ಕುವೆಂಪು ವಿವಿ ರಾಷ್ಟ್ರೀಯ ಸೇವಾ ಯೋಜನೆ, ನೆಹರು ಯುವ ಕೇಂದ್ರ, ಶಿವಮೊಗ್ಗ. ರಾಷ್ಟ್ರೀಯ ಸೇವಾ ಯೋಜನೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಆಯನೂರು. ಹಾಗೂ ಕೋಹಳ್ಳಿ ಗ್ರಾಮ ಪಂಚಾಯಿತಿ ವತಿಯಿಂದ ಆಜಾದಿ ಕ ಅಮೃತಮಹೋತ್ಸವ ಪ್ರಯುಕ್ತ ಸ್ವಚ್ಛತಾ ಸಪ್ತಾಹದ 3ನೆಯ ದಿನ ಆಯನೂರು ವೃತ್ತ ದಲ್ಲಿ ಪ್ಲಾಸ್ಟಿಕ್ ಆರಿಸಿ ಜನ ಜಾಗೃತಿ ಮೂಡಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಕುವೆಂಪು ವಿವಿ ರಾಷ್ಟ್ರೀಯ ಸೇವಾ ಯೋಜನೆಯ ಕಾರ್ಯಕ್ರಮ ಸಂಯೋಜನಾಧಿಕಾರಿ ಡಾ. ನಾಗರಾಜ ಪರಿಸರ ಪ್ಲಾಸ್ಟಿಕ್ನಿಂದ ಪರಿಸರದ ಮೇಲೆ ಜಲಚರಗಳ ಮೇಲೆ ಆಗುವ ದುಷ್ಪರಿಣಾಮಗಳನ್ನು ಸಾರ್ವಜನಿಕರಿಗೆ ಮತ್ತು ಸ್ವಯಂಸೇವಕರುಗಳಿಗೆ ವಿವರಿಸಿ ತಿಳಿಸಿದರು. ನೆಹರು ಯುವ ಕೇಂದ್ರದ ಅಧಿಕಾರಿಯಾದ ಶ್ರೀ ಉಲ್ಲಾಸ್, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಡಾ. ರಾಮಚಂದ್ರ ದೇವರು ಹೆಗಡೆ, ಎನ್ಎಸ್ಎಸ್ ಕಾರ್ಯಕ್ರಮ ಅಧಿಕಾರಿಗಳಾದ ಶ್ರೀ ತ್ರಿಶೂಲ್ ಜಿ ಎಸ್ ಏನ್ ಎಸ್ ಎಸ್ ಕಚೇರಿಯ ರಾಚಪ್ಪ ಹಾಗೂ ಎನ್ಎಸ್ಎಸ್ ನ ಹಿರಿಯ ಸ್ವಯಂಸೇವಕರು ಗಳಾದ ಪುನೀತ್ ಬೆಳ್ಳೂರು ಜಯಂತ್ ಬಾಬು ಇನ್ನಿತರ ಐವತ್ತಕ್ಕೂ ಹೆಚ್ಚು ಸ್ವಯಂಸೇವಕರು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.