ದಾವಣಗೆರೆ C.27 : ಅಕ್ಟೋಬರ್ ತಿಂಗಳನ್ನು ವಿಶ್ವಾದ್ಯಂತ ಸ್ತನ ಕ್ಯಾನ್ಸರ್ ಮಾಸ ಎಂದು ಕರೆಯಲಾಗುತ್ತದೆ. ಇದರ ಅಂಗವಾಗಿ ರೋಟರಿ ಕ್ಲಬ್ ದಾವಣಗೆರೆ ಅಧ್ಯಕ್ಷ ಆರ್.ಟಿ. ಮೃತ್ಯುಂಜಯ ಇವರ ನೇತೃತ್ವದಲ್ಲಿ ಇದೇ ಅಕ್ಟೋಬರ್ 29ರ ಶುಕ್ರವಾರ ಮಹಿಳೆಯರಿಗೆ ಉಚಿತ ಸ್ತನ ಕ್ಯಾನ್ಸರ್ ತಪಾಸಣಾ ಶಿಬಿರವನ್ನು ಹಮ್ಮಿಕೊಂಡಿದೆ. ನಗರದ ಸುಕ್ಷೇಮ ಆಸ್ಪತ್ರೆಯ ಸಹಕಾರದೊಂದಿಗೆ ಈ ಶಿಬಿರವನ್ನು ನಡೆಸಲಾಗುವುದು ಎಂದು ರೋಟರಿ ಪ್ರಚಾರ ಸಮಿತಿಯ ಆರ್.ಎಸ್. ವಿಜಯಾನಂದ್ ತಿಳಿಸಿದ್ದಾರೆ. ಶುಕ್ರವಾರ ಬೆಳಿಗ್ಗೆ 10 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಸುಕ್ಷೇಮ ಆಸ್ಪತ್ರೆಯ ರೋಟರಿ ಮ್ಯಾಮೋಗ್ರಾಮ್ ಕೇಂದ್ರದಲ್ಲಿ ಕ್ಯಾನ್ಸರ್ ತಜ್ಞ ಡಾ. ಸುನೀಲ್ ಬ್ಯಾಡಗಿ ಮತ್ತು ಡಾ. ಎಸ್.ಎಂ. ನಾಗರಾಜ್ ನಡೆಸಲಿರುವ ಈ ತಪಾಸಣೆಗೆ ಆಸಕ್ತ ಮಹಿಳೆಯರು ತಮ್ಮ ಆಧಾರ್ ಕಾರ್ಡ್ ಪ್ರತಿಯೊಂದಿಗೆ ಮೊಬೈಲ್ ಸಂಖ್ಯೆ : 97400 91523 ಸಂಪರ್ಕಿಸಲು ಕೋರಲಾಗಿದೆ.