ಕನ್ನಡ ಚಿತ್ರರಂಗದಲ್ಲಿ ಇತ್ತೀಚೆಗೆ ನಿರ್ಮಾಪಕ ವಲಯದಲ್ಲಿ ಹೆಚ್ಚು ಪ್ರಚಲಿತದಲ್ಲಿರುವ ಹೆಸರು ಎಂ ರಮೇಶ್ ರೆಡ್ಡಿ ಅವರದಾಗಿದೆ

     ಬೆಂಗಳೂರಿಗೆ ಗಾರೆ ಕೆಲಸಕ್ಕಾಗಿ ಬಂದು ಮೇಸ್ತ್ರಿಯಾಗಿ, ಪ್ರಸ್ತುತ ಕಟ್ಟಡ ಗುತ್ತಿಗೆದಾರರಾಗಿ, ಬೆಳೆದು ಕನ್ನಡ ಚಿತ್ರರಂಗದಲ್ಲಿ ಚಿತ್ರ ನಿರ್ಮಾಪಕರಾಗಿ ಗುರುತಿಸಿಕೊಂಡಿರುವ ರಮೇಶ್ ರೆಡ್ಡಿ ಅವರು ನಡೆದು ಬಂದ ದಾರಿ ಯಾವ ಸಿನಿಮಾ ಕತೆಗೂ ಕಡಿಮೆ ಇಲ್ಲ,

M ರಮೇಶ್ ರೆಡ್ಡಿ ಅವರು ಮೂಲತಃ ಕೋಲಾರ ಜಿಲ್ಲೆ”ಮುಳಬಾಗಿಲು ತಾಲೂಕಿನ ನಂಗಲಿ ಬಳಿಯ” ದೊಡ್ಡ ಗೊಲ್ಲಹಳ್ಳಿ” ಗ್ರಾಮದವರು ಮೊದಲು ರಮೇಶ್ ರೆಡ್ಡಿ ಅವರಲ್ಲಿರುವ ಶ್ರದ್ಧೆ ಪ್ರಾಮಾಣಿಕತೆ ಗುರುತಿಸಿದವರು ಸಿ.ವಿ ಕರ್ನಲ್ ಅವರು ನಂತರ ಇವರೇ ಇನ್ಫೋಸಿಸ್ ಸಂಸ್ಥೆಯ ಸುಧಾ ನಾರಾಯಣಮೂರ್ತಿವರಿಗೆ ಪರಿಚಯಿಸುತ್ತಾರೆ, ಮುಂದೆ ರಮೇಶ್ ರೆಡ್ಡಿ ಅವರ ವೃತ್ತಿ ಜೀವನಕ್ಕೆ ಸುಧಾ ನಾರಾಯಣಮೂರ್ತಿಯವರು ಗಾಡ್ ಫಾದರ್ ಆಗುತ್ತಾರೆ,

M ರಮೇಶ್ ರೆಡ್ಡಿ ಅವರ ಪ್ರಾಮಾಣಿಕತೆ ಗೊತ್ತಿದ್ದ ಸುಧಾ ನಾರಾಯಣಮೂರ್ತಿ ಅವರು ಮೇಸ್ತ್ರಿ ಆಗಿದ್ದ ರಮೇಶ್ ರೆಡ್ಡಿ ಅವರನ್ನು ಅವರ ಸಂಸ್ಥೆ ವತಿಯಿಂದ ನಿರ್ಮಿಸಲಾಗುವ ಕಟ್ಟಡಗಳಿಗೆ ಕಟ್ಟಡ ಗುತ್ತಿಗೆದಾರರಾಗಿ ನೇಮಿಸುತ್ತಾರೆ ಹೀಗೆ ರಮೇಶ್ ಅವರನ್ನು ಹಂತಹಂತವಾಗಿ ಬೆಳೆಸಿದ ಕೀರ್ತಿ ಸುಧಾ ನಾರಾಯಣಮೂರ್ತಿ ಅವರಿಗೆ ಸಲ್ಲುತ್ತದೆ,

ಕಟ್ಟಡ ಗುತ್ತಿಗೆದಾರರಾಗಿದ್ದ ರಮೇಶ್ ರೆಡ್ಡಿ ಅವರು ಚಿತ್ರರಂಗಕ್ಕೆ ಬಂದಿದ್ದು ಆಕಸ್ಮಿಕವೇನಲ್ಲ ಬಾಲ್ಯದಿಂದಲೇ ಚಲನಚಿತ್ರಗಳ ಬಗ್ಗೆ ಆಸಕ್ತಿ ಮತ್ತು ಸೆಳೆತ ಚಿತ್ರ ನಿರ್ಮಾಣಕ್ಕೆ ದಾರಿಯಾಯಿತು," ಉಪ್ಪು ಹುಳಿ ಖಾರ" ಅವರ ನಿರ್ಮಾಣದ ಮೊದಲ ಚಲನಚಿತ್ರವಾಗಿದೆ ನಂತರ ಎರಡನೇ ಚಲನಚಿತ್ರ "ನಾತಿಚರಾಮಿಗೆ" ತಮ್ಮ ಸಮಾಜದ ಮತ್ತು ಸ್ವ ಗ್ರಾಮದವರಾದ ಯುವ ನಿರ್ದೇಶಕ ಮಂಸೋರೆ ಅವರಿಗೆ ಅವಕಾಶ ನೀಡಿ ಯುವ ಪ್ರತಿಭಾವಂತ  ನಿರ್ದೇಶಕನ ಬೆಳವಣಿಗೆಗೆ ಕಾರಣರಾದರು, ನಾತಿಚರಾಮಿ ಚಲನಚಿತ್ರ ಐದು ರಾಷ್ಟ್ರ ಪ್ರಶಸ್ತಿ ಪಡೆದ ಚಿತ್ರವಾಗಿರುವುದು ರಮೇಶರೆಡ್ಡಿ ಅವರ ಚಿತ್ರ ನಿರ್ಮಾಣದ ಕಥೆ ಆಯ್ಕೆಯಲ್ಲಿರುವ ಜಾಣ್ಮೆಯನ್ನು ತೋರಿಸುತ್ತದೆ,

ನಂತರ ರಮೇಶ್ ರೆಡ್ಡಿ ಅವರ ನಿರ್ಮಾಣದ ಮೂರನೇ ಚಲನಚಿತ್ರ ರಮೇಶ್ ರವರ ಆತ್ಮೀಯರು ಸ್ನೇಹಿತರು ಕನ್ನಡ ಚಿತ್ರರಂಗದ ಹಿರಿಯ ನಿರ್ಮಾಪಕರಾದ “ಕೆ ಮಂಜು ಅವರ ಪುತ್ರ ಶ್ರೇಯಸ್ ಕೆ ಮಂಜು ನಾಯಕನಾಗಿ ನಟಿಸಿದ “ಪಡ್ಡೆಹುಲಿಯಾಗಿದೆ”, ಇಲ್ಲೂ ಕೂಡಾ ಯುವ ನಾಯಕನಾದ ಶ್ರೇಯಸ್ ಅವರಿಗೆ ಅವಕಾಶ ನೀಡಿ ಯವಪ್ರತಿಭೆ ಚಿತ್ರರಂಗದಲ್ಲಿ ಗುರುತಿಸಿಕೊಳ್ಳಲು ಕಾರಣರಾದರು,

ಪ್ರಸ್ತುತ M ರಮೇಶ್ ರೆಡ್ಡಿ ನಿರ್ಮಾಣದಲ್ಲಿ ಗಣೇಶ್ ನಟನೆಯ” ಗಾಳಿಪಟ-2″ ಮತ್ತು ಕನ್ನಡದ ಪ್ರಖ್ಯಾತ ಹಿರಿಯನಟ ರಮೇಶ್ ಅರವಿಂದ್ ನಿರ್ದೇಶಿಸಿ ನಟಿಸುತ್ತಿರುವ “100 ( HUNDRED) ಚಲನಚಿತ್ರ” ಇದೆ ಚಲನಚಿತ್ರವನ್ನು ಹಿಂದಿಯಲ್ಲಿ ಸುಶಿ ಗಣೇಶನ್ ನಿರ್ದೇಶನದಲ್ಲಿ ವಿನೀತ್ ಕುಮಾರ್ ಸಿಂಗ್ ಹಾಗೂ ಊರ್ವಶಿ ರೌಟೇಲಾ ನಟನೆಯಲ್ಲಿ ನಿರ್ಮಿಸಿದ್ದಾರೆ ಇತ್ತಿಚ್ಚೆಗೆ ಶ್ರೀಮುರುಳಿ ನಟನೆಯಲ್ಲಿ ಮುಂಬರುವ ಯೋಜನೆಯಾಗಿ ಚಿತ್ರವೊಂದನ್ನು ಘೋಷಿಸಿದ್ದಾರೆ, ಇದೇ ನವಂಬರ್ 19ರಂದು ರಮೇಶರೆಡ್ಡಿ ಅವರ ನಿರ್ಮಾಣದ ಕನ್ನಡದ 100 (Hundred) ಚಲನಚಿತ್ರ ಬಿಡುಗಡೆಯಾಗುತ್ತಿದೆ,

“ರೆಡ್ಡಿ ಸಮಾಜದ” ಬಗ್ಗೆ ಅಪಾರ ಗೌರವ ಇಟ್ಟುಕೊಂಡಿರುವ ರಮೇಶರೆಡ್ಡಿಯವರು ಸಮಾಜದಲ್ಲಿರುವ ಎಲ್ಲಾ ಒಳಪಂಗಡಗಳು ಒಗ್ಗೂಡಿದರೇ ಮಾತ್ರ ರೆಡ್ಡಿ ಸಮಾಜದ ಅಭಿವೃದ್ಧಿ ಸಾಧ್ಯ ಎನ್ನುತ್ತಾರೆ, ಜೊತೆಗೆ ಚಿತ್ರರಂಗದಲ್ಲಿ ಗುರುತಿಸಿಕೊಳ್ಳಲು ಶ್ರಮಪಡುತ್ತಿರುವ ರೆಡ್ಡಿ ಸಮಾಜದ ಮತ್ತು ಇನ್ನಿತರ ಎಲ್ಲಾ ಸಮಾಜದ ಪ್ರತಿಭೆಗಳನ್ನು‌ ಗುರುತಿಸಿ ಬೆಳೆಸುವುದು ನನ್ನ ಆಶಯವಾಗಿದೆ, ಆ ನಿಟ್ಟಿನಲ್ಲಿ ನನ್ನ ಪ್ರಯತ್ನ ನಿರಂತರ ಮತ್ತು ಭಗವಂತ ನನ್ನ ಪ್ರಯತ್ನಕ್ಕೆ ಎಲ್ಲವನ್ನು ನೀಡಿದ್ದಾನೆ. ಮುಂದಿನ ದಿನಮಾನದಲ್ಲಿ “ಅಮ್ಮ ಸುಧಾ ನಾರಾಯಣಮೂರ್ತಿ” ಅವರಂತೇ ಸಮಾಜ ಸೇವೆ ಮಾಡುವಾಸೆ ಎಂಬುದು M ರಮೇಶರೆಡ್ಡಿ ಅವರ ಮನದಾಳದ‌ ಮಾತಾಗಿದೆ,

ಯಾವುದೇ ಸ್ವಾರ್ಥ ಮನಸ್ಥಿತಿ ಮತ್ತು ಮಾಡಿದ ಉತ್ತಮ ಕಾರ್ಯಗಳಿಗೆ ಪರರಿಂದ ಏನನ್ನು ಬಯಸದ
M ರಮೇಶರೆಡ್ಡಿ ಅವರು ಉತ್ತಮ ಕಾರ್ಯಗಳಿಗೆ ಭಗವಂತನ ಅನುಗ್ರಹ ಇರುತ್ತದೆ ಎಂದು ನಂಬಿರುವ ಪ್ರಾಮಾಣಿಕ ವ್ಯಕ್ತಿತ್ವವುಳ್ಳವರಾಗಿದ್ದಾರೆ, “ಮಹಾ ಸಾದ್ವಿ ಹೇಮರೆಡ್ಡಿ ಮಲ್ಲಮ್ಮ”ಮತ್ತು ವೇಮನರ” ಆಶೀರ್ವಾದ ಸದಾ ಅವರ ಮೇಲೆ ಇರಲಿದೆ ಎಂದು ಹೊಸಳ್ಳಿ ರೆಡ್ಡಿ ಸಮಾಜದ
ಗುರು ಪೀಠಾಧ್ಯಕ್ಷರಾದ ಶ್ರೀ ಶ್ರೀ ಶ್ರೀ ವೇಮಾನಂದ ಸ್ವಾಮಿಗಳು ಸಹ ಆಶೀರ್ವಾದದ ಜೊತೆಗೆ ಸಂತೋಷ ವನ್ನು ವ್ಯಕ್ತಪಡಿಸಿದ್ದಾರೆ.


ಲೇಖಕರಾದ ಮಲ್ಲಿಕಾರ್ಜುನ ಬಾವಿಕಟ್ಟೆ ದಾವಣಗೆರೆ ಇವರು ಈ ಚಲನಚಿತ್ರ ರಾಷ್ಟ್ರಾದ್ಯಂತ ಯಶಸ್ವಿಯಾಗಲೆಂದು ಹಾರೈಸಿದರು.
ನಂತರ ಮಾತನಾಡಿದ ಎಬಿಸಿನ್ಯೂಸ್ ಆನ್ಲೈನ್ ಚಾನಲ್ ಸಂಪಾದಕರಾದ ಅರವಿಂದ್ ಎಸ್ ಹೊನ್ನಾಳಿ ಅವರು ನಿರ್ಮಾಪಕ ರಾಗಿ M ರಮೇಶ್ ರೆಡ್ಡಿ ಅವರು ನಿನ್ನೆ ಮೊನ್ನೆ ತಕ್ಷಣಕ್ಕೆ ಚಿತ್ರ ರಂಗದ ಕ್ಷೇತ್ರಕ್ಕೆ ಬಂದವರಲ್ಲ, ಅವರು ಸುಮಾರು ಇಪ್ಪತ್ತೈದು ಮೂವತ್ತು ವರ್ಷಗಳ ಕಾಲ ಸತತ ಕಠಿಣ ಪರಿಶ್ರಮದಿಂದ ಮೇಲ್ಮಟ್ಟಕ್ಕೆ ಬಂದು, ಇನ್ಫೋಸಿಸ್ ಸುಧಾ ನಾರಾಯಣಮೂರ್ತಿ ಅವರ ದಿಗ್ಗಜರುಗಳ ಆಶೀರ್ವಾದದೊಂದಿಗೆ ಅವರುಗಳು ಮಾಡುತ್ತಿರುವ ಎಲ್ಲಾ ಕಾರ್ಯಗಳು ಯಶಸ್ವಿಯಾಗಿ ನಡೆಯಲಿ. M ರಮೇಶ್ ರೆಡ್ಡಿ ಅವರು ನಿರ್ಮಾಣ ಮಾಡಿರುವ “ಕನ್ನಡ 100[Hundred] ಚಲನಚಿತ್ರವು” ನವಂಬರ್ 19 ನೇ ತಾರೀಕಿಗೆ ಬಿಡುಗಡೆಯಾಗಲಿರುವ ಹಿನ್ನಲೆಯಲ್ಲಿ,
ಈ ಚಲನಚಿತ್ರವು ರಾಜ್ಯದ ಆರು ಕೋಟಿ ಕನ್ನಡಿಗರ ಮನದಲ್ಲಿ ಹೆಸರುವಾಸಿ ಮಾಡಿ, ರಾಜ್ಯದ ಎಲ್ಲಾ ಸಮುದಾಯ ವರ್ಗದವರು ಈ “ಕನ್ನಡ 100[Hundred]ಚಲನ” ಚಿತ್ರವನ್ನು” ನೋಡಿ. ಒಬ್ಬ ನಿಷ್ಠಾವಂತ ಕನ್ನಡಿಗ M ರಮೇಶ್ ರೆಡ್ಡಿ ನಿರ್ಮಾಣ ಮಾಡಿರುವಂತಹ ನಿರ್ಮಾಪಕರನ್ನು ಬೆಳೆಸುವುದು ನಿಮ್ಮ ಕೈಯಲ್ಲಿದೆ ಎಂದು ರಾಜ್ಯದ ಕಲಾಅಭಿಮಾನಿಗಳಿಗೆ ಹಾಗೂ ನಾಡಿನ ಜನತೆಗೆ ನಿರ್ಮಾಪಕರಾದ ಎಂ ರಮೇಶ್ ರೆಡ್ಡಿ ಅವರ ಪರವಾಗಿ ಮನವಿ ಮಾಡುವುದರ ಜೊತೆಗೆ, ಒಬ್ಬ ನಿರ್ಮಾಪಕ, ನಿರ್ದೇಶಕ, ಹಾಗೂ ಹೀರೋ,-ಹೀರೋಯಿನ್, ಎಲ್ಲಾ ಕಲಾವಿದರು ಬೆಳೆಯಬೇಕಾದರೆ ಚಿತ್ರಮಂದಿರಕ್ಕೆ ಪ್ರತಿ ಯೊಬ್ಬರು ಹೋಗಿ ಈ “ಕನ್ನಡ 100[Hundred]ಚಲನ” ಚಿತ್ರವನ್ನು” ಸಿನಿಮಾವನ್ನು ನೋಡಿದಾಗ ಮಾತ್ರ ಸಾಧ್ಯ ಎಂದು ತಿಳಿಸಿದರು.

Leave a Reply

Your email address will not be published. Required fields are marked *