಕೊಠಡಿಗಳು
/ ಪ್ರಯೋಗಾಲಯ ಕೊಠಡಿ /ಶೌಚಾಲಯ ಕೊಠಡಿ ಹಾಗೂ ಇತ್ಯಾದಿ
ಅಭಿವೃದ್ಧಿ ಕಾಮಗಾರಿಯ ನಿರ್ಮಾಣಕ್ಕೆ ದಾವಣಗೆರೆ ದಕ್ಷಿಣ ವಿಧಾನಸಭಾ
ಕ್ಷೇತ್ರದ ಶಾಸಕರಾದ ಡಾ|| ಶಾಮನೂರು ಶಿವಶಂಕರಪ್ಪನವರು
ಶುಕ್ರವಾರ ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು 1 ಕೋಟಿ ರೂ ವೆಚ್ಚದಲ್ಲಿ
ಕಾಲೇಜುನಲ್ಲಿ ಹೆಚ್ಚುವರಿ ತರಗತಿ ಕೊಠಡಿಗಳು,
ಪ್ರಯೋಗಾಲಯ ಕೊಠಡಿ, ಶೌಚಾಲಯ ಕೊಠಡಿ ಸೇರಿದಂತೆ
ಅಭಿವೃದ್ಧಿ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದ್ದು,
ಗುತ್ತಿಗೆದಾರರು, ಅಧಿಕಾರಿಗಳು ಗುಣಮಟ್ಟ ಕಾಯ್ದುಕೊಂಡು
ಕಾಮಗಾರಿ ನಡೆಸಿ ಎಂದು ಸೂಚಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿನೇಶ್
ಕೆ.ಶೆಟ್ಟಿ, ಮಹಾನಗರ ಪಾಲಿಕೆ ವಿಪಕ್ಷ ನಾಯಕ ಎ.ನಾಗರಾಜ್,
ಸ್ಮಾರ್ಟ್ಸಿಟಿ ನಿರ್ದೇಶಕ ಎಂ.ನಾಗರಾಜ್, ನಿರ್ಮಿತಿ ಕೇಂದ್ರದ ಶಿವಕುಮಾರ್,
ಸರ್ಕಾರಿ ಪದವಿ ಪೂರ್ವ ಕಾಲೇಜಿನ ಎಸ್.ಡಿ.ಎಂ.ಸಿ.ಉಪಾಧ್ಯಕ್ಷ ಎಂ.ಆರ್ಸಿದ್ದಿüಕ್,
ಪ್ರಾಂಶುಪಾಲ ಸುರೇಶ್ ಆರ್., ಉಪ ಪ್ರಾಂಶುಪಾಲ ನಾಗರಾಜ್ ನಾಯ್ಕ,
ಕೆ.ಜಯಪ್ಪ, ಆರ್.ಸಿ.ಬಾದಾಮಿ, ನಿಜಗುಣಮೂರ್ತಿ, ನೂರ್ ಅಹ್ಮದ್, ಶ್ರೀಮತಿ
ಶಾರದಾ, ಶ್ರೀಮತಿ ಉಮಾದೇವಿ, ತಿಪ್ಪೇಸ್ವಾಮಿ, ವಿರೇಶ್
ಗುತ್ತಿಗೆದಾರರು ಮತ್ತಿತರರಿದ್ದರು.