ಹೊನ್ನಾಳಿ ತಾಲೂಕಿನ ಸರಕಾರಿ ಪ್ರಥಮ ದರ್ಜೆ ಕಾಲೆಜಿನಲ್ಲಿ ಇಂದು ತಾಲೂಕು ಮಟ್ಟದ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ ಆಯೋಜಿಸಿದ್ದು ಜಿಲ್ಲಾ ಜನಜಾಗೃತಿ ವೇದಿಕೆ ಅಧ್ಯಕ್ಷರಾ ಶ್ರೀ ನಾಗರಾಜ್ ಕಾಕನೂರ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ವಿದ್ಯಾರ್ಥಿಗಳಿಗೆ ದುಶ್ಚಟ ಮುಕ್ತ ಯುವಕರಾಗಬೆಕೆಂದು ಮಾಹಿತಿ ನಿಡಿದರು.
ಹೊನ್ನಾಳಿಯ ಪೊಲಿಸ್ ಠಾಣೆಯ CPI ಶ್ರೀ ದೇವರಾಜ್ ಮಾತನಾಡಿ ಡ್ರಗ್ಸ್, ಅಫಿಮಿನ ದುಸ್ಪರಿಣಾಮದ ಬಗ್ಗೆ ಹಾಗೂ ಸೈಬರ್ ಕ್ರೈಮ್ ಬಗ್ಗೆ ಮಾಹಿತಿ ನಿಡಿದರು.
ಜನ ಜಾಗ್ರತಿ ವೇದಿಕೆಯ ನಿಕಟಪೂರ್ವ ಅಧ್ಯಕ್ಷರಾದ ಸುರೇಶ್ ಹೊಸ್ಕೆರಿ, ಜನಜಾಗೃತಿ ವೆದಿಕೆ ಸದಸ್ಯರಾದ ಶ್ರೀ ಮಂಜುನಾಥ ಸರಳಿಮನಿ, ಕುಮಾರಸ್ವಾಮಿ, ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಶಿವಬಸ್ಸಪ್ಪ ಹೆಚ್ ಎತ್ತಿನಹಳ್ಳಿ , ಯೋಜನಾಧಿಕಾರಿ ಶ್ರೀ ಬಸವರಾಜ್ ಅಂಗಡಿ,ಉಪನ್ಯಾಸಕರು ಭಾಗವಹಿಸಿದ್ದರು. ಮೆಲ್ವಿಚಾರಕ , ಸೇವಾಪ್ರತಿನಿಧಿ ಭಾಗವಹಿಸಿದ್ದರು.