ಹೊನ್ನಾಳಿ : ಸಂವಿಧಾನ ದಿನವು ಅತ್ಯಂತ ಪವಿತ್ರವಾದ ದಿನವಾಗಿದ್ದು, ಭಾರತ ದೇಶದ ಸಂವಿಧಾನ ಇತರ ರಾಷ್ಟ್ರಗಳಿಗೆ ಮಾದರಿಯಾಗಿದೆ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಹೇಳಿದರು..
ಶಾಸಕರ ನೂತನ ನಿವಾಸದಲ್ಲಿ ತಾಲೂಕು ಎಸ್ಸಿ ಮೋರ್ಚದಿಂದ ಶುಕ್ರವಾರ ಆಯೋಜಿಸಿದ್ದ ರಾಷ್ಟ್ರೀಯ ಸಂವಿಧಾನ ದಿವಸ್ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು..
ದೇಶದ ಪ್ರಜಾಪ್ರಭುತ್ವಕ್ಕೆ ಸಂವಿಧಾನ ಒಂದು ಭದ್ರ ಅಡಿಪಾಯವಾಗಿದ್ದು ಇದನ್ನು ಗೌರವಿಸುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ ಎಂದರು..
ಸಂವಿಧಾನ ದಿನಾಚರಣೆ ಕೇವಲ ಒಂದು ದಿನಕ್ಕೆ ಮಾತ್ರ ಸೀಮಿತವಾಗದೇ ಅದು ನಿರಂತರವಾಗಿ ಆಚರಣೆಯಾಗ ಬೇಕು, ಅಷ್ಟೇ ಅಲ್ಲದೇ ಸಂವಿಧಾನದ ಆಶಯಗಳನ್ನು ಪ್ರತಿಯೊಬ್ಬರಿಗೂ ತಿಳಿಸುವ ಕೆಲಸ ಆಗ ಬೇಕೆಂದು ರೇಣುಕಾಚಾರ್ಯ ಅಭಿಪ್ರಾಯ ಪಟ್ಟರು..
ಸಂವಿಧಾನವು ಪ್ರತಿಯೊಬ್ಬ ನಾಗರಿಕರಿಗೂ ಸಮಾನವಾದ ಹಕ್ಕುಗಳನ್ನು ನೀಡಿದ್ದು ಭಾರತೀಯರೆಲ್ಲರೂ ಸಂವಿಧಾನವನ್ನು ಗೌರವಿಸುವ ಕೆಲಸ ಮಾಡ ಬೇಕೆಂದರು.
ಸಂವಿಧಾನವು ನಮಗೆ ಹಕ್ಕುಗಳನ್ನು ನೀಡಿದ್ದು, ಸಂವಿಧಾನದ ಹಕ್ಕುಗಳು ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಸಿಗುವಂತಾಗ ಬೇಕೆಂದರು.
ಜಾತಿ ಜಾತಿಗಳ ನಡುವೆ ಸಂಘರ್ಷ ವಿರಬಾರದು, ನಾವೆಲ್ಲರೂ ಭಾರತಾಂಬೆಯ ಮಕ್ಕಳು ಎಲ್ಲರೂ ಒಂದಾಗಿರ ಬೇಕೆಂದು ರೇಣುಕಾಚಾರ್ಯ ಕರೆ ನೀಡಿದರು..
ಸಂವಿಧಾನವನ್ನು ಯಾರೂ ಕೂಡ ದುರುಪಯೋಗ ಮಾಡಿಕೊಳ್ಳ ಬಾರದೆಂದು ಮನವಿ ಮಾಡಿದ ರೇಣುಕಾಚಾರ್ಯ, ಸಂವಿಧಾನದ ಆಶಯಗಳನ್ನು ನಾವೆಲ್ಲರೂ ಪಾಲಿಸ ಬೇಕೆಂದರು.
ಈ ಸಂದರ್ಭ ಎಸ್ಸಿ ಮೋರ್ಚ ತಾಲೂಕು ಅಧ್ಯಕ್ಷ ಬೇಲಿಮಲ್ಲೂರು ಉಮೇಶ್, ತಾಲೂಕು ಅಧ್ಯಕ್ಷ ಜೆ.ಕೆ.ಸುರೇಶ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಾಂತರಾಜ್ ಪಟೇಲ್, ಜಿಲ್ಲಾ ಉಪಾಧ್ಯಕ್ಷರಾದ ನೆಲವೊಬ್ಬೆ ಮಂಜುನಾಥ್, ಜಿಲ್ಲಾ ಕಾರ್ಯದರ್ಶಿ ಅರಕೆರೆ ನಾಗರಾಜ್, ಮಂಡಲ ಪ್ರಧಾನ ಕಾರ್ಯದರ್ಶಿ ಶಿವಾನಂದ್ ಮುಖಂಡರಾದ ಎಂ.ಆರ್.ಮಹೇಶ್, ಜುಂಜಾನಾಯ್ಕ ಸೇರಿದಂತೆ ಮತ್ತಿತರರಿದ್ದರು..