ಡಿ.ಎಚ್.ಒ. ಡಾ. ಕೆ. ರಂಗನಾಥ್
ರೋಗಗಳು ಬರುವ ಮುಂಚೆಯೇ ನಾವು ಎಚ್ಚರಿಕೆ ವಹಿಸಬೇಕು, ಯಾವುದೇ ಮುನ್ನೆಚ್ಚರಿಕೆ ಕ್ರಮಗಳಲ್ಲಿ ತಿರಸ್ಕಾರ ಸಲ್ಲದು, ಕರೋನ ಬಂದಾಗಿಂದ ನಾವು ತುಂಬ ಜಾಗೃತರಾಗಿದ್ದೇವೆ, ದೈಹಿಕ ಶ್ರಮ ಮರೆತು, ಜೀವನ ಶೈಲಿಯನ್ನು ಬದಲಾವಣೆ ಮಾಡಿಕೊಂಡಿದ್ದರ ಪರಿಣಾಮವಾಗಿ ನಮಗೆ ಸಾಕಷ್ಟು ಹೊಸ ಕಾಯಿಲೆಗಳು ಹುಟ್ಟಿಕೊಂಡಿವೆ, ಹಳೆ ಕಾಯಿಲೆಗಳಾದ ಪೆÇೀಲಿಯೋ, ಕಾಲರಾ, ಮಲೇರಿಯಾ, ಡೆಂಗ್ಯೂ, ಜೊತೆಗೆ ಹೊಸ ಕಾಯಿಲೆಗಳು ಸಹ ಬರುತ್ತಿರುವುದರಿಂದ ಮುನ್ನೆಚ್ಚರಿಕೆ ಅಗತ್ಯ ಎಂದು ಡಿ.ಎಚ್.ಒ. ಡಾ. ಕೆ. ರಂಗನಾಥ್ ಆರೋಗ್ಯ ಶಿಬಿರವನ್ನ ಉದ್ಘಾಟಿಸಿ ಮಾತನಾಡಿದರು.
ಅವರು ಗುತ್ತಿನಾಡು ಸೀಬಾರ್‍ನ ವಿಶ್ವಮಾನವ ಸಾಂಸ್ಕೃತಿಕ ಮತ್ತು ವಿದ್ಯಾಸಂಸ್ಥೆಯಲ್ಲಿ ರೋಟರಿ ಕ್ಲಬ್ ಚಿತ್ರದುರ್ಗ, ರೋಟರಿ ಟ್ರಸ್ಟ್ (ರಿ), ಸಪ್ತಗಿರಿ ಆಸ್ಪತ್ರೆ ಬೆಂಗಳೂರು ಇವರ ಸಂಯುಕ್ತಾಶ್ರಯದಲ್ಲಿ ನೆರವೇರಿಸಿದ ಉಚಿತ ಹೃದಯ ರೋಗ, ನರರೋಗ, ಮೂತ್ರಪಿಂಡದ ಕಲ್ಲು, ಕ್ಯಾನ್ಸರ್ ಕಾಯಿಲೆಗಳ ತಪಾಸಣೆ ಶಿಬಿರವನ್ನ ಉದ್ಘಾಟಿಸಿ ಮಾತನಾಡಿದರು,
ರೋಗಗನ್ನ ತಡೆಗಟ್ಟುವುದರ ಬಗ್ಗೆ ಹೆಚ್ಚು ಗಮನ ವಹಿಸಬೇಕು, ಸಾಂಕ್ರಾಮಿಕ ಮತ್ತು ಅಸಾಂಕ್ರಾಮಿಕ ರೋಗಗಳ ಬಗ್ಗೆ ಜ್ಞಾನ ಹೆಚ್ಚಿಸಿಕೊಳ್ಳಬೇಕು. ಹಿಂದೆ ವಯಸ್ಸಾದವರು ವಾಂತಿ, ಭೇದಿ, ಮೂಲಕ ಸಾವನ್ನಪ್ಪುತ್ತಿದ್ದರು. ಸಾಂಕ್ರಾಮಿಕ ರೋಗಗಳನ್ನು ದೂರ ಮಾಡಲು ಬಹಳ ಸರಳವಾದಂಥ ಮುಂಜಾಗ್ರತೆ ಕ್ರಮಗಳನ್ನು ವಹಿಸಿಕೊಳ್ಳಬೇಕು, ಈಗ ಹೃದಯದ ಕಾಯಿಲೆಗಳಿಂದ ಹೆಚ್ಚು ಜನ ಸಾವನ್ನಪ್ಪುತ್ತಿದ್ದಾರೆ. ವಾಂತಿ, ಭೇದಿ, ಮಲೇರಿಯಾ, ಪೆÇೀಲಿಯೊ, ಒಂದು ಹಂತಕ್ಕೆ ನಾವು ನಿಲ್ಲಿಸಿದ್ದೇವೆ. ವಿಶ್ರಾಂತಿ ಜೀವನ, ಆಹಾರ ಪದ್ಧತಿಯಲ್ಲಿ ಬದಲಾವಣೆ, ರಾಸಾಯನಿಕಗಳನ್ನು ಹೆಚ್ಚು ಬಳಕೆ ಮಾಡುತ್ತಿರುವುದರಿಂದ ರೋಗಗಳು ಹೆಚ್ಚಾಗುತ್ತಿವೆ. ಹೆಚ್ಚು ವಾಹನಗಳನ್ನು ಬಳಕೆ ಮಾಡುತ್ತಿದ್ದೇವೆ, ಎಸಿ ರೂಮಿನಲ್ಲಿ ಕುಳಿತುಕೊಳ್ಳುತ್ತಿದ್ದೇವೆ, ಇದರ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಬೇಕು ಎಂದರು.
ಬೇಸಾಯದಲ್ಲಿ ಬೆಳೆಗಳನ್ನ ಕೃತಕ ಗೊಬ್ಬರಗಳಿಂದ ಬೆಳೆಯುತ್ತಿದ್ದೇವೆ, ಸಾವಯವ ಕೃಷಿಗೆ ಹೆಚ್ಚು ಪೆÇ್ರೀತ್ಸಾಹ ಕೊಡಬೇಕು, ಇಳುವರಿ ಜಾಸ್ತಿಯಾಗಬೇಕು ಎಂದು ರಾಸಾಯನಿಕ ಗೊಬ್ಬರಗಳನ್ನು ಹೆಚ್ಚು ಬಳಕೆ ಮಾಡುತ್ತಿದ್ದೇವೆ, ಎಂದು ಎಚ್ಚರಿಸಿದರು.
ಡಾ. ಸುಹಾಸ್, ಜನರಲ್ ಸರ್ಜರಿ, ಸಪ್ತಗಿರಿ ಆಸ್ಪತ್ರೆ, ಪ್ರಾಸ್ತಾವಿಕ ನುಡಿಗಳನ್ನಾಡುತ್ತಾ ಈಗ ವೈದ್ಯಕೀಯವಾಗಿ ಜನರು ಜಾಗ್ರತವಾಗಿದ್ದಾರೆ, ಜನರಲ್ಲಿ ತಂಬಾಕು ಸೇವನೆ, ಗುಟ್ಕಾ ಸೇವನೆ, ಮದ್ಯಪಾನದಿಂದ ಕೆಲವು ರೋಗಗಳು ಕಾಡುತ್ತಿವೆ ಎಂದರು.
ರೋಟರಿ ಕ್ಲಬ್‍ನ ಮಾಜಿ ಅಧ್ಯಕ್ಷರಾದ ಎಸ್. ವಿರೇಶ್‍ರವರು ಮಾತನಾಡುತ್ತಾ ಜನರಿಗೆ ಆರೋಗ್ಯ ತಪಾಸಣೆಯ ಕಾರ್ಯಕ್ರಮದಲ್ಲಿ ರೋಟರಿ ಕ್ಲಬ್ ಹಮ್ಮಿಕೊಂಡು ಗ್ರಾಮೀಣ ಬಡಜನರಿಗೆ ಅನುಕೂಲ ಮಾಡಿಕೊಡುವ ಉದ್ದೇಶ ಹೊಂದಿದೆ. ಗ್ರಾಮಸ್ಥರು ಹೆಚ್ಚಿನ ಮಟ್ಟದಲ್ಲಿ ತಮ್ಮ ಆರೋಗ್ಯದ ಬಗ್ಗೆ ಕಾಳಜಿವಹಿಸಿ ವೈದ್ಯಕೀಯ ನೆರವನ್ನು ಪಡೆದು, ಸೂಕ್ತ ಕಾಲದಲ್ಲಿ ವೈದ್ಯಕೀಯ ನೆರವನ್ನು ಪಡೆದು, ಆರೋಗ್ಯವಂತರಾಗಬೇಕು ಎಂದರು.
ವಿಶ್ವಮಾನವ ವಿದ್ಯಾಸಂಸ್ಥೆಯ ಅಧ್ಯಕ್ಷರಾದ ಶ್ರೀಯುತ ಪಿ.ಹೆಚ್. ಬುಡೇನ್ ಸಾಬ್‍ರವರು ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ ಹಣ ವೆಚ್ಚ ಮಾಡಿ ವೈದ್ಯರನ್ನು ಭೇಟಿ ಮಾಡಿ ಸಲಹೆ ಪಡೆಯುವುದಕ್ಕೆ ಬಡವರಿಗೆ ಅಸಾಧ್ಯವಾಗುತ್ತದೆ, ಹಾಗಾಗಿ ಇಂತಹ ಉಚಿತ ಶಿಬಿರಗಳಲ್ಲಿ ಹೆಚ್ಚು ಜನರು ಭಾಗವಹಿಸಿ, ಆರೋಗ್ಯ ಸಲಹೆಗಳನ್ನು ಪಡೆದು, ಅರೋಗ್ಯ ಸುಧಾರಿಸಿಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ಡಾ. ದೀಪಕ್, ಡಾ. ನಾರಾಯಣ, ಸಪ್ತಗಿರಿ ಆಸ್ಪತ್ರೆ, ಎಂ. ನೀಲಕಂಠದೇವರು ಕಾರ್ಯದರ್ಶಿಗಳು, ರೋ. ಎನ್. ಟಿ. ವೀರಭದ್ರಸ್ವಾಮಿ ಮಾಜಿ ಅಧ್ಯಕ್ಷರು, ರೋಟರಿ ಕ್ಲಬ್‍ನ ಡಾ. ಸಿ. ತಿಪ್ಪೇಸ್ವಾಮಿ, ಡಾ.ಎಚ್.ಕೆ.ಎಸ್. ಸ್ವಾಮಿ ಮೌಲಾನ್ ಸಾಬ್, ಸದಸ್ಯರು, ರೊ.ವೆಂಕಟೇಶ್ ಶೆಟ್ಟರು, ಸಪ್ತಗಿರಿ ಆಸ್ಪತ್ರೆಯ ಪಣೇಂದ್ರ, ರುದ್ರೇಶ್, ರೋಟರ್ಯಾಕ್ಟ್. ಎಚ್. ಎಸ್ ರಚನ, ಎಚ್.ಎಸ್. ಪ್ರೇರಣಾ ಭಾಗವಹಿಸಿದ್ದರು. ಮುರುಳಿ ಮನೋಹರ್ ವಂದಿಸಿದರು, ಸಂಜೀವ ಕುಮಾರ್ ನಿರೂಪಿಸಿದರು. ಮನು.ಎಲ್ ಸ್ವಾಗತಿಸಿದರು. ಜಯಲಕ್ಷ್ಮಿ ಪ್ರಾರ್ಥಿಸಿದರು.
ಶಿಬಿರದಲ್ಲಿ 23ಂ ಹೊರ ರೋಗಿಗಳನ್ನ ಪರೀಕ್ಷಿಸಲಾಯಿತು, 13 ರೋಗಿಗಳಿಗೆ ಮುಂದಿನ ಚಿಕಿತ್ಸೆಗಾಗಿ ಸಲಹೆ ನೀಡಲಾಯಿತು, 4 ಹೃದಯ ಸಂಬಂಧಿಸಿದ 4 ನರ ರೋಗ ಸಂಬಂದಿಸಿದ 2 ಸಾಮಾನ್ಯ ಸರ್ಜರಿ 2 ಯೂರಾಲಜಿ 1 ಆಂಕಲಾಜಿ ರೋಗಿಗಳಿಗೆ ಚಿಕಿತ್ಸೆ ನೀಡಲು ಸಲಹೆ ನೀಡಲಾಯಿತು.