ಭುವನೇಶ್ವರಿ ಪೂಜೆ ಹಾಗೂ ಕಲಾ ತಂಡಗಳ
ಮೆರವಣಿಗೆ’
ಜಿಲ್ಲಾಡಳಿತದ ವತಿಯಿಂದ ಕನ್ನಡ ರಾಜ್ಯೋತ್ಸವ 2021ನ್ನು
ಭುವನೇಶ್ವರಿ ಪೂಜೆ ಹಾಗೂ ಕಲಾ ತಂಡಗಳ
ಮೆರವಣಿಗೆಯೊಂದಿಗೆ ನ.01 ರ ಸೋಮವಾರ ಬೆಳಿಗ್ಗೆ 8.30ಕ್ಕೆ ಸರ್ಕಾರಿ
ಹೈಸ್ಕೂಲ್ ಮೈದಾನದಿಂದ ಪ್ರಾರಂಭಿಸಲಾಗುವುದು.
ಮೆರವಣಿಗೆಯು ಮಹಾನಗರಪಾಲಿಕೆ ಮುಂಭಾಗದಿಂದ ಗಾಂಧಿ
ವೃತ್ತ, ಅಶೋಕ ರಸ್ತೆ, ಜಯದೇವ ವೃತ್ತ, ವಿದ್ಯಾರ್ಥಿ ಭವನದ
ಮಾರ್ಗವಾಗಿ ಜಿಲ್ಲಾ ಕ್ರೀಡಾಂಗಣದವರೆಗೆ ಆಯೋಜಿಸಲಾಗಿದೆ.
ಜಿಲ್ಲಾ ಕ್ರೀಡಾಂಗಣದಲ್ಲಿ ಬೆಳಿಗ್ಗೆ 10 ಗಂಟೆಗೆ ಧ್ವಜಾರೋಹಣ
ಹಾಗೂ ರಾಜ್ಯೋತ್ಸವದ ಸಂದೇಶವನ್ನು ನಗರಾಭಿವೃದ್ಧಿ ಹಾಗೂ
ಜಿಲ್ಲಾ ಉಸ್ತುವಾರಿ ಸಚಿವ ಬಿ.ಎ.ಬಸವರಾಜ ಇವರು ನೆರವೇರಿಸುವರು.
ಅಧ್ಯಕ್ಷತೆಯನ್ನು ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ
ಎಸ್.ಎ.ರವೀಂದ್ರನಾಥ್ ವಹಿಸುವರು.
ಕಾರ್ಯಕ್ರಮದಲ್ಲಿ ಸಂಸದ ಡಾ.ಜಿ.ಎಂ.ಸಿದ್ದೇಶ್ವರ,
ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಹಾಗೂ ಹೊನ್ನಾಳಿ
ಕ್ಷೇತ್ರದ ಶಾಸಕ ಎಂ.ಪಿ.ರೇಣುಕಾಚಾರ್ಯ, ಚನ್ನಗಿರಿ ಕ್ಷೇತ್ರದ
ಶಾಸಕ ಹಾಗೂ ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತದ
ಅಧ್ಯಕ್ಷ ಕೆ.ಮಾಡಾಳ್ ವಿರೂಪಾಕ್ಷಪ್ಪ, ಜಗಳೂರು ಕ್ಷೇತ್ರದ
ಶಾಸಕ ಹಾಗೂ ಕನಾಟಕ ಮಹರ್ಷಿ ವಾಲೀಕಿ ಪರಿಶಿಷ್ಟ ಪಂಗಡಗಳ
ಅಭಿವೃದ್ಧಿ ನಿಗಮದ ಅಧ್ಯಕ್ಷ ಎಸ್.ವಿ.ರಾಮಚಂದ್ರ, ಮಾಯಕೊಂಡ
ಕ್ಷೇತ್ರದ ಶಾಸಕ ಹಾಗೂ ಡಾ. ಬಾಬು ಜಗಜೀವನ ರಾಂ ಚರ್ಮ
ಕೈಗಾರಿಕಾ ಅಭಿವೃದ್ಧಿ ನಿಗಮ ನಿಯಮಿತದ ಅಧ್ಯಕ್ಷರಾದ
ಪ್ರೊ.ಎನ್.ಲಿಂಗಣ್ಣ ಉಪಸ್ಥಿತರಿರುವರು.
ಮುಖ್ಯ ಅತಿಥಿಗಳಾಗಿ ಶಾಸಕರುಗಳಾದ ಶಾಮನೂರು
ಶಿವಶಂಕರಪ್ಪ, ಜಿ.ರಘು ಆಚಾರ್, ಆರ್.ಪ್ರಸನ್ನ ಕುಮಾರ್, ಲಹರ್ಸಿಂಗ್
ಸಿರೋಯಾ, ಮೋಹನ್ ಕುಮಾರ್ ಕೊಂಡಜ್ಜಿ, ಎಸ್.ರಾಮಪ್ಪ,
ಕೆ.ಪಿ.ನಂಜುಂಡಿ ವಿಶ್ವಕರ್ಮ, ರವಿಕುಮಾರ್.ಎನ್, ತೇಜಸ್ವಿನಿಗೌಡ,
ಆಯನೂರು ಮಂಜುನಾಥ್, ಎಸ್.ಎಲ್.ಭೋಜೇಗೌಡ,
ವೈ.ಎ.ನಾರಾಯಣಸ್ವಾಮಿ, ಚಿದಾನಂದ ಎಂ.ಗೌಡ, ಆರ್.ಶಂಕರ್ ಹಾಗೂ
ಮಹಾನಗರಪಾಲಿಕೆಯ ಮಹಾಪೌರ ಎಸ್.ಟಿ.ವೀರೇಶ್, ದಾವಣಗೆರೆ-ಹರಿಹರ
ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ದೇವರಮನಿ
ಶಿವಕುಮಾರ್ ಭಾಗವಹಿಸುವರು.