ದಾವಣಗೆರೆ: ಮಾಜಿ ಸಚಿವ ಹಾಗೂ ಶಾಸಕ ರಮೇಶ್ ಜಾರಕಿಹೊಳಿ
ಅವರು ಇತ್ತೀಚೆಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡುವ
ಸಂದರ್ಭದಲ್ಲಿ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಅವರನ್ನು ಅಶ್ಲೀಲ
ಶಬ್ದಗಳಿಂದ ನಿಂದಿಸಿ ಅನಾಗರೀಕವಾಗಿ ಅಪಮಾನ ಮಾಡಿರುವುದನ್ನು
ದಾವಣಗೆರೆ ಜಿಲ್ಲಾ ಮಹಿಳಾ ಕಾಂಗ್ರೆಸ್ ತೀವ್ರವಾಗಿ ಖಂಡಿಸಿದ್ದು, ಜಿಲ್ಲಾ
ಪೊಲೀಸ್ ಇಲಾಖೆ ಮೂಲಕ ಪೊಲೀಸ್ ಆಯುಕ್ತರಿಗೆ ಕ್ರಮಕ್ಕೆ
ಒತ್ತಾಯಿಸಿದ್ದಾರೆ.
ಒಬ್ಬ ಮಹಿಳಾ ಶಾಸಕಿಗೆ ಬಹಿರಂಗವಾಗಿ ಮಾಧ್ಯಮಗಳ
ಎದುರೇ ರಾಜ್ಯದ ಮಹಿಳೆಯರು, ಮಕ್ಕಳು ವೀಕ್ಷೀಸುತ್ತಾರೆ ಎಂಬ
ಪರಿಜ್ಞಾನ ಇಲ್ಲದೇ ಹೇಳಿಕೆ ನೀಡಿರುವ ರಮೇಶ್ ಜಾರಕಿಹೊಳಿ.
ಅತ್ಯಾಚಾರ ಪ್ರಕರಣದ ಆರೋಪಿಯಾಗಿದ್ದು, ರಾಜ್ಯದಲ್ಲಿ
ಮಹಿಳೆಯರಿಗೆ ಅಸುರಕ್ಷಿತ ವಾತಾವರಣ ನಿರ್ಮಾಣ ಮಾಡಲು
ಪ್ರೇರಣೆ ನೀಡಿದ್ದಾರೆ ಎಂದು ದೂರಿರುವ ಮಹಿಳಾ ಕಾಂಗ್ರೆಸ್ ಇಂತಹ
ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಿಸಬೇಕೆಂದು ಆಗ್ರಹಿಸಿದ್ದಾರೆ.
ಅಸಹ್ಯವಾಗಿ ಮಹಿಳೆಯ ಘನತೆಗೆ ಧಕ್ಕೆ ತರುವಂತೆ ಅಶ್ಲೀಲ
ಪದಗಳಿಂದ ನಿಂದಿಸಿ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಗೌರವಕ್ಕೆ
ಚ್ಯುತಿ ತಂದಿರುವ ರಮೇಶ್ ಜಾರಕಿಹೊಳಿ ವಿರುದ್ಧ ಸೂಕ್ತ
ಕ್ರಮ ಕೈಗೊಳ್ಳುವಂತೆ ಮಹಿಳಾ ಕಾಂಗ್ರೆಸ್‍ನ ಅಧ್ಯಕ್ಷೆ
ಶ್ರೀಮತಿ ಅನಿತಾಬಾಯಿ ಮಾಲತೇಶ್, ಸುಷ್ಮಾ ಪಾಟೀಲ್, ಆಶಾ ಮುರುಳಿ,

ನಾಗರತ್ನಮ್ಮ, ರಾಜೇಶ್ವರಿ, ಶುಭಮಂಗಳ, ಗೀತಾ
ಚಂದ್ರಶೇಖರ್, ಪುಷ್ಪ ಮತ್ತಿತರರು ಒತ್ತಾಯಿಸಿದ್ದಾರೆ.

Leave a Reply

Your email address will not be published. Required fields are marked *