ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ವತಿಯಿಂದ ಕನ್ನಡ
ರಾಜ್ಯೋತ್ಸವದ ಅಂಗವಾಗಿ ‘ಕನ್ನಡಕ್ಕಾಗಿ ನಾವು’ ಅಭಿಯಾನದಡಿ
ಅಚ್ಚ ಕನ್ನಡದಲ್ಲಿ ಮಾತನಾಡುವ ಸ್ಪರ್ಧೆಯನ್ನು ಆಯೋಜಿಸಿದ್ದು,
ಜಿಲ್ಲಾ ಮಟ್ಟದಲ್ಲಿ ವಿಜೇತರನ್ನು ಆಯ್ಕೆ ಮಾಡಲಾಗುತ್ತದೆ.
ಸ್ಪರ್ಧೆಯಲ್ಲಿ ಅನ್ಯ ಭಾಷೆಯ ಪದಗಳನ್ನು ಬಳಸದೆ ನಾಡು-
ನುಡಿಗೆ ಸಂಬಂಧಿಸಿದಂತೆ 3 ರಿಂದ 4 ನಿಮಿಷಗಳ ಕಾಲ ಶುದ್ಧ
ಕನ್ನಡದಲ್ಲಿ ಮಾತನಾಡಬೇಕು. ಸಾರ್ವಜನಿಕರು ಸ್ಪರ್ಧೆಯಲ್ಲಿ
ಭಾಗವಹಿಸಬಹುದು ಹಾಗೂ
ಆಸಕ್ತರು hಣಣಠಿs://ಜಿoಡಿms.gಟe/ಅಖಜಿಕಿಂZoಟಿSಉಕಿh83Sಜಿ7 ಗೂಗಲ್ ಲಿಂಕ್
ಮೂಲಕ ಭಾಗವಹಿಸಬಹುದಾಗಿದೆ.
ಸ್ಪರ್ಧೆಗೆ ಜಿಲ್ಲಾ ಮಟ್ಟದಲ್ಲಿ ಮೊದಲ ಬಹುಮಾನ 5 ಸಾವಿರ,
ದ್ವಿತೀಯ-3 ಸಾವಿರ ಹಾಗೂ ತೃತೀಯ ಬಹುಮಾನ 2 ಸಾವಿರ
ರೂ.ಗಳನ್ನು ನಿಗದಿಗೊಳಿಸಲಾಗಿದೆ. ಜಿಲ್ಲಾ ಹಂತದಲ್ಲಿ ಸರ್ಕಾರವು
ಮೌಲ್ಯಮಾಪನ ಸಮಿತಿಯನ್ನು ನಿಗದಿಗೊಳಿಸಿದ್ದು, ಈ ಸಮಿತಿಯು
ವಿಜೇತರನ್ನು ಆಯ್ಕೆ ಮಾಡುತ್ತದೆ ಎಂದು ಕನ್ನಡ ಮತ್ತು
ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ
ತಿಳಿಸಿದ್ದಾರೆ.