ಶಿರಾಳಕೊಪ್ಪ: 20 ಲೀಟರ್ ಡಿಸೇಲ್ ಕ್ಯಾನ್‍ಗಳ ಮುಖಾಂತರ ರೈತರ ಮನೆ ಬಾಗಿಲಿಗೆ ತಲುಪಿಸುವ ವ್ಯವಸ್ಥೆಯು ರಾಜ್ಯದಲ್ಲಿಯೇ ಮೊದಲ ಬಾರಿಗೆ ಶಿವಶರಣರ ನಾಡು ಶಿರಾಳಕೊಪ್ಪದಲ್ಲಿ ಪ್ರಾರಂಭವಾಗುತ್ತಿರುವುದು ಹೆಮ್ಮೆಯ ವಿಷಯ ಎಂದು ಸಂಸದ ಬಿ.ವೈ. ರಾಘವೇಂದ್ರ ಹೇಳಿದರು.

ಪಟ್ಟಣದ ಆದಿತ್ಯ ಎನರ್ಜಿ ಭಾರತ್ ಪೆಟ್ರೋಲಿಯಂ ಕಾರ್ಪೂರೇಷನ್ ಹಾಗೂ ಪಿ.ಇ.ಎಸ್.ಒ ದಿಂದ ಅನುಮೋದನೆ ಪಡೆದ 20 ಲೀಟರ್ ಕ್ಯಾನ್ ಗಳಲ್ಲಿ ರೈತರ ಮನೆ ಬಾಗಿಲಿಗೆ ಸರಬರಾಜು ಮಾಡುವ ಜೆರ್ರಿ ಕ್ಯಾನ್ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು
ಕಳೆದ 10 ವರ್ಷಗಳ ಹಿಂದೆ ಊರಿಗೆ ಒಂದೆರಡು ಬಂಕ್ ಮತ್ತು ಗ್ಯಾಸ್ ಏಜೆನ್ಸಿಗಳು ಇದ್ದರಿಂದ ಆಗ ಸಾಕಷ್ಟು ಸಮಸ್ಯೆ ಇತ್ತು ಬದಲಾದ ಸಮಯದಲ್ಲಿ ರೈತರ ಮನೆಗಳಿಗೆ ಜೆರ್ರಿ ಕ್ಯಾನಗಳ ಮುಖಾಂತರ ತಲುಪಿಸುವ ಈ ಜನಸ್ನೇಹಿ ವ್ಯವಸ್ಥೆಯಿಂದ ಕೃಷಿ ಚಟುವಟಿಕೆಗಳ ಹೆಚ್ಚಿನ ಪ್ರಭಾವ ಬೀರಲಿದೆ ಎಂದು ಹೇಳಿದರು.

ಮಲೆನಾಡು ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಕೆ.ಎಸ್. ಗುರುಮೂರ್ತಿ ಮಾತನಾಡಿ ಅಂದಿನ ಶ್ರಮವೇ ಇಂದಿನ ಸಂತೃಪ್ತಿಯ ಜೀವನ ನಡೆಸಲು ಸಾಧ್ಯವಾಗಿದೆ ಅದಕ್ಕೆ ಉದಾರಣೆ ವೇದಿಕೆಯ ಮೇಲಿರುವ ನಾನು ಅಗಡಿ ಆಶೋಕಣ್ಣ, ರೇವಣಪ್ಪ, ಹನುಮಂತಪ್ಪ ನೆಮ್ಮದಿಯ ಜೀವನವನ್ನು ನಡೆಸುತ್ತಿರುವುದಕ್ಕೆ ಇದೇ ಕಾರಣ ಹಿಂದಿನ ಸರ್ಕಾರ ತೈಲ ಕಂಪನಿಗಳ ಜೊತೆ ಮಾಡಿಕೊಂಡ ಆಯಿಲ್ ಬಾಂಡ್ ಒಪ್ಪಂದದ ಸಾಲವನ್ನು ತೀರಿಸಲಾಗದೇ ಇದ್ದರಿಂದ ಅದನ್ನು ನಮ್ಮ ನೆಚ್ಚಿನ ಪ್ರಧಾನಿ ಸಾಲ ತೀರಿಸುತ್ತಿರುವುದರಿಂದ ತೈಲ ಬೆಲೆಗಳು ಏರಿಕೆ ಕಂಡಿವೆ ಆದರೆ ಈ ಪರಿಸ್ಥಿತಿಯಲ್ಲಿ ಯಾವ ಸರ್ಕಾರವಿದ್ದಿರೂ ಡಿಜೇಲ್ ಪೆಟ್ರೋಲ್ ಬೆಲೆಗಳಿಗೆ ಕಡಿವಾಣ ಹಾಕಲು ಸಾಧ್ಯವಾಗುತ್ತಿರಲಿಲ್ಲ ಇದನ್ನು ಗ್ರಹಿಸದ ವಿರೋದ ಪಕ್ಷಗಳು ವ್ಯಂಗ್ಯ ಮಾಡುತ್ತಿರುವುದರಲ್ಲಿ ಯಾವುದೇ ಹುರಳಿಲ್ಲ ಪ್ರಧಾನಿ ಮೋದಿಯವರು 7 ವರ್ಷದಲ್ಲಿ 16.1 ಕೋಟಿ ಗ್ಯಾಸ್ ವಿತರಣೆ ಮಾಡಿದ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ ಮೋದಿ ಕಂಡ ನಿರ್ಭಯ ಭಾರತ ಕನಸು ಈಗ ನನಸಾಗಲಿದೆ ಎಂದು ಹೇಳಿದರು.

ಆದಿತ್ಯ ಎನರ್ಜಿ ಮಾಲೀಕ ಅಗಡಿ ಅಶೋಕ ಮಾತನಾಡಿ ರೈತರ ಸಮಸ್ಯೆಯನ್ನು ಹತ್ತಿರದಿಂದ ಕಂಡಿರುವ ನಾನು ಇಂತಹ ಒಂದು ಪ್ರಯೋಗಕ್ಕೆ ಮುಂದಾಗಿದ್ದೇನೆ ಇದರಲ್ಲಿ ಲಾಭಕ್ಕಿಂತ ಹೆಚ್ಚಾಗಿ ಸಮಾಜಮುಖಿ ಸೇವೆಯಿದೆ ರೈತರ ಕೃಷಿಚಟುವಟಿಕೆಗಳ ಕೆಲಸಕ್ಕೆ ಕಲಬೆರಕೆ ಇಲ್ಲದ ಅತ್ಯುತ್ತಮವಾದ ಯಾವುದೇ ಮೋಸವಿಲ್ಲದ 20 ಲೀಟರ್ ಜೆರ್ರಿ ಕ್ಯಾನ್ ಮೂಲಕ ಪ್ರತಿ ಅನ್ನದಾತನ ಮನೆ ಬಾಗಿಲಿಗೆ ಡಿಜೇಲ್ ಸರಬರಾಜು ಮಾಡುವುದು ನಮ್ಮ ಸಂಸ್ಥೆಯ ಉದ್ದೇಶ ಇದನ್ನು ಪ್ರತಿ ವ್ಯವಸಾಯ ಸೇವಾ ಸಹಕಾರ ಸಂಘಗಳ ಮೂಲಕ ವಿತರಿಸಲಾಗುವುದು ಇದರಿಂದ ರೈತರ ಸಮಯ ಮತ್ತು ಒತ್ತಡಗಳನ್ನು ಕಡಮೆಯಾಗಲಿವೆ ಹಾಗೂ ಸಹಕಾರ ಸಂಘಗಳು ಇಲ್ಲದ ಗ್ರಾಮಗಳಿಗೆ ಕೊಡುವಂತಹ ವ್ಯವಸ್ಥೆಗಾಗಿ ಮೊಬೈಲ್ ವಾಹನಕ್ಕೆ ವೇದಿಕೆಯ ಮೇಲೆ ಇರುವ ಗಣ್ಯರಿಂದ ಈ ಸಂದರ್ಭದಲ್ಲಿ ಚಾಲನೆ ನೀಡಲಾಯಿತು.

ಈ ಸಂದರ್ಭದಲ್ಲಿ ರಾಜ್ಯ ಅರಣ್ಯ ಉಪಾಧ್ಯಕ್ಷ ಕೊಳಗಿ ರೇವಣಪ್ಪ, ಪ್ರಾಂತೀಯ ವ್ಯವಸ್ಥಾಪಕ ಸಚಿನ್ ಕುಲಕರ್ಣಿ, ಪ್ರಾಂತೀಯ ಸಂಯೋಜಕ ಗೋರಕ್ ನಾಥ ಮಾರಾಟಾಧಿಕಾರಿ ಗೀರಿಶ್ ಶಂಕರ್, ಜಿಲ್ಲಾ ಮಾರಾಟಾಧಿಕಾರಿ ಸಾಗರ ಜೆ. ತೊಂಡಕ್ಕರ್ ಡಿ.ಸಿ.ಸಿ ಬ್ಯಾಂಕ್ ಅಧ್ಯಕ್ಷ ಚನ್ನವೀರಪ್ಪ, ಹಿಂದುಳಿದ ವರ್ಗಗಳ ಮಾಜಿ ಅಧ್ಯಕ್ಷ ರಾಮಾನಾಯ್ಕ, ಗಾಯಿತ್ರಿ ದೇವಿ ಪುರಸಭೆ ಸದಸ್ಯ ಟಿ ರಾಜು ಇತರರು ಉಪಸ್ಥಿತರಿದ್ದರು.

24 ಎಸ್.ಎಲ್.ಕೆ.ಪಿ01 ಫೋಟೋ01: ಪಟ್ಟಣದ ಆದಿತ್ಯ ಎನರ್ಜಿ ಭಾರತ್ ಪೆಟ್ರೋಲಿಯಂ ಕಾರ್ಪೂರೇಷನ್ ಹಾಗೂ ಪಿ.ಇ.ಎಸ್.ಒ ದಿಂದ ಅನುಮೋದನೆ ಪಡೆದ 20 ಲೀಟರ್ ಕ್ಯಾನ್ ಗಳಲ್ಲಿ ರೈತರ ಮನೆ ಬಾಗಿಲಿಗೆ ಸರಬರಾಜು ಮಾಡುವ ಜೆರ್ರಿ ಕ್ಯಾನ್ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು

Leave a Reply

Your email address will not be published. Required fields are marked *