ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಅಲಿಯಾಸ್ ಚೀಟಿಂಗ್, ಲೂಟಿ, ಓಟಿ, ಕೋಟಿ ರವಿ ನಿತ್ಯ ತನ್ನ ನಾಲಿಗೆಯಿಂದ ಬಳಸುತ್ತಿರುವ ಪದ ಅದು ಆರೆಸ್ಸೆಸ್ ಸಂಸ್ಥೆಯಲ್ಲಿ ನೀಡಿರುವ ತರಬೇತಿಯದ್ದು ಎಂಬುದನ್ನ ಇಂದು ಆರೆಸ್ಸೆಸ್ ಮುಖ್ಯಸ್ಥರೆ ಬಹಿರಂಗಪಡಿಸಬೇಕು ಇಲ್ಲದೇ ಹೋದರೆ ಆರೆಸ್ಸೆಸ್ ಸಂಸ್ಥೆಯಲ್ಲಿ ಇಂತಹ ಅವಿವೇಕಿಗಳಿಗೆ ತರಬೇತಿ ನೀಡುತ್ತಾರೆ ಎಂಬುದು ಬಹಿರಂಗವಾಗುತ್ತದೆ,
ಸಿ.ಟಿ.ರವಿ ಮಾಜಿ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯ ರವರ ಬಗ್ಗೆ ಬಳಸಿರುವ ಪದ ಅತ್ಯಂತ ಹೇಯವಾದದ್ದು ಇಂತಹ ಪದಗಳನ್ನು ಬಳಸುವ ವ್ಯಕ್ತಿ ಯಾವ ಸಂಸ್ಕೃತಿ ಗೆ ಸೇರಿದವನು ಎಂಬುದು ಹೇಳುವ ಅವಶ್ಯಕತೆ ಇಲ್ಲ ಇಂತಹ ಹೀನಾಯ ಸಂಸ್ಕೃತಿಯ ವ್ಯಕ್ತಿಗಳನ್ನ ಬಿಜೆಪಿ ಪಕ್ಷ ಪದಾಧಿಕಾರಿಗಳನ್ನಾಗಿ ನೇಮಕ ಮಾಡಿ ಬಿಜೆಪಿಯಲ್ಲಿ ಅವಕಾಶ ಕಲ್ಪಿಸಿದೆ ಇಂತಹ ಸಂಸ್ಕೃತಿಯ ವ್ಯಕ್ತಿಗಳಿಗೆ ಬಿಜೆಪಿ ಮನ್ನಣೆ ನೀಡುತ್ತಿರುವುದು ಬಿಜೆಪಿಯ ಕೆಟ್ಟ ಸಂಸ್ಕೃತಿಯೂ ಇದೆ ಎಂಬುದು ಈಗ ನಿತ್ಯವೂ ಬಹಿರಂಗವಾಗುತ್ತಿದೆ,
ಸಿದ್ದರಾಮಯ್ಯನವರು ಧರಿಸಿದ ಟೊಪ್ಪಿಯ ಬಗ್ಗೆ ಟೋಪಿ ಧರಿಸಿರುವ ವ್ಯಕ್ತಿ ಯಾರಿಗೆ ಜನಿಸಿದ್ದಾನೆ ಎಂದು ಕೇಳುವ ಪ್ರಶ್ನೆ ಸಿಟಿ ರವಿಗೆ ಇದೆಯೇ ಹಾಗಾದರೆ ಬಿಜೆಪಿ ನಾಯಕರು ಧರಿಸಿರುವ ಟೋಪಿ ಬಗ್ಗೆ ಸಿ ಟಿ ರವಿ ಕಣ್ತೆರೆದು ನೋಡುತ್ತಾನೆಯೇ ?
ಬಿಜೆಪಿ ಪಕ್ಷದ ಅನೇಕ ರಾಜ್ಯ ಹಾಗೂ ಕೇಂದ್ರದ ಮಂತ್ರಿಗಳು ಮಾಜಿ ಮುಖ್ಯಮಂತ್ರಿಗಳು ಈ ಟೊಪ್ಪಿಯನ್ನು ಧರಿಸಿರುತ್ತಾರೆ ಹಾಗಾದರೆ ಅವರಿಗೆ ಸಿ.ಟಿ ರವಿ ಈ ಪ್ರಶ್ನೆಯನ್ನು ಕೇಳುತ್ತಾರ ?
ದೊಡ್ಡವರ ಬಗ್ಗೆ ಟೀಕಿಸಿ ಪ್ರಚಾರ ಪಡೆಯುವ ಈ ನೀಚತನದ ಹೇಳಿಕೆ ಬಿಜೆಪಿ ಪಕ್ಷಕ್ಕೆ ಮುಳುವಾಗುವುದಂತೂ ಖಚಿತ ಮುಸ್ಲಿಂ ಹಾಗೂ ಕುರುಬ ಸಮುದಾಯದವರನ್ನು ಉದ್ದೇಶಪೂರ್ವಕವಾಗಿ ಅವಮಾನಿಸಿರುವ ಸಿ.ಟಿ.ರವಿ ಕೂಡಲೇ ಆ ಸಮುದಾಯದ ಬಳಿ ಕ್ಷಮೆ ಕೋರಬೇಕು ಹಾಗೂ ಬಿಜೆಪಿ ಪಕ್ಷ ಇಂತಹ ಅನಾಗರಿಕ ವ್ಯಕ್ತಿಗಳನ್ನು ಪಕ್ಷದಿಂದ ಉಚ್ಚಾಟಿಸಬೇಕು,
ಕರ್ನಾಟಕ ರಾಜ್ಯದಲ್ಲಿ ಇತ್ತೀಚಿನ ದಿನಗಳಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಿಂದ ಹಿಡಿದು ಇಂತಹ ಅನೇಕ ವ್ಯಕ್ತಿಗಳು ಕಾಂಗ್ರೆಸ್ ಪಕ್ಷವನ್ನು ಹಾಗೂ ವಿರೋಧ ಪಕ್ಷದ ನಾಯಕರ ವಿರುದ್ಧ ಇಂತಹ ಕೀಳು ಮಟ್ಟದ ಪದಗಳನ್ನು ಬಳಸುತ್ತಿದ್ದಾರೆ ಇದು ಬಿಜೆಪಿಯ ಸಂಸ್ಕೃತಿಯೇ ಆಗಿದ್ದರೆ ಅದರ ಬಗ್ಗೆ ಬಿಜೆಪಿ ಪಕ್ಷ ಬಹಿರಂಗಪಡಿಸಬೇಕು ಇದು ನಮ್ಮ ಸಂಸ್ಕೃತಿ ಎಂದು ಒಪ್ಪಿಕೊಂಡರೆ ಅವರ ಯೋಗ್ಯತೆಯು ಇದೆ ಎಂದು ತಿಳಿಯುತ್ತದೆ,
ಸಿ.ಟಿ.ರವಿ ಅಂತಹ ಅಜ್ಞಾನಿಗಳು ಅವಿವೇಕಿಗಳಿಗೆ ಬಿಜೆಪಿ ಉತ್ತೇಜನ ನೀಡಿ ಪ್ರಚಾರ ಪಡೆಯುತ್ತಿರುವುದು ಅತ್ಯಂತ ದುರದೃಷ್ಟಕರ ಇಂತಹ ಅನಾಗರಿಕ ರಾಜಕಾರಣಗಳಿಂದ ಕರ್ನಾಟಕದ ಸಂಸ್ಕೃತಿಗೆ ಹಾಗೂ ಕನ್ನಡದ ಭಾಷೆಗೆ ಅವಮಾನವಾಗುತ್ತದೆ,
ಕೂಡಲೇ ಇಂತಹ ಹೀನಾಯ ಸಂಸ್ಕೃತಿಯ ವ್ಯಕ್ತಿಗಳು ರಾಜ್ಯದಿಂದ ತೊಲಗಬೇಕೆಂದು ಆಗ್ರಹಿಸಿ ಪ್ರತಿಭಟಿಸಿ ಪ್ರತಿಕೃತಿಯನ್ನು ದಹಿಸಲಾಯಿತು.
ಬೆಂಗಳೂರು ನಗರ ಕಾಂಗ್ರೆಸ್ ಪ್ರಚಾರ ಸಮಿತಿ ವತಿಯಿಂದ ನಡೆದ ಈ ಪ್ರತಿಭಟನೆಯಲ್ಲಿ ಪಕ್ಷದ ಮುಖಂಡರಾದ
ಎಸ್. ಮನೋಹರ್ ಜಿ.ಜನಾರ್ಧನ್ ಎ.ಆನಂದ್. ತೇಜಸ್ ಕುಮಾರ್ ಬಿ ಎಲ್ ಚೇತನ್ , ಚಂದ್ರಶೇಖರ್ ಪುಟ್ಟರಾಜು ಅನಿಲ್ ಹಾಗೂ ಪಕ್ಷದ ಮುಖಂಡರು ಭಾಗವಹಿಸಿದ್ದರು.