ಮೇಘಾಲಯ ರಾಜ್ಯಪಾಲರಾದ ಸತ್ಯಪಾಲ್ ಮಲಿಕ್ ರವರು ಅಂಬಾನಿ ಹಾಗೂ ಆರೆಸ್ಸೆಸ್ ಸಂಸ್ಥೆಯ ಭ್ರಷ್ಟಾಚಾರದ ಕಡತಕ್ಕೆ 300 ಕೋಟಿ ಹಣ ನೀಡುವ ಬಗ್ಗೆ ಆಮಿಷ ಒಡ್ಡಿದ್ದರು ಎಂದು ನೀಡಿರುವ ಹೇಳಿಕೆ ಹಿನ್ನೆಲೆಯ ಕೂಡಲೇ ಈ ಪ್ರಕರಣವನ್ನು ಸುಪ್ರೀಂ ಕೋರ್ಟಿನ ನ್ಯಾಯಮೂರ್ತಿಗಳ ಮಾರ್ಗದರ್ಶನದಲ್ಲಿ ಕೇಂದ್ರ ಸರ್ಕಾರ ತನಿಖೆಗೆ ವಹಿಸಬೇಕೆಂದು ಆಗ್ರಹಿಸಿ ಪ್ರತಿಭಟನೆ ನಡೆಸಲಾಯಿತು.
ಅನಿಲ್ ಅಂಬಾನಿ ಒಡೆತನದ ಅಂಬಾನಿ ಸಂಸ್ಥೆ ಹಾಗೂ ರಾಷ್ಟ್ರೀಯ ಸ್ವಯಂ ಸೇವಾ ಸಂಸ್ಥೆ (rss) ಗೆ ಸಂಬಂಧಪಟ್ಟ ಭ್ರಷ್ಟಾಚಾರದ ಕಡತಗಳ ವಿಷಯವನ್ನು ರಾಜ್ಯಪಾಲರು ಬಹಿರಂಗಪಡಿಸಿರುವ ಹಿನ್ನೆಲೆಯಲ್ಲಿ ಈ ಪ್ರಕರಣವನ್ನು ಕೇಂದ್ರ ಸರ್ಕಾರ ವಿಳಂಬ ಮಾಡದೇ ಸಿಬಿಐ ತನಿಖೆಗೆ ವಹಿಸಬೇಕಿತ್ತು ಆದರೆ ಭ್ರಷ್ಟಾಚಾರವನ್ನು ಬೆಂಬಲಿಸಿರುವ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ನೈತಿಕ ಹೊಣೆ ಹೊತ್ತು ಕೂಡಲೇ ರಾಜೀನಾಮೆ ನೀಡಬೇಕಿತ್ತು .
ಪ್ರಸ್ತುತ ರಾಜ್ಯಪಾಲರಾಗಿರುವ ಸತ್ಯಪಾಲ್ ಮಲಿಕ್ ರವರ ಹೇಳಿಕೆಯನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಬೇಕು ಅವರ ಹೇಳಿಕೆಯಲ್ಲಿ ನರೇಂದ್ರ ಮೋದಿ ರವರ ಹೆಸರನ್ನು ಪ್ರಸ್ತಾಪಿಸಿರುವ ಹಿನ್ನೆಲೆಯಲ್ಲಿ 300 ಕೋಟಿ ಭ್ರಷ್ಟಾಚಾರದ ಬಗ್ಗೆ ಮಾಹಿತಿ ಇದ್ದರೂ ಮೌನ ವಹಿಸಿರುವ ಮೋದಿ ಭ್ರಷ್ಟಾಚಾರಕ್ಕೆ ಬೆಂಬಲ ನೀಡುತ್ತಿದ್ದಾರೆ ಎಂಬುದು ಈಗ ಬಹಿರಂಗವಾಗಿದೆ.
ಭ್ರಷ್ಟಾಚಾರದ ಬಗ್ಗೆ ಮೌನ ವಹಿಸಿರುವ ನರೇಂದ್ರ ಮೋದಿ ಬಿಜೆಪಿ ಆರೆಸ್ಸೆಸ್ ಹಾಗೂ ಅನಿಲ್ ಅಂಬಾನಿಯ ಕೈಗೊಂಬೆಯಾಗಿರುವುದು ಸ್ಪಷ್ಟವಾಗಿದೆ ನರೇಂದ್ರ ಮೋದಿಗೆ ಭ್ರಷ್ಟಾಚಾರದ ಬಗ್ಗೆ ವಿರೋಧವಿದ್ದರೆ ಕೂಡಲೇ ಆರೆಸ್ಸಸ್ ಅಂಬಾನಿ ಬಗ್ಗೆ ಮೇಘಾಲಯ ರಾಜ್ಯಪಾಲ ಸತ್ಯಪಾಲ್ ಮಲಿಕ್ ರವರ ಹೇಳಿಕೆಯನ್ನು ಪರಿಗಣಿಸಿ ಕೂಡಲೇ ತನಿಖೆಗೆ ವಹಿಸಿದ್ದರೆ ಮೋದಿ ಭ್ರಷ್ಟಾಚಾರವನ್ನು ಕಡಿವಾಣ ಹಾಕುತ್ತಿದ್ದಾರೆ ಎಂದು ದೇಶದ ಜನತೆಗೆ ತಿಳಿಯುತ್ತಿತ್ತು,
ಆದರೆ ಮೋದಿ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುತ್ತಿಲ್ಲ ಆದ್ದರಿಂದ ಮೋದಿ ನೈತಿಕ ಹೊಣೆ ಹೊತ್ತು ರಾಜಿನಾಮೆ ನೀಡಬೇಕೆಂದು ಆಗ್ರಹಿಸಿ ಪ್ರತಿಭಟನೆಯನ್ನು ಬೆಂಗಳೂರು ನಗರ ಕಾಂಗ್ರೆಸ್ ಪ್ರಚಾರ ಸಮಿತಿ ಇಂದು ಪ್ರತಿಭಟನೆ ನೆಡಸಲಾಹಿತು. ಈ ಪ್ರತಿಭಟನೆಯಲ್ಲಿ ಕಾಂಗ್ರೆಸ್ ಮುಖಂಡರಾದ ಎಸ್ ಮನೋಹರ್ ಜಿ ಜನಾರ್ಧನ್ ಎ ಆನಂದ್ ಪ್ರಕಾಶ್ ಪುಟ್ಟರಾಜು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ತೇಜಸ್ ಕುಮಾರ್ ಅಶ್ವಥ್ ಪಕ್ಷದ ಮುಖಂಡರಾದ ವೆಂಕಟೇಶ್ ಚಂದ್ರಶೇಖರ ಚೇತನ್ ಕೆ ಬಿ ವಿನೋದ್ ಕುಮಾರ್ ವಾಸು ಹಾಗೂ ಪಕ್ಷದ ಮುಖಂಡರು ಭಾಗವಹಿಸಿದ್ದರು