ದಾಖಲು
ಜಿಲ್ಲೆಯ ತಂಬಾಕು ನಿಯಂತ್ರಣಾ ಕೋಶದಿಂದ ಹರಿಹರ
ತಾಲ್ಲೂಕು ಬೆಳ್ಳೂಡಿಯಲ್ಲಿ, ತಂಬಾಕು ಉತ್ಪನ್ನ ಮಾರಾಟ
ಮಳಿಗೆಗಳ ಮೇಲೆ ದಾಳಿ ನಡೆಸಿದ್ದು, ಸಿಗರೇಟು ಮತ್ತು ಇತರೆ
ತಂಬಾಕು ಉತ್ಪನ್ನಗಳ ಅಧಿನಿಯಮ-2003ರ ಸೆಕ್ಷನ್-4 ರ ಅಡಿ 10
ಪ್ರಕರಣ, ಸೆಕ್ಷನ್-6ಎ ಅಡಿ 3 ಪ್ರಕರಣ, 6ಬಿ ಅಡಿ 3 ಪ್ರಕರಣ ಸೇರಿದಂತೆ
ಒಟ್ಟು 16 ಪ್ರಕರಣ ದಾಖಲಿಸಿ 1570 ರೂ. ದಂಡವನ್ನು ಸ್ಥಳದಲ್ಲಿಯೇ
ಸಂಗ್ರಹಿಸಲಾಯಿತು.
ಅಪರ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ತನಿಖಾ ತಂಡ
ರಚಿಸಲಾಗಿದ್ದು, ತಂಡವು ಹರಿಹರ ತಾಲ್ಲೂಕಿನ ಬೆಳ್ಳೂಡಿಯ ಮುಖ್ಯ
ರಸ್ತೆ, ರಸ್ತೆಯ ಸುತ್ತ-ಮುತ್ತ ಹೋಟೆಲ್ ಅಂಗಡಿ ಮಳಿಗೆ,
ಪಾನ್ಶಾಪ್ ಇತ್ಯಾದಿ ಪ್ರಮುಖ ಸಾರ್ವಜನಿಕ ಸ್ಥಳಗಳಲ್ಲಿ ತಂಬಾಕು
ಉತ್ಪನ್ನಗಳನ್ನು ಮಾರುವವರು ಹಾಗೂ ಸಾರ್ವಜನಿಕ
ಸ್ಥಳಗಳಲ್ಲಿ ತಂಬಾಕು ಉತ್ಪನ್ನಗಳನ್ನು ಸೇವಿಸುವವರಿಗೆ
ಸ್ಥಳದಲ್ಲಿಯೇ ದಂಡ ಹಾಕುವ ಮೂಲಕ ಜಾಗೃತಿ
ಮೂಡಿಸಲಾಯಿತು. ಸಾರ್ವಜನಿಕ ಸ್ಥಳದಲ್ಲಿರುವ ಅಂಗಡಿ ಮಾಲಿಕರು
ಧೂಮಪಾನ ನಿಷೇಧದ ನಾಮಫಲಕವನ್ನು ಕಟ್ಟುನಿಟ್ಟಾಗಿ
ಪ್ರದರ್ಶಿಸಲು ಹಾಗೂ ಅಳವಡಿಸಲು ತಂಡ ತಾಕೀತು ಮಾಡಲಾಯಿತು.
ತಂಬಾಕು ತನಿಖಾ ತಂಡದಲ್ಲಿ ಜಿಲ್ಲಾ ಆರೋಗ್ಯ
ಮೇಲ್ವಿಚಾರಕರಾದ ಎಂ.ವಿ.ಹೊರಕೇರಿ, ಹಿರಿಯ ಆರೋಗ್ಯ
ನಿರೀಕ್ಷಣಾಧಿಕಾರಿಗಳಾದ ಉಮ್ಮಣ್ಣ.ಎಂ, ಬಿ.ಹೆಚ್.ಈ.ಓ ಎಸ್.ಹೆಚ್ ಪಾಟೀಲ್,
ಪಂಚಾಕ್ಷರಿ ಹೆಚ್ಐಒ ಹಾಗೂ ರಾಷ್ಟ್ರೀಯ ತಂಬಾಕು ನಿಯಂತ್ರಣ
ಕಾರ್ಯಕ್ರಮದ ಜಿಲ್ಲಾ ಸಲಹೆಗಾರ ಸತೀಶ್ ಕಲಹಾಳ್, ಸಮಾಜ
ಕಾರ್ಯಕರ್ತ ದೇವರಾಜ್ ಕೆ.ಪಿ, ಹಾಗೂ ಪೊಲೀಸ್ ಸಿಬ್ಬಂದಿ
ತಂಡದಲ್ಲಿದ್ದರು.