ಹೊನ್ನಾಳಿ : ಕಳೆದ 30 ವರ್ಷಗಳಿಂದ ಕಾಂಗ್ರೇಸ್ ತೆಕ್ಕೆಯಲ್ಲಿದ್ದ ಚಿನ್ನಿಕಟ್ಟೆ ಗ್ರಾಮಪಂಚಾಯಿತಿ ಇದೇ ಪ್ರಥಮ ಬಾರೀಗೆ ಬಿಜೆಪಿ ವಶವಾಗಿದ್ದು ಸಂತೋಷ ತಂದಿದೆ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚಿನ್ನಕಟ್ಟೆ ಗ್ರಾ.ಪಂ ನಲ್ಲಿ 17 ಜನರ ಸದಸ್ಯ ಬಲವಿದ್ದು ಒಂಬತ್ತು ಸ್ಥಾನ ಕಾಂಗ್ರೇಸ್ ಹಾಗೂ 8 ಜನ ಬಿಜೆಪಿ ಬೆಂಬಲಿತ ಸದಸ್ಯರಿದ್ದು ಕಾಂಗ್ರೇಸ್ ಅಧಿಕಾರದ ಚುಕ್ಕಾಣಿ ಹಿಡಿದಿತ್ತು..
ಆದರೇ ಇದೀಗ ಬಿಜೆಪಿಯ ಜನಪರ ಕಾಳಜಿ ಹಾಗೂ ಅಭಿವೃದ್ದಿ ಕೆಲಸಗಳನ್ನು ಮೆಚ್ಚಿ ವಿರೇಶ್ ನಾಯ್ಕ ಕಾಂಗ್ರೇಸ್ ತೊರೆದು ಬಿಜೆಪಿ ಸೇರಿದ್ದು ಬಿಜೆಪಿ ಬೆಂಬಲಿತ ಸದಸ್ಯರ ಸಂಖ್ಯೆ ಒಂಬತ್ತಕ್ಕೆ ಏರಿದ್ದು ಇದೀಗ ಬಿಜೆಪಿ ಅಧಿಕಾರದ ಚುಕ್ಕಾಣಿ ಹಿಡಿಯುವ ಮೂಲಕ ಶಶುಕಲಾ ಓಂಕಾರಪ್ಪ ಗ್ರಾ.ಪಂ ಅಧ್ಯಕ್ಷರಾಗಲು ಸಾಧ್ಯವಾಯಿತು ಎಂದರು..
ಒಂದು ಗ್ರಾ.ಪಂ ಅಭಿವೃಧ್ದಿ ಯಾಗ ಬೇಕೆಂದರೆ ಅದು ಕೇವಲ ಅಧ್ಯಕ್ಷರಿಂದ ಮಾತ್ರ ಸಾಧ್ಯವಿಲ್ಲಾ, ಎಲ್ಲಾ ಸದಸ್ಯರು ಒಟ್ಟಾಗಿ ಹೋದಾಗ ಮಾತ್ರ ಗ್ರಾಮಗಳು ಅಭಿವೃಧ್ದಿಯಾಗಲು ಸಾಧ್ಯ ಆಗಾಗೀ ಎಲ್ಲರೂ ಒಟ್ಟಾಗಿ ಗ್ರಾಮಗಳನ್ನು ಅಭಿವೃದ್ದಿ ಮಾಡುವಂತೆ ಶಾಸಕರು ತಿಳಿ ಹೇಳಿದರು..
ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಗ್ರಾ.ಪಂಗಳಿಗೆ ಸಾಕಷ್ಟು ಅನುದಾನಗಳು ಬರುತ್ತಿದ್ದು ಅದನ್ನು ಸದುಪಯೋಗ ಪಡಿಸಿಕೊಳ್ಳುವಂತೆ ಶಾಸಕರು ಸೂಚಿಸಿದರು..
ಈಗಾಗಲೇ ಹೊನ್ನಾಳಿ ನ್ಯಾಮತಿ ಅವಳಿ ತಾಲೂಕುಗಳ ಅಭಿವೃದ್ದಿಗೆ ಸಾಕಷ್ಟು ಅನುದಾನಗಳನ್ನು ತಂದಿದ್ದು, ಕೋವಿಡ್ ನಂತಹ ಸಂಕಷ್ಟದ ಸಮಯದಲ್ಲೂ ಸರ್ಕಾರದಿಂದ ಅನುದಾನಗಳನ್ನು ತರುತ್ತಿದ್ದು, ಮುಂದೆಯೂ ಕೂಡ ಅನುದಾನಗಳನ್ನು ತಂದು ಅವಳಿ ತಾಲೂಕುಗಳನ್ನು ಮಾದರಿ ತಾಲೂಕು ಮಾಡಲು ಪಣ ತೊಟ್ಟಿದ್ದೇನೆ ಎಂದ ರೇಣುಕಾಚಾರ್ಯ ಸದ ನಿಮ್ಮೊಂದಿಗೆ ನಾನಿದ್ದು, ಗ್ರಾ.ಪಂಗೆ ಏನೇ ಅನುದಾನ ಬೇಕಾದರೂ ಅದನ್ನು ಸರ್ಕಾರದಿಂದ ಕೊಡಿಸುವುದಾಗಿ ಬರವಸೆ ನೀಡಿದರು..
ಈ ಸಂದರ್ಭ ಗ್ರಾಮ ಪಂಚಾಯಿತಿ ಸದಸ್ಯರು, ಗ್ರಾಮದ ಮುಖಂಡರು ಮತ್ತೀತರರಿದ್ದರು..

Leave a Reply

Your email address will not be published. Required fields are marked *