ಕಿತ್ತೂರು ರಾಣಿ ಚೆನ್ನಮ್ಮ ನಮ್ಮ ದೇಶದ
ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಪ್ರಪ್ರಥಮ ವೀರ ಮಹಿಳೆ.
ಬ್ರೀಟಿಷರ ವಿರುದ್ಧ ಹೋರಾಡಿ ತಮ್ಮ ಪ್ರಾಣ ತ್ಯಾಗ ಮಾಡಿದ
ಮಹಾನ್ ಚೇತನರ ಜೀವನ ಚರಿತ್ರೆ ಇಂದಿನ ಯುವಪೀಳಿಗೆಗೆ
ಸ್ಪೂರ್ತಿಯಾಗಬೇಕು ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ
ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು
ಸಂಸ್ಕøತಿ ಇಲಾಖೆ ವತಿಯಿಂದ ಶನಿವಾರ ಜಿಲ್ಲಾಧಿಕಾರಿ ಕಚೇರಿ
ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ 243ನೇ ಕಿತ್ತೂರು ರಾಣಿ
ಚೆನ್ನಮ್ಮ ಜಯಂತಿಯನ್ನು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ
ಅವರು ಚನ್ನಮ್ಮನ ಭಾವಚಿತ್ರಕ್ಕೆ ಪುಷ್ಪ ನಮನ ಅರ್ಪಿಸಿ
ಮಾತನಾಡಿದ ಅವರು, ನಾವು ಇಂದು ಸ್ವಾತಂತ್ರ್ಯವಾಗಿ
ಜೀವಿಸುತ್ತಿದ್ದೇವೆ ಎಂದರೆ ನಮ್ಮ ದೇಶದ ಮಹಾನ್ ನಾಯಕರ
ಹೋರಾಟ, ತ್ಯಾಗ ಮತ್ತು ಬಲಿದಾನವೇ ಕಾರಣ. ಚನ್ನಮ್ಮ ತನ್ನ
ದಕ್ಷ ಆಡಳಿತದಿಂದ ಬ್ರೀಟಿಷರ ವಿರುದ್ಧ ಹೋರಾಡಿ ತನ್ನ
ಪ್ರಾಣಾರ್ಪಣೆ ಮಾಡಿ ದೇಶಕ್ಕೆ ಸ್ವಾತಂತ್ರ್ಯ ತಂದ ವೀರ ವನಿತೆ.
ಇಂತಹ ಮಾತೆ ಜನಿಸಿದ ನಾಡಿನಲ್ಲಿ ನಾವು ಜೀವಿಸುತ್ತಿದ್ದೇವೆ ಎಂಬುದು
ನಮಗೆಲ್ಲಾ ಹೆಮ್ಮೆಯ ಸಂಗತಿ ಎಂದರು.
ಇಂದಿನ ಯುವಪೀಳಿಯ ಮಕ್ಕಳಿಗೆ ನಮ್ಮ ದೇಶದ
ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹಾನ್ ನಾಯಕರ ಸಾಧನೆ,
ತ್ಯಾಗ, ಬಲಿದಾನದ ಮತ್ತು ಅವರ ಜೀವನ ಚರಿತ್ರಗಳು, ಕಥೆ,
ಸಿನಿಮಾಗಳ ಬಗ್ಗೆ ಮಾಹಿತಿ ತಿಳಿಸುವಂತಹ ಕೆಲಸವಾಗಬೇಕು.
ವೀರ ರಾಣಿ ಕಿತ್ತೂರು ಚನ್ನಮ್ಮ ನಮ್ಮ ಸಮಾಜದಲ್ಲಿ ಒಬ್ಬ
ಹೆಣ್ಣಾಗಿ ಹುಟ್ಟಿ ಅಂತಹ ದಿಟ್ಟ ನಿರ್ಧಾರ ತೆಗೆದುಕೊಂಡು ಯಾವ
ರೀತಿ ಬ್ರೀಟಿಷರ ವಿರುದ್ಧ ಹೋರಾಡಿ ನಮ್ಮ ನಾಡಿಗೆ ಸ್ವಾತಂತ್ರ್ಯ
ದೊರೆಯಿತು ಎಂಬ ಐತಿಹಾಸಿಕ ಚರಿತ್ರೆಯು ಇಂದಿನ
ಯುವಪೀಳಿಗೆಯವರಿಗೆ ಮಾದರಿಯಾಗಬೇಕು ಎಂದರು.
ಸಿಇಒ ಡಾ. ವಿಜಯ ಮಹಾಂತೇಶ್‍ದಾನಮ್ಮನವರ್ ಮಾತನಾಡಿ
ಪ್ರತಿ ವರ್ಷ ಅ.23 ರಂದು ನಾವು ಕಿತ್ತೂರು ರಾಣಿ ಚನ್ನಮ್ಮ
ಜಯಂತಿಯನ್ನು ಆಚರಿಸುತ್ತಾ ಬಂದಿದ್ದೇವೆ. ಸರ್ಕಾರದ
ಆದೇಶದಂತೆ ಎಲ್ಲಾ ಜಯಂತಿಗಳಂತೆ ಚನ್ನಮ್ಮ
ಜಯಂತಿಯನ್ನು ಆಚರಿಸುತ್ತಿದ್ದು, ಈಗಾಗಲೇ ಸಮಾಜದ
ಮುಖಂಡರೆಲ್ಲರೂ ರಾಣಿ ಚನ್ನಮ್ಮನ ಪುತ್ಥಳಿಯ
ನಿರ್ಮಾಣಕ್ಕೆ ಮನವಿ ಸಲ್ಲಿಸಿದ್ದಾರೆ. ಮನವಿಯನ್ನು ಪರಿಶೀಲಿಸಿ
ಶೀಘ್ರದಲ್ಲಿಯೇ ಪುತ್ಥಳಿ ನಿರ್ಮಾಣ ಕಾಮಗಾರಿಗೆ ಚಾಲನೆ
ನೀಡುತ್ತೇವೆ ಎಂದರು.
ಡಾ.ಅನಿತಾ. ಹೆಚ್.ದೊಡ್ಡಗೌಡರ್ ವಿಶೇಷ ಉಪನ್ಯಾಸ ನೀಡಿ,
ಕಿತ್ತೂರು ರಾಣಿ ಚನ್ನಮ್ಮ ದೇಶದ ಸ್ವಾತಂತ್ರ್ಯಕ್ಕಾಗಿ
ಬ್ರೀಟಿಷರ ವಿರುದ್ಧ ಹೋರಾಡಿದ ಅವಳ ಜೀವನ ಚರಿತ್ರೆ, ಧೀರ
ಹೋರಾಟ, ದಕ್ಷ ಆಡಳಿತ ವೈಖರಿ ಮಹತ್ತರವಾದದ್ದು. ನಮ್ಮ
ನಾಡಿಗೆ ಸ್ವಾತಂತ್ರ್ಯವನ್ನು ತಂದ ವೀರ ಹೋರಾಟಗಾರರಲ್ಲಿ
ಪ್ರಪ್ರಥಮ ಮಹಿಳೆ ಕಿತ್ತೂರು ರಾಣಿ ಚನ್ನಮ್ಮ.
ಬ್ರೀಟಿಷರ ದಾಸ್ಯದಿಂದ ಬಿಡಿಸಲು ತನ್ನ ಪ್ರಾಣವನ್ನು ದೇಶಕ್ಕಾಗಿ ಬಲಿ
ನೀಡಿದ ದಿಟ್ಟ ವನಿತೆ. ಚನ್ನಮ್ಮನ ಶೌರ್ಯ, ಧೈರ್ಯ,
ಸಾಹಸಗಳು ಇಂದಿನ ಯುವಪೀಳಿಗೆಗೆ ಹಾಗೂ ಮಹಿಳೆಯರಿಗೆ
ಸ್ಪೂರ್ತಿಯಾಗಬೇಕು. ಹಾಗೂ ಚನ್ನಮ್ಮನ ಹೋರಾಟ
ಇತಿಹಾಸದಲ್ಲೇ ಅಳಿಸಲಾಗದ ಮುನ್ನುಡಿಯಾಗಿದೆ. ತನ್ನ 50ನೇ
ವಯಸ್ಸಿನಲ್ಲಿ ವೀರ ಮರಣವನ್ನು ಹೊಂದಿದ ಮಹಾನ್ ನಾಯಕಿ
ಎಂದು ಹೇಳಿದರು.
ಚನ್ನಮ್ಮನ ಆಡಳಿತ ವ್ಯವಸ್ಥೆ, ಯುದ್ಧ ಕೌಶಲ್ಯ,
ಜೀವನದ ಮೌಲ್ಯಗಳು ನಮ್ಮ ಜೀವನದಲ್ಲೂ
ಅಳವಡಿಸಿಕೊಳ್ಳಬೇಕು. ಚನ್ನಮ್ಮನಂತಹ ವೀರ
ನಾರಿಯನ್ನು ಮರೆಯುವಂತಹ ಕನ್ನಡಿಗರು
ನಾವಾಗಬಾರದು. ರಾಜ್ಯದ ಎಲ್ಲಾ ವಿಶ್ವ ವಿದ್ಯಾಲಯಗಳಲ್ಲಿ ಇತಿಹಾಸ
ಚರಿತ್ರೆಗಳ ಸಂಶೋಧನಾ ಕೃತಿಗಳು
ಬಿಡುಗಡೆಯಾಗಬೇಕು. ಕನ್ನಡ ಸಮಗ್ರ ಸಾಹಿತ್ಯದ
ಅಭಿವೃದ್ಧಿಯಾಗಬೇಕು ಹಾಗೂ ಇಂತಹ ದಾರ್ಶನಿಕರು,
ಸಂತರು, ದಾಸರು, ಮತ್ತು ಸ್ವಾತಂತ್ರ್ಯ ಹೋರಾಟಗಾರರು
ಜನಿಸಿದ ನಾಡಿನಲ್ಲಿ ಹುಟ್ಟಿರುವ ನಾವೇ ಧನ್ಯರು ಎಂದರು.
ಮಹಾನಗರಪಾಲಿಕೆ ಮಹಾಪೌರರಾದ ಎಸ್.ಟಿ.ವೀರೆಶ್
ಮಾತನಾಡಿ, ಕಿತ್ತೂರು ರಾಣಿ ಚನ್ನಮ್ಮ ಸ್ವಾತಂತ್ರ್ಯಕ್ಕಾಗಿ
ಹಾಗೂ ತನ್ನ ರಾಜ್ಯದ ಉಳಿವಿಗಾಗಿ ಬ್ರೀಟಿಷರ ವಿರುದ್ಧ ಹೋರಾಡಿದ
ವೀರ ಮಹಿಳೆ. ಅವಳ ದೇಶ ಸೇವೆಗಾಗಿ ತನ್ನ ಪ್ರಾಣಾರ್ಪಣೆ
ಮಾಡಿದ ಕಾರಣಕ್ಕೆ ನಾವು ಇಂದಿಗೂ ಸ್ಮರಿಸುತ್ತೇವೆ. ಇಂತಹ
ಮಹಾತ್ಮರ ಹೆಸರು ಅಜರಾಮರವಾಗಬೇಕಾದರೆ ಕೇವಲ
ಕಾರ್ಯಕ್ರಮಗಳನ್ನು ಆಯೋಜಿಸಿದರೆ ಸಾಲದು. ಅವರ
ವಿಚಾರ ಧಾರೆಗಳ ಬಗ್ಗೆ ಇಂದಿನ ಪೀಳಿಗೆಯ ಜನತೆಗೆ
ಹೋರಾಟಗಾರರ ಜೀವನಾದರ್ಶಗಳು ದೇಶಕ್ಕೆ
ಮಾದರಿಯಾಗಬೇಕು. ಹಾಗೂ ಈಗಾಗಲೇ ಸಮಾಜದ
ಮುಖಂಡರು ನೀಡಿರುವ ಮನವಿಯನ್ನು ಪರಿಶೀಲಿಸಿ ಪುತ್ಥಳಿ
ನಿರ್ಮಾಣಕ್ಕೆ ಸ್ಥಳ ಪರಿಶೀಲನೆ ಮಾಡಿದ್ದು, ಪುತ್ಥಳಿ ನಿರ್ಮಾಣ
ಕಾಮಗಾರಿಗೆ ಶೀಘ್ರದಲ್ಲಿಯೇ ಪ್ರಾರಂಭಿಸುತ್ತೇವೆ ಎಂದರು.
ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕøತಿ ಇಲಾಖೆ
ನಿರ್ದೇಶಕ ರವಿಚಂದ್ರ, ದೂಡಾ ಅಧ್ಯಕ್ಷ ದೇವರಮನಿ
ಶಿವಕುಮಾರ್, ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ರಾಜೀವ್,
ಸಮಾಜದ ಮುಖಂಡರು, ಸಂಘದ ಅಧ್ಯಕ್ಷರು
ಉಪಸ್ಥಿತರಿದ್ದರು.