ರಾಜ್ಯ ಸರ್ಕಾರದ ಗೃಹ ಸಚಿವರಾದ ಆರಗ ಜ್ಞಾನೇಂದ್ರರವರು ನೀಡಿರುವ ಹೇಳಿಕೆ ಕರ್ನಾಟಕ ರಾಜ್ಯದ ಪೊಲೀಸ್ ಇಲಾಖೆಗೆ ಅತ್ಯಂತ ಅಗೌರವವನ್ನು ತಂದಿದೆ ಗೃಹ ಸಚಿವರ ಹೇಳಿಕೆ ನಿಜವಾಗಿಯೂ ಅತ್ಯಂತ ದುರದೃಷ್ಟಕರ ಅವರ ಈ ಹೇಳಿಕೆ ಒಬ್ಬ ವ್ಯಕ್ತಿಗೆ ಸೀಮಿತವಾಗಿಲ್ಲದೆ ಇಡೀ ಪೊಲೀಸ್ ಇಲಾಖೆಯನ್ನೇ ಅವರು ದೂಷಿಸಿದ್ದಾರೆ.
ಗೃಹಸಚಿವರಾಗಿ ಇಲಾಖೆಯನ್ನು ಸುಧಾರಣೆ ತರುವ ಪ್ರಯತ್ನವನ್ನು ಮಾಡದೆ ಪೊಲೀಸ್ ಇಲಾಖೆಯ ಲೋಪವನ್ನು ಎತ್ತಿ ತೋರಿಸುವ ಸಂದರ್ಭದಲ್ಲಿ ಅವರು ಬಳಸಿರುವ ಪದವನ್ನು ಗಮನಿಸದರೆ ಪೋಲೀಸ್ ಇಲಾಖೆಗೂ ಗೃಹಸಚಿವರಿಗೂ ಯಾವುದೇ ರೀತಿಯ ಸಂಬಂಧವಿಲ್ಲ ಎಂಬುದನ್ನು ಈ ಹೇಳಿಕೆಯಿಂದ ಬಹಿರಂಗವಾಗಿದೆ.
ಒಬ್ಬ ಗೃಹ ಸಚಿವರಾಗಿ ನೀಡುವ ಹೇಳಿಕೆ ಗಿಂತ ಬಿಜೆಪಿ ಕಾರ್ಯಕರ್ತನಾಗಿ ಬಿಜೆಪಿ ಸಭೆಯಲ್ಲಿ ನೀಡುವ ಹೇಳಿಕೆಯಂತೆ ತೋರುತ್ತಿದೆ ಅವರ ಹತಾಶೆಯ ಹೇಳಿಕೆ ಗಮನಿಸಿದರೆ ಗೃಹಸಚಿವರಾಗಿ ಚಿಕ್ಕಮಗಳೂರು ಜಿಲ್ಲೆಯನ್ನು ನಿಭಾಯಿಸಲು ಇವರಿಗೆ ಶಕ್ತಿ ಇಲ್ಲ ಎಂಬುದು ಎತ್ತಿ ತೋರುತ್ತದೆ.
ಇವರು ರಾಜ್ಯಕ್ಕೆ ಗೃಹ ಸಚಿವರೋ ಅಥವಾ ಬಿಜೆಪಿ ಕಾರ್ಯಕರ್ತರಿಗೋ ಗೃಹ ಸಚಿವರು ಎಂಬುದನ್ನು ಅವರೇ ತಿಳಿಸಬೇಕು,
ಗೃಹ ಸಚಿವರಾಗಿ ಕಾರ್ಯ ನಿರ್ವಹಿಸಲು ವಿಫಲವಾಗಿರುವ ಅರಗ ಜ್ಞಾನೇಂದ್ರ ಅವರು ಈ ಹಿಂದೆಯೇ ಅನೇಕ ಹೇಳಿಕೆಗಳನ್ನು ನೀಡಿ ರಾಜ್ಯದ ಘನತೆಯನ್ನು ಕುಗ್ಗಿಸಿದ್ದಾರೆ, ಈ ಕೂಡಲೇ ಸಚಿವ ಸ್ಥಾನಕ್ಕೆ ರಾಜಿನಾಮೆ ನೀಡಿ ಗೃಹ ಸಚಿವ ಸ್ಥಾನದ ಗೌರವವನ್ನು ಕಾಪಾಡಬೇಕು ಎಂದು ಈ ಪ್ರತಿಭಟನೆ ಮೂಲಕ ಆಗ್ರಹಪಡಿಸಲಾಯಿತು.
ಬೆಂಗಳೂರು ನಗರ ಕಾಂಗ್ರೆಸ್ ಪ್ರಚಾರ ಸಮಿತಿ ವತಿಯಿಂದ ನಡೆದ ಪ್ರತಿಭಟನೆಯಲ್ಲಿ ಪಕ್ಷದ ಮುಖಂಡರಾದ ಎಸ್ ಮನೋಹರ್ ಎ ಆನಂದ್ ಪ್ರಕಾಶ್ ವೆಂಕಟೇಶ್ ಅನಿಲ್ ಕುಮಾರ್ ಚಂದ್ರಶೇಖರ್ ಪುಟ್ಟರಾಜು ಲೋಕೇಶ್ ಬಾಬು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *