ಕನ್ನಡ ಮತ್ತು ಸಂಸ್ಕøತಿ ಇಲಾಖೆಯು ಪ್ರಸಕ್ತ ಸಾಲಿನಲ್ಲಿ ಜಿಲ್ಲಾ
ಮಟ್ಟದಲ್ಲಿ ಅಸ್ಪøಶ್ಯತೆ ನಿವಾರಣೆ ವಿಷಯ ಕುರಿತು ಜನಜಾಗೃತಿ
ಮೂಡಿಸಲು ಉದ್ದೇಶಿಸಿದ್ದು, ಜಿಲ್ಲೆಯ ನುರಿತ ಪರಿಶಿಷ್ಟ ಜಾತಿ ಮತ್ತು
ಪರಿಶಿಷ್ಟ ಪಂಗಡದ ಬೀದಿ ನಾಟಕ ಕಲಾತಂಡಗಳಿಂದ ಅರ್ಜಿ
ಆಹ್ವಾನಿಸಲಾಗಿದ್ದು, ಅರ್ಜಿ ಸಲ್ಲಿಸಲು ಡಿಸೆಂಬರ್ 10 ಕೊನೆಯ
ದಿನವಾಗಿರುತ್ತದೆ.
ಜಿಲ್ಲಾ ಮಟ್ಟದಲ್ಲಿ ಅನುಸೂಚಿತ ಜಾತಿ ಮತ್ತು ಪಂಗಡದ ದೌರ್ಜನ್ಯ
ಅಧಿನಿಯಮದಲ್ಲಿರುವ ಅಸ್ಪøಶ್ಯತೆ ನಿವಾರಣೆ ವಿಷಯವನ್ನು
ಸಾರ್ವಜನಿಕರು, ವಿದ್ಯಾರ್ಥಿಗಳಿಗೆ ತಿಳಿಯಪಡಿಸಲು ಅಗತ್ಯ
ಕಾರ್ಯಕ್ರಮವನ್ನು ರೂಪಿಸಲಾಗಿದೆ. ಜಿಲ್ಲೆಯ ಅರ್ಹ ಬೀದಿ ನಾಟಕ
ಕಲಾತಂಡಗಳಿಗೆ ತರಬೇತಿ ನೀಡಿ ಬೀದಿ ನಾಟಕ ಮೂಲಕ
ಸಾರ್ವಜನಿಕರಲ್ಲಿ ಜನಜಾಗೃತಿ ಮೂಡಿಸಲು ಉದ್ದೇಶಿಸಲಾಗಿದ್ದು, ಜಿಲ್ಲೆಯ

ನುರಿತ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಬೀದಿ ನಾಟಕ
ಕಲಾತಂಡಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಅರ್ಜಿ ಸಲ್ಲಿಸುವ ಕಲಾತಂಡದ ಎಲ್ಲ ಸದಸ್ಯರು ಕಡ್ಡಾಯವಾಗಿ
ಪ.ಜಾತಿ ಅಥವಾ ಪ.ಪಂಗಡಕ್ಕೆ ಸೇರಿದವರಾಗಿರಬೇಕು. ಪ.ಜಾತಿ
ಮತ್ತು ಪ.ಪಂಗಡದ ಪ್ರತ್ಯೇಕ ಕಲಾತಂಡವನ್ನು ಆಯ್ಕೆ
ಮಾಡಲಾಗುವುದು. ತಂಡದ ಎಲ್ಲ ಕಲಾವಿದರು ಇತ್ತೀಚಿನ ಆರ್‍ಡಿ
ಸಂಖ್ಯೆ ಹೊಂದಿರುವ ಜಾತಿ ಪ್ರಮಾಣಪತ್ರ, ಆಧಾರ್ ಕಾರ್ಡ್, ಪಡಿತರ ಚೀಟಿ
ಪ್ರತಿ, ವೈಯಕ್ತಿಕ ಬ್ಯಾಂಕ್ ಖಾತೆ ವಿವರವನ್ನು ಸಲ್ಲಿಸಬೇಕು.
ಮಹಿಳಾ ಕಲಾವಿದರು ಅಥವಾ ಅಂಗವಿಕಲ ಕಲಾವಿದರಿಗೆ ಪ್ರಾಧಾನ್ಯತೆ
ನೀಡಲಾಗುವುದು. ನಾಟಕ ತಂಡವು ಕನಿಷ್ಟ 10 ರಿಂದ 15 ಜನ
ಕಲಾವಿದರನ್ನು ಹೊಂದಿದ್ದು, ಕನಿಷ್ಟ ಮೂರು ಯಶಸ್ವಿ ಬೀದಿ ನಾಟಕ
ಕಾರ್ಯಕ್ರಮ ನೀಡಿರುವ ಕುರಿತು ದಾಖಲೆ ಸಲ್ಲಿಸಬೇಕು. ಜಿಲ್ಲಾ
ಸಮಿತಿಯಿಂದಲೇ ತಂಡವನ್ನು ಆಯ್ಕೆ ಮಾಡಲಾಗುವುದು.
ಕೋವಿಡ್ ಹಿನ್ನೆಲೆಯಲ್ಲಿ ಸರ್ಕಾರ ಆಗಿಂದಾಗ್ಗೆ ಹೊರಡಿಸುವ
ಮಾರ್ಗಸೂಚಿ ಹಾಗೂ ನೀತಿ ಸಂಹಿತೆಗಳಿಗೆ ಅನುಗುಣವಾಗಿ
ಕಾರ್ಯಕ್ರಮ ಪ್ರದರ್ಶಿಸಲು ತಂಡ ಬದ್ಧವಾಗಿರಬೇಕು. ಹೆಚ್ಚಿನ
ಮಾಹಿತಿಗೆ ದೂರವಾಣಿ : 08192-234849 ಕ್ಕೆ ಸಂಪರ್ಕಿಸಬಹುದು ಎಂದು
ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕರು
ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *