ನಗರಾಭಿವೃದ್ದಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಎ
ಬಸವರಾಜ(ಬೈರತಿ) ಅವರು ಅ.27 ರಂದು ಜಿಲ್ಲಾ ಪ್ರವಾಸ
ಕೈಗೊಳ್ಳಲಿದ್ದಾರೆ.
   ಅ.26 ರ ಸಂಜೆ 3 ಗಂಟೆಗೆ ವಿಜಯಪುರ ಜಿಲ್ಲೆಯ ಸಿಂಧಗಿಯಿಂದ
ಹೊರಟು ರಾತ್ರಿ 8 ಗಂಟೆಗೆ  ದಾವಣಗೆರೆಗೆ ಆಗಮಿಸಿ ವಾಸ್ತವ್ಯ
ಮಾಡುವರು. ಆ.27 ರ ಬೆಳಗ್ಗೆ 10 ಗಂಟೆಗೆ ಸ್ಥಳೀಯ
ಕಾರ್ಯಕ್ರಮಗಳಲ್ಲಿ ಭಾಗವಹಿಸುವರು. ಮಧ್ಯಾಹ್ನ 12.30ಕ್ಕೆ
ದಾವಣಗೆರೆಯಿಂದ ಹೊರಟು ಸಂಜೆ 4.30ಕ್ಕೆ ಬೆಂಗಳೂರು
ತಲುಪುವರು ಎಂದು ಸಚಿವರ ಅಪ್ತ ಕಾರ್ಯದರ್ಶಿ ಸಿ.ನಾಗರಾಜು
ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಒಡೆತನ ಯೋಜನೆಯಡಿ ಜಮೀನು ಖರೀದಿ: ಆಕ್ಷೇಪಣೆ ಆಹ್ವಾನ
ದಾವಣಗೆರೆ ಅ.25 (ಕರ್ನಾಟಕ ವಾರ್ತೆ):
ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ದಿ
ನಿಗಮದ ವತಿಯಿಂದ ಭೂ ಒಡೆತನ
ಯೋಜನೆಯಡಿ ಜಮೀನುಗಳನ್ನು ಖರೀದಿಸಲು ಪ್ರಸ್ತಾವನೆ
ಸ್ವೀಕರಿಸಲಾಗಿದ್ದು, ಜಮೀನಿಗೆ ಸಂಬಂಧಿಸಿದ ಆಕ್ಷೇಪಣೆಗಳಿದ್ದಲ್ಲಿ 7
ದಿನಗಳ ಒಳಗಾಗಿ ನಿಗಮದ ಜಿಲ್ಲಾ ವ್ಯವಸ್ಥಾಪಕರಿಗೆ ಆಕ್ಷೇಪಣೆ
ಸಲ್ಲಿಸಬಹುದು.
ಜಗಳೂರು ತಾಲ್ಲೂಕಿನ ಗೌಡಗೊಂಡನಹಳ್ಳಿ ವಾಸಿ
ವಿರೂಪಾಕ್ಷಯ್ಯ ಬಿನ್ ಬಸಯ್ಯ ಇವರ ಜಮೀನು ಗೌಡಗೊಂಡನಹಳ್ಳಿ
ಸರ್ವೆ ನಂ. 60/8 ರಲ್ಲಿ 2.00 ಎಕರೆ. ಜಿಟ್ಟಿನಕೆರೆ ವಾಸಿ ಸುಮಂಗಲ ತಂದೆ
ನಾಗರಾಜಯ್ಯ ಹೆಚ್.ಎಂ ಇವರ ಜಮೀನು ಗೌಡಗೊಂಡನಹಳ್ಳಿ ಸರ್ವೆ
ನಂ.9/1 ರಲ್ಲಿ 2.00 ಎಕರೆ. ಹೊನ್ನಾಳಿ ತಾಲ್ಲೂಕು ಬೆನಕನಹಳ್ಳಿ ವಾಸಿ
ಹಾಲಪ್ಪ ಬಿನ್ ವೀರಭದ್ರಪ್ಪ ಇವರ ಜಮೀನು ಗಡೇಕಟ್ಟೆಯ ಸರ್ವೆ
ನಂ.33/3 ರಲ್ಲಿ 4.00 ಎಕರೆ. ದಾವಣಗೆರೆ ತಾಲ್ಲೂಕು ಗುಡಾಳು
ಗ್ರಾಮದ ವಾಸಿ ಸಿ. ರುದ್ರೇಶ್ ಬಿನ್ ಚನ್ನಪ್ಪ ಇವರ ಜಮೀನು
ಗುಡಾಳು ಸರ್ವೆ ನಂ. 217/2 ರಲ್ಲಿ 2.00 ಎಕರೆ.  ಸುಮ ಕೋಂ
ಭರಮಪ್ಪ ಎಸ್.ವಿ. ಬಡಾವಣೆ ದಾವಣಗೆರೆ ವಾಸಿ ಇವರ ಜಮೀನು ದಾವಣಗೆರೆ
ತಾಲ್ಲೂಕಿನ ಕಂದನಕೋವಿ ಗ್ರಾಮದ ಸರ್ವೆ ನ.39/1 ರಲ್ಲಿ, 1.00 ಎಕರೆ
29 ಗುಂಟೆ ಜಮೀನನ್ನು  ಖರೀದಿಸಲು ಪ್ರಸ್ತಾವನೆ ಸ್ವೀಕರಿಸಲಾಗಿದೆ.
ಮೇಲ್ಕಂಡ ಜಮೀನುಗಳಿಗೆ ಸಂಬಂಧಿಸಿದಂತೆ ಏನಾದರೂ
ಆಕ್ಷೇಪಣೆಗಳಿದ್ದಲ್ಲಿ 7 ದಿನಗಳ ಒಳಗೆ ನಿಗಮದ ಜಿಲ್ಲಾ
ವ್ಯವಸ್ಥಾಪಕರಿಗೆ ಸಲ್ಲಿಸಬಹುದಾಗಿದೆ.  ಹೆಚ್ಚಿನ ಮಾಹಿತಿಗಾಗಿ ನಿಗಮದ
ಜಿಲ್ಲಾ ವ್ಯವಸ್ಥಾಪಕರನ್ನು ಖುದ್ದಾಗಿ ಅಥವಾ ದೂರವಾಣಿ ಸಂಖ್ಯೆ: 08192-
233309ಗೆ ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

Leave a Reply

Your email address will not be published. Required fields are marked *