ದಾವಣಗೆರೆ: ದಾವಣಗೆರೆ ವಿನೋಬಾ ನಗರದಲ್ಲಿ ಪ್ರತಿ
ವರ್ಷದಂತೆ ಈ ವರ್ಷವೂ ಸಹ ಕನ್ನಡ
ರಾಜ್ಯೋತ್ಸವವನ್ನು ಆಚರಿಸಿದ್ದು, ಕನ್ನಡ
ರಾಜ್ಯೋತ್ಸವದೊಂದಿಗೆ ಪುನೀತ್ ಗೆ ನಮನ
ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಕನ್ನಡ ಜ್ಯೋತಿ ಬೆಳಗಿಸಿದ ಶಾಸಕರಾದ ಡಾ||
ಶಾಮನೂರು ಶಿವಶಂಕರಪ್ಪನವರು ಮಾತನಾಡಿ ಸತತ
24ವರ್ಷಗಳಿಂದ ವಿನೋಬಾನಗರ ಸಾರ್ವಜನಿಕ ಸೇವಾ ಸಮಿತಿ
ಕನ್ನಡ ರಾಜ್ಯೋತ್ಸವವನ್ನು ಆಚರಿಸಿಕೊಂಡು
ಬರುತ್ತಿದ್ದು, ಕೇವಲ ರಾಜ್ಯೋತ್ಸವಕ್ಕೆ ಸೀಮಿತವಾಗದೇ
ನಾಗರಾಜ್ ಅವರ ನೇತೃತ್ವದಲ್ಲಿ ಅನೇಕ ಸಾಮಾಜಿಕ
ಕೆಲಸಗಳನ್ನು ಮಾಡಲಾಗುತ್ತಿದೆ. ಇದರಿಂದಾಗಿ ನಾಗರಾಜ್
ಅವರು ಸತತ 4 ಬಾರಿ ಮಹಾನಗರ ಪಾಲಿಕೆ ಸದಸ್ಯರಾಗಿದ್ದಾರೆ
ಎಂದು ಪ್ರಶಂಶಿಸಿದರು.
ಮುಂದುವರೆದು ಮಾತನಾಡುತ್ತಾ ದಾವಣಗೆರೆ
ನಗರದಲ್ಲಿ ಎಸ್.ಎಸ್.ಕೇರ್ ಟ್ರಸ್ಟ್ ನ್ನು ಆರಂಭಿಸಲಾಗಿದ್ದು, ಈ
ಟ್ರಸ್ಟ್ ನಡಿ ಆರಂಭದ ಹಂತವಾಗಿ ಮಹಿಳೆಯರಿಗೆ ಉಚಿತ
ಆರೋಗ್ಯ ತಪಾಸಣೆ ಮತ್ತು ಚಿಕಿತ್ಸೆಯನ್ನು ಹಾಗೂ
ಡಯಾಲಿಸಿಸ್ ರೋಗಿಗಳಿಗೆ ಉಚಿತ ಡಯಾಲಿಸಿಸ್
ಮಾಡಲಾಗುತ್ತಿದೆ. ಈಗಾಗಲೇ ನಾವು ಬಾಪೂಜಿ

ವಿದ್ಯಾಸಂಸ್ಥೆಯ 2 ಆಸ್ಪತ್ರೆಗಳಿಗೆ ನಿರ್ದೇಶನ ನೀಡಲಾಗಿದೆ.
ಯಾರಿಗಾದರೂ ಆಸ್ಪತ್ರೆಯಲ್ಲಿ ಚಿಕಿತ್ಸೆ ನಿರಾಕರಿಸಿದರೆ
ನೇರವಾಗಿ ನಮ್ಮ ಗಮನಕ್ಕೆ ತರುವಂತೆ ತಿಳಿಸಿದರು.
ನೂತನ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ
ವಾಮದೇವಪ್ಪ ಮಾತನಾಡಿ ಶಾಮನೂರು
ಶಿವಶಂಕರಪ್ಪನವರು ಕೊಡುಗೈ ದಾನಿಗಳಾಗಿದ್ದು,
ಅವರ ಕೊಡುಗೆ ದಾವಣಗೆರೆಯನ್ನು ವಿಶ್ವ ಭೂಪಟದಲ್ಲಿ
ಗುರುತಿಸುವಂತೆ ಮಾಡಿದೆ. ಅವರ ವಿವಿಧ ಸೇವಾ
ಕಾರ್ಯಕ್ರಮಗಳನ್ನು ಉದಾಹರಿಸಿದ ಅವರು ದಾವಣಗೆರೆ
ಜನತೆ ಎಂದಿಗೂ ಮರೆಯಬಾರದು ಎಂದರು.
ಕನ್ನಡ ನಾಡು-ನುಡಿಗೆ ಅನೇಕ ಜನರು ಹಲವು
ತ್ಯಾಗಗಳನ್ನು ಮಾಡಿದ್ದು, ನಾವು ನಿವೆಲ್ಲರೂ ಕನ್ನಡ
ನಾಡು-ನುಡಿಗೆ ಕಂಕಣಬದ್ದರಾಗಿ ಕೆಲಸ ಮಾಡೋಣ ಎಂದು
ಕರೆ ನೀಡಿ ಕನ್ನಡ ಸಾಹಿತ್ಯ ಪರಿಷತ್ ಮನೆ ಮಾತಾಗುವಂತೆ
ಮಾಡುತ್ತೇನೆ ಎಂದು ತಿಳಿಸಿದರು.
ಅಖಂಡ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ
ಎಸ್.ಜಿ.ಸೋಮಶೇಖರ್ ಮಾತನಾಡಿ 24 ವರ್ಷದಿಂದ ರಾಜ್ಯೋತ್ಸವ
ಆಚರಣೆ ಮಾಡುತ್ತಾ ಬಂದಿದ್ದು ಖುಷಿ ಕೊಡುವ ವಿಚಾರ. ಈ ಬಾರಿ
ಪುನೀತ್ ಸ್ಮರಣೆಗಾಗಿ ನೇತ್ರದಾನಕ್ಕೆ ಸಮಿತಿ ಸದಸ್ಯರು
ನೋಂದಣಿ ಮಾಡಿರುವುದಕ್ಕೆ ಅಭಿನಂದಿಸಿದರು.
ಇದೇ ವೇಳೆ ಸೇವಾ ಸಮಿತಿಯ ಅಧ್ಯಕ್ಷರು,
ಮಹಾನಗರ ಪಾಲಿಕೆ ವಿಪಕ್ಷ ನಾಯಕರಾದ ಎ.ನಾಗರಾಜ್
ಅವರ ನೇತೃತ್ವದಲ್ಲಿ ಸಮಿತಿ ಸದಸ್ಯರು ನೇತ್ರದಾನಕ್ಕೆ
ಒಪ್ಪಿಗೆ ಸೂಚಿಸಿದರು. ಜೊತೆಗೆ ಕೋವಿಶೀಲ್ಡ್ ಲಸಿಕೆಯನ್ನು
ಸಹ ನೀಡಲಾಯಿತು.
ಕಾರ್ಯಕ್ರಮಕ್ಕೂ ಮುನ್ನ ನಟ ಪುನೀತ
ರಾಜಕುಮಾರ್, ಸಮಿತಿಯ ಕೊಂಡಜ್ಜಿ ಹನುಮಂತಪ್ಪ,
ಡಿ.ರವಿಕುಮಾರ್, ಕಾಳಿಂಗರಾಜು, ವೀರಣ್ಣ, ಪರಸಪ್ಪ ಅವರ

ನಿಧನಕ್ಕೆ 2 ನಿಮಿಷಗಳ ಮೌನಾಚರಿಸಿ ಶ್ರದ್ದಾಂಜಲಿ
ಸಲ್ಲಿಸಲಾಯಿತು.
ಕಿರುತೆರೆ ಕಲಾವಿದರಾದ ಹಿಟ್ಲರ್ ಕಲ್ಯಾಣ ಧಾರಾವಾಹಿ
ನಾಯಕಿ ಮಲೈಕಾ ಮತ್ತು ಪಲ್ಲವಿರಾವ್ ಕಾರ್ಯಕ್ರಮದ
ಕೇಂದ್ರ ಬಿಂದುವಾಗಿದ್ದರು. ವೇದಿಕೆಯಲ್ಲಿ ಮಾಜಿ
ಮಹಾಪೌರರಾದ ಶ್ರೀಮತಿ ರೇಖಾ ನಾಗರಾಜ್, ಆಶಾ ಉಮೇಶ್,
ದಿನೇಶ್ ಕೆ.ಶೆಟ್ಟಿ, ಎಸ್.ರವಿ,ರಾಮಚಂದ್ರ ರಾಯ್ಕರ್, ಸತೀಶ್,
ಯೋಗಿಶ್, ಸುರೇಶ್ ಕುಂಟೆ, ರವಿ, ಬಾಬು, ಶೇಖರ್, ಶಿವಾಜಿರಾವ್,
ಪೊಲೀಸ್ ಚಂದ್ರಣ್ಣ, ಪರಮೇಶ್ವರಪ್ಪ, ಕೊಟ್ರೇಶಪ್ಪ,
ಮಂಜು, ರಮೇಶ್(ಸೋಲಾರ್) ಸುರೇಶ್ ಉತ್ತಂಗಿ,
ಮಂಜುನಾಥ್, ವಿರೇಶ್, ಇನ್ನು ಮುಂತಾದವರಿದ್ದರು.
ಸನ್ಮಾನಿತರುಗಳಾದ ರಕ್ಷಿತಾ ಎಲ್., ಗೌರಮ್ಮ ಸಿಸ್ಟರ್,
ರೂಪಾ ಸಿಸ್ಟರ್, ನಾರಾಯಣರಾವ್ ಕಾಳೆ, ಪಿ.ನಾಗರಾಜಪ್ಪ,
ಕೂಗವ್ವ ಲಕ್ಕಪ್ಪ, ನೀಲಪ್ಪ ಅವರನ್ನು ಸನ್ಮಾನಿಸಲಾಯಿತು.

Leave a Reply

Your email address will not be published. Required fields are marked *