ಹೊನ್ನಾಳಿ ಪಟ್ಟಣದಲ್ಲಿ ಇಂದು ಪುರಸಭೆಗೆ ಅಧ್ಯಕ್ಷರ ಗಾದೆ ತೆರವಾದ ಸ್ಥಾನಕ್ಕೆ ಇಂದು ಚುನಾವಣೆ ನಡೆಯಿತು. ನಾಮ ಪತ್ರವನ್ನು ಹೋಬಳ್ದಾರ್ ಬಾಬು ರವರು ಅಧ್ಯಕ್ಷರು ಗಾದೆಗೆ ಅರ್ಜಿಯನ್ನು ಸಲ್ಲಿಸಿದರು. ಪುರಸಭೆಯ 18 ಜನ ಸದಸ್ಯರು ಒಳಗೊಂಡಂತೆ ಬೇರೆಯವರು ಯಾರು ಕೂಡ ಅರ್ಜಿಯನ್ನು ಸಲ್ಲಿಸಿದೆ, ಇರುವ ಕಾರಣ, ಓಬಳ್ ದಾರ್ ಬಾಬು ಅವರು ಸಲ್ಲಿಸಿದ್ದ ಅರ್ಜಿಯನ್ನು ಪುರಸ್ಕರಿಸಿ ಚುನಾವಣಾಧಿಕಾರಿಗಳಾದ ಬಸನಗೌಡ ಕೊಟೂರ್ ರವರು ಸರ್ವಸದಸ್ಯರ ಎದುರುಗಡೆ ಘೋಷಣೆಯನ್ನು ಮಾಡಿ ಅರ್ಜಿಯನ್ನು ಅಂಗೀಕರಿಸಿದರು. ನಂತರ ಸರ್ವ ಸದಸ್ಯರು ಹಾಗೂ ಶಾಸಕರಾದ ಎಂ ಪಿ ರೇಣುಕಾಚಾರ್ಯ ರವರು ಅಧ್ಯಕ್ಷರಿಗೆ ಹೂವಿನ ಹಾರವನ್ನು ಹಾಕಿ ಶುಭಾಶಯಗಳನ್ನು ಕೋರಿದರು.
ಉಪಸ್ಥಿತಿ ಎಂ ಪಿ ರೇಣುಕಾಚಾರ್ಯ ಶಾಸಕರು ಹೊನ್ನಾಳಿ ಅಧ್ಯಕ್ಷರಾದ ಓಬಳ್ ದಾರ್ ಬಾಬು, ಉಪಾಧ್ಯಕ್ಷರಾದ ರಂಜಿತಾ ವಡ್ಡಿ ಚೆನ್ನಪ್ಪ ,ತಾಲೂಕ್ ದಂಡಾಧಿಕಾರಿಗಳಾದ ಬಸವನಗೌಡ ಕೋಟೂರ್ ,ಪುರಸಭೆಯ ಮುಖ್ಯ ಅಧಿಕಾರಿಯಾದ ಪಂಪಾಪತಿ ನಾಯಕ, ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷದ ಸರ್ವ ಸದಸ್ಯರುಗಳು ಸಹ ಭಾಗಿಯಾಗಿದ್ದರು