ಕುವೆಂಪು ವಿವಿ ರಾಷ್ಟ್ರೀಯ ಸೇವಾ ಯೋಜನೆ ವತಿಯಿಂದ ಆಜಾದಿ ಕ ಅಮೃತ ಮಹೋತ್ಸವ ಪ್ರಯುಕ್ತ ಸ್ವಚ್ಛತಾ ಸಪ್ತಾಹದ 4ನೇ ದಿನ ಶಿವಮೊಗ್ಗ ನಗರದ ಮಹಿಳಾ ಪೊಲೀಸ್ ಠಾಣೆ ಮುಂಬಾಗ, ಮೇಘಾನ್ ಆಸ್ಪತ್ರೆ ಮುಂಭಾಗ ಬಸ್ ನಿಲ್ದಾಣದ ವರಗೆ ಪ್ಲಾಸ್ಟಿಕ್ ಆರಿಸಿ ಜನಜಾಗೃತಿ ಮಾಡಲಾಯಿತು.ಶ್ರೀ ಪ್ರಶಾಂತ್ ಮುನ್ನೋಳಿ ಪೊಲೀಸ್ ಉಪಾಧೀಕ್ಷಕರು ನಗರ ಉಪವಿಭಾಗ ಇವರು ಮಾತನಾಡಿ ಸ್ವಚ್ಛತೆ ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ, ರಾಷ್ಟ್ರೀಯ ಸೇವಾ ಯೋಜನೆಯ ಸ್ವಯಂಸೇವಕರು ತಮ್ಮನ್ನು ತಾವು ತೊಡಗಿಸಿಕೊಂಡು ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಿರುವುದು ನಮಗೆಲ್ಲರಿಗೂ ಸಂತೋಷದ ವಿಷಯ, ನಾವು ಸಹ ನಿಮ್ಮೊಂದಿಗೆ ಸ್ವಚ್ಛತೆಯಲ್ಲಿ ಭಾಗವಹಿಸುತ್ತೇವೆ ಎಂದು ಸ್ವಚ್ಛತಾ ಕಾರ್ಯದಲ್ಲಿ ಭಾಗವಹಿಸಿದರು. ಕುವೆಂಪು ವಿವಿ ರಾಷ್ಟ್ರೀಯ ಸೇವಾ ಯೋಜನೆಯ ಕಾರ್ಯಕ್ರಮ ಸಂಯೋಜನಾಧಿಕಾರಿ ಡಾ. ನಾಗರಾಜ್ ಪರಿಸರ ಸಿಂಗಲ್ ಯೂಸ್ ಪ್ಲಾಸ್ಟಿಕ್ (ಒಮ್ಮೆ ಬಳಸುವ ಪ್ಲಾಸ್ಟಿಕ್) ನಿಂದ ಪರಿಸರದ ಮೇಲೆ ಆಗುತ್ತಿರುವ ದುಷ್ಪರಿಣಾಮಗಳ ಬಗ್ಗೆ ವಿವರಿಸಿ ತಿಳಿಸಿದರು. ಮಹಿಳಾ ಠಾಣೆ ಪೊಲೀಸ್ ನಿರೀಕ್ಷಕರಾದ ಶ್ರೀ ವೀರೇಶ್ ಭಾಗವಹಿಸಿ ನಾವೆಲ್ಲ ಪ್ರತಿನಿತ್ಯ ಸ್ವಚ್ಛತೆಗೆ ಆದ್ಯತೆ ನೀಡೋಣ ಎಂದು ತಿಳಿಸಿದರು. ನೆಹರು ಯುವ ಕೇಂದ್ರದ ಅಧಿಕಾರಿಯಾದ ಶ್ರೀ ಉಲ್ಲಾಸ್, ಎನ್ಎಸ್ಎಸ್ ಅಧಿಕಾರಿಗಳಾದ ಡಾ. ವೆಂಕಟೇಶ್, ಶ್ರೀ ತ್ರಿಶೂಲ್, ಶ್ರೀ ನಾಗರಾಜನಾಯ್ಕ್, ಶ್ರೀ ರಾಜುನಾಯ್ಕ್, ಡಾ. ಹಾಲಮ್ಮ, ಮಲ್ಲಿಕಾರ್ಜುನ್, ಕೇತನ, ಆಶಾ, ಸ್ವಯಂಸೇವಕರು ಗಳಾದ ಪುನೀತ್ ಬೆಳ್ಳೂರು, ಗಣೇಶ್, ಜಯಂತ್ ಬಾಬು, ರಮೇಶ್, ಕೇಶವ್ ಇನ್ನಿತರರು ಮತ್ತು ಮಹಾನಗರ ಪಾಲಿಕೆಯ ಆರೋಗ್ಯ ನಿರೀಕ್ಷಕರಾದ ವಿಕಾಸ್ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು. ಈ ಸ್ವಚ್ಛತಾ ಅಭಿಯಾನ ಒಂದು ವಾರಗಳ ಕಾಲ ನಡೆಯಲಿದ್ದು ನಾಳೆ ಬೆಳಿಗ್ಗೆ 6.30 ರಿಂದ 8ಗಂಟೆವರೆಗೆ ಬಿ.ಹೆಚ್. ರಸ್ತೆಯ ಎಂ. ಆರ್. ಎಸ್ ವೃತ್ತದ ಹತ್ತಿರ ಸಾರ್ವಜನಿಕ ಸ್ಥಳಗಳಲ್ಲಿ ಸ್ವಚ್ಛತೆ ಮಾಡಲಾಗುವುದು. ಆಸಕ್ತ ಸ್ವಯಂಸೇವಕರುಗಳು ಮತ್ತು ಸಾರ್ವಜನಿಕರು ಈ ಅಭಿಯಾನದಲ್ಲಿ ಪಾಲ್ಗೊಳ್ಳಲು ಕೋರಿದೆ.