ಪ್ರಾಥಮಿಕ, ಪ್ರೌಢ ಶಿಕ್ಷಣ ಮತ್ತು ಸಕಾಲ ಸಚಿವರಾದ ಬಿ.ಸಿ.
ನಾಗೇಶ್ ಅವರು ಅ.28 ರ ಗುರುವಾರ ಜಿಲ್ಲಾ ಪ್ರವಾಸ
ಕೈಗೊಳ್ಳಲಿದ್ದಾರೆ.
ಸಚಿವರು ಅ.28 ರ ಬೆಳಿಗ್ಗೆ 10 ಗಂಟೆಗೆ ದಾವಣಗೆರೆಗೆ
ಆಗಮಿಸುವರು, ಬಳಿಕ ನಗರದ ಸಿದ್ಧಗಂಗಾ ಶಾಲೆಗೆ ಭೇಟಿ
ನೀಡುವರು. ನಂತರ ಸಚಿವರು ಸರ್ಕಾರಿ ಶಾಲೆಗಳಿಗೆ ಭೇಟಿ ನೀಡುವ
ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು. ಸಚಿವರು ಅದೇ ದಿನ ಸಂಜೆ 7
ಗಂಟೆಗೆ ದಾವಣಗೆರೆಯಿಂದ ಹೊರಟು, ತಿಪಟೂರಿಗೆ ಪ್ರಯಾಣ
ಬೆಳೆಸುವರು ಎಂದು ಸಚಿವರ ಆಪ್ತ ಕಾರ್ಯದರ್ಶಿ ತಿಳಿಸಿದ್ದಾರೆ.