ಹೊನ್ನಾಳಿ : ಚುನಾವಣೆ ಬಂದಾಗ ಮತದಾರರು ಅಭಿವೃದ್ದಿಯ ಚಿತ್ರವನ್ನು ಇಟ್ಟುಕೊಂಡು ಮತಚಲಾಯಿಸ ಬೇಕು, ಆಗ ಮಾತ್ರ ತಾವಿರುವ ಗ್ರಾಮ ಅಭಿವೃದ್ದಿಯಾಗಲು ಸಾಧ್ಯ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಹೇಳಿದರು..
ವಿಧಾನ ಪರಿಷತ್ ಚುನಾವಣೆ ನಿಮಿತ್ತ ಹೊನ್ನಾಳಿ-ನ್ಯಾಮತಿ ಅವಳಿ ತಾಲೂಕಿನ ವಿವಿಧ ಗ್ರಾಮಪಂಚಾಯಿತಿಗಳಲ್ಲಿ ಬಿಜೆಪಿ ಅಭ್ಯರ್ಥಿ ಡಿ.ಎಸ್.ಅರುಣ್ ಕುಮಾರ್ ಪರವಾಗಿ ಪ್ರಚಾರ ಕೈಗೊಂಡು ಅವರು ಮಾತನಾಡಿದರು..
ದೇಶದಲ್ಲಿ, ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿದೆ, ಅದೇ ರೀತಿ ಪರಿಷತ್ತಿಗೂ ಬಿಜೆಪಿ ಅಭ್ಯರ್ಥಿಗಳು ಚುನಾಯಿತರಾಗಿ ಬಂದರೆ ಅಭಿವೃದ್ದಿ ಕಾರ್ಯಗಳಿಗೆ ಸಹಕಾರಿಯಾಗಲಿದೆ ಎಂದರು..
ಹೊನ್ನಾಳಿ-ನ್ಯಾಮತಿ ಅವಳಿ ತಾಲೂಕಿನ ಬಹುತೇಕ ಗ್ರಾಮ ಪಂಚಾಯಿತಿಗಳಲ್ಲಿ ಬಿಜೆಪಿ ಅಧಿಕಾರದಲ್ಲಿದ್ದು ಗ್ರಾ.ಪಂ ಸದಸ್ಯರು ತಮ್ಮ ಮೊದಲ ಪ್ರಾಶಸ್ತ್ಯ ಮತಗಳನ್ನು ಬಿಜೆಪಿ ಅಭ್ಯರ್ಥಿ ಡಿ.ಎಸ್.ಅಡುಣ್ ಕುಮಾರ್ ಅವರಿಗೆ ನೀಡುವ ಮೂಲಕ ಅವರನ್ನು ಗೆಲ್ಲಿಸ ಬೇಕೆಂದು ಕರೆ ನೀಡಿದರು.
ಡಿ.ಎಸ್.ಅರುಣ್ ಕುಮಾರ್ ಯುವಕರಿದ್ದು ಇವರನ್ನು ಆಯ್ಕೆ ಮಾಡಿದರೇ ಮುಂದಿನ ದಿನಗಳಲ್ಲಿ ಅವರಿಂದಲೂ ಅನುದಾನಗಳನ್ನು ತಂದು ಅವಳಿ ತಾಲೂಕುಗಳನ್ನು ಮತ್ತಷ್ಟು ಅಭಿವೃದ್ದಿ ಮಾಡಲು ಅನುಕೂಲವಾಗಲಿದೆ ಎಂದರು.
ಇದೇ ತಿಂಗಳ ಆರನೇ ತಾರೀಕಿನಂದು ಗ್ರಾಮೀಣಾಭಿವೃಧ್ದಿ ಸಚಿವರಾದ ಕೆ.ಎಸ್.ಈಶ್ವರಪ್ಪ, ಹಾಗೂ ಅಭ್ಯರ್ಥಿ ಡಿ.ಎಸ್.ಅರುಣ್ ಕುಮಾರ್ ಅವಳಿ ತಾಲೂಕಿಗೆ ಭೇಟಿ ನೀಡಲಿದ್ದು, ಈಶ್ವರಪ್ಪನವರು ಅರುಣ್ ಕುಮಾರ್ ಪರವಾಗಿ ಮತಯಾಚನೆ ನಡೆಸಲಿದ್ದಾರೆ ಎಂದರು..
ಅವಳಿ ತಾಲೂಕಿನ ವಿವಿಧ ಗ್ರಾಮ ಪಂಚಾಯಿತಿಗಳಿಗೆ ಭೇಟಿ : ಹೊನ್ನಾಳಿ-ನ್ಯಾಮತಿ ಅವಳಿ ತಾಲೂಕಿನ ಹನುಮಸಾಗರ, ಎಚ್.ಗೋಪಗೊಂಡನಹಳ್ಳಿ, ಹತ್ತೂರು,ಕತ್ತಿಗಿ, ಗುಡ್ಡೇಹಳ್ಳಿ,ಬೆಳಗುತ್ತಿ,ಯರಗನಾಳ್, ಆರುಂಡಿ, ಸುರಹೊನ್ನೆ, ಸವಳಂಗ, ಚಟ್ನಹಳ್ಳಿ, ಫಲವನಹಳ್ಳಿ,ಕುಂಕುವ, ಒಡೆಯರಹತ್ತೂರು, ಗಂಗನಕೋಟೆ,ಬಸವನಹಳ್ಳಿ ಗ್ರಾಮಗಳಿಗೆ ಭೇಟಿ ನೀಡಿದ ರೇಣುಕಾಚಾರ್ಯ ಬಿಜೆಪಿ ಅಭ್ಯರ್ಥಿ ಡಿ.ಎಸ್.ಅರುಣ್ ಕುಮಾರ್ ಪರ ಮತಯಾಚನೆ ನಡೆಸಿದರು..
ಈ ಸಂದರ್ಭ ತಾಲೂಕು ಅಧ್ಯಕ್ಷ ಜೆ.ಕೆ.ಸುರೇಶ್, ಸಾಬೂನು ಮಾರ್ಜಕ ನಿಗಮದ ನಿದೇರ್ಶಕ ಶಿವುಹುಡೇದ್, ಜಿಲ್ಲಾ ಪ್ರದಾನ ಕಾರ್ಯದರ್ಶಿ ಶಾಂತರಾಜ್ ಪಾಟೀಲ್, ಮುಖಂಡರಾದ ಶಿವಾನಂದ್, ಎಂ.ಆರ್.ಮಹೇಶ್, ಎ.ಬಿ.ಹನುಮಂತಪ್ಪ, ಹರ್ಷಪಟೇಲ್, ಮಹೇಂದ್ರ ಗೌಡ ಸೇರಿದಂತೆ ಮತ್ತೀತತರಿದ್ದರು..