ಕರ್ನಾಟಕ ಲೋಕಸೇವಾ ಆಯೋಗ ನಡೆಸುವ ತಾಂತ್ರಿಕೇತರ
ಗ್ರೂಪ್ ಸಿ ಹುದ್ದೆಗಳ ಪರೀಕ್ಷೆಗಳು ಡಿ.04 ರಂದು ಎರಡು
ಕೇಂದ್ರಗಳಲ್ಲಿ ಹಾಗೂ ಡಿ.05 ರಂದು ಹದಿನೈದು ಕೇಂದ್ರಗಳಲ್ಲಿ
ನಡೆಯಲಿವೆ ಎಂದು ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು ತಿಳಿಸಿದರು.
ಗುರುವಾರ ಅಪರ ಜಿಲ್ಲಾಧಿಕಾರಿಗಳ ಕಛೇರಿ ಸಭಾಂಗಣದಲ್ಲಿ
ನಡೆದ ಸಭೆಯಲ್ಲಿ ಪರೀಕ್ಷಾ ವೀಕ್ಷಕರು
ಮೇಲ್ವಿಚಾರಕರು,ಮತ್ತು ಮಾರ್ಗಾಧಿಕಾರಿಗಳು ಪರಿಕ್ಷೆಗಳಲ್ಲಿ
ಅನುಸರಿಸಬೇಕಾದ ಕ್ರಮಗಳ ಬಗೆಗೆ ಮಾಹಿತಿ ನೀಡಿದ ಅವರು, ಡಿ. 4
ರಂದು ಬೆಳಿಗ್ಗೆ 10 ರಿಂದ 11.30 ರವರಗೆ ಕಡ್ಡಾಯ ಕನ್ನಡ ಭಾಷಾ
ಪರೀಕ್ಷೆ. ಡಿ.05 ರಂದು ಬೆಳಿಗ್ಗೆ 10 ರಿಂದ 11.30 ರವರಗೆ ಸಾಮಾನ್ಯ
ಜ್ಞಾನ ಹಾಗೂ ಮಧ್ಯಾಹ್ನ 2 ರಿಂದ ಸಂಜೆ 4 ಗಂಟೆಯವರಗೆ
ಸಂವಹನ ವಿಷಯದ ಪರೀಕ್ಷೆಗಳು ನಡೆಯಲಿವೆ. ಪರೀಕ್ಷೆಗಳಲ್ಲಿ
ಎಷ್ಟೇ ಎಚ್ಚರವಹಿಸಿದರೂ ಕೆಲವು ತಪ್ಪುಗಳಾಗುತ್ತವೆ ಹಾಗಾಗಿ
ಪರೀಕ್ಷಾ ಕರ್ತವ್ಯ ನಿರ್ವಹಿಸುವ ಪ್ರತಿಯೊಬ್ಬರೂ ತಮ್ಮ ತಮ್ಮ
ಪರೀಕ್ಷಾ ಕರ್ತವ್ಯಗಳನ್ನು ಸರಿಯಾಗಿ ಓದಿಕೊಂಡು ಕರ್ತವ್ಯ
ನಿರ್ವಹಿಸಬೇಕು. ತಾಂತ್ರಿಕತೆ ಬಹಳ ಮುಂದುವರೆದಿದ್ದು
ಪರೀಕ್ಷೆಗಳಲ್ಲಿ ಮೋಸ ಎಸಗುವವರು ಬೇರೆ ಬೇರೆ
ತಂತ್ರಗಳನ್ನು ಅನುಸರಿಸುವುದರಿಂದ ನಾವು ಹೆಚ್ಚು
ಜಾಗರೂಕರಾಗಿರಬೇಕೆಂದರು.
ಎಲೆಕ್ಟ್ರಾನಿಕ್ ಸಾಧನಗಳಾದ ಮೊಬೈಲ್, ಸ್ಮಾರ್ಟ್ ಫೋನ್, ಸ್ಮಾರ್ಟ್
ವಾಚ್, ಬ್ಲೂ ಟೂತ್ ಡಿವೈಸ್, ಪೇಜರ್, ವೈರ್‍ಲೆಸ್, ಕ್ಯಾಲ್ಕುಲೇಟರ್, ಮೊದಲಾದ
ಎಲೆಕ್ಟ್ರಾನಿಕ್ ವಸ್ತುಗಳಿಗೆÀ ನಿರ್ಬಂಧವಿದೆ, ಆದಾಗ್ಯೂ ಯಾವುದೇ
ವ್ಯಕ್ತಿಗಳು ಇವುಗಳನ್ನು ಕೇಂದ್ರದ ಒಳ ತಂದರೆ ಅವರ
ಅಭ್ಯರ್ಥಿತನವನ್ನು ರದ್ದುಗೊಳಿಸಿ ಆಯೋಗ ನಡೆಸುವ ಎಲ್ಲಾ
ಪರೀಕ್ಷೆಗಳಿಂದ ಡಿಬಾರ್ ಮಾಡಲಾಗುವುದೆಂದರು.
      ಲೋಕಸೇವಾ ಆಯೋಗದ ಪ್ರತಿನಿಧಿ ರೂಪ  ಮಾತನಾಡಿ, ಪ್ರತಿ
ಕೇಂದ್ರದಲ್ಲಿಯೂ ಮೊಬೈಲ್ ಕಸ್ಟೋಡಿಯನ್ ಗಳಿದ್ದು
ಅಭ್ಯರ್ಥಿಗಳು ತಮ್ಮ ಮೊಬೈಲ್‍ಗಳನ್ನು ಅವರ ಬಳಿ ನೀಡಬೇಕು.
ಪರೀಕ್ಷೆ ಬರೆಯುವ ಅಭ್ಯರ್ಥಿಗಳು ಫಿಲ್ಟರ್(ಜಿiಟಣeಡಿ) ಇರುವ
ಮಾಸ್ಕ್‍ಗಳನ್ನು ಧರಿಸುವಂತಿಲ್ಲ. ಹಾಗೂ ಕುಡಿಯುವ ನೀರಿನ
ಬಾಟಲಿಗಳು ಪಾರದರ್ಶಕವಾಗಿರಬೇಕೆಂದರು
ಸಭೆಯಲ್ಲಿ ಡಿಡಿ ಪಿಯು ಶಿವರಾಜು, ಬಿಇಓಗಳಾದ ನಿರಂಜನಮೂರ್ತಿ,
ಸಿದ್ದಪ್ಪ, ಜಗದೀಶ್, ಸೇರಿದಂತೆ ಪರೀಕ್ಷೆ ನಿಯೋಜಿತ ಅಧಿಕಾರಿಗಳಿದ್ದರು.
 
ಪರೀಕ್ಷಾ ಕೆಂದ್ರಗಳ ಸುತ್ತ 200 ಮೀ ನಿಷೇಧಿತ ಪ್ರದೇಶ : ಡಿ.ಸಿ

 ದಾವಣಗೆರೆ ನಗರದ 15 ಪರೀಕ್ಷಾ ಕೇಂದ್ರಗಳಲ್ಲಿ ಡಿಸೆಂಬರ್04
ಮತ್ತು 5 ರಂದು  ಕರ್ನಾಟಕ ಲೋಕಸೇವಾ ಆಯೋಗ ನಡೆಸುವ
ತಾಂತ್ರಿಕೇತರ ಗ್ರೂಪ್ ಸಿ ಹುದ್ದೆಗಳ ಪರೀಕ್ಷೆಗಳು
ನಡೆಯಲಿದ್ದು, ಪರೀಕ್ಷಾ ಕೇಂದ್ರಗಳ ಸುತ್ತಮುತ್ತ 200 ಮೀ
ವ್ಯಾಪ್ತಿ ಪ್ರದೇಶವನ್ನು ಸಾರ್ವಜನಿಕ ನಿಷೇಧಿತ ಪ್ರದೇಶವೆಂದು
ಘೋಷಿಸಿದ್ದು ಈ ಕೇಂದ್ರಗಳ ಸುತ್ತಮುತ್ತಲಿರುವ ಜೆರಾಕ್ಸ್
ಅಂಗಡಿಗಳು ಹಾಗೂ ಸೈಬರ್ ಕೆಫೆಗಳನ್ನು ಪರೀಕ್ಷಾ ಅವಧಿಯಲ್ಲಿ
ಮುಚ್ಚಲು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಆದೇಶಿಸಿದ್ದಾರೆ.

Leave a Reply

Your email address will not be published. Required fields are marked *