ಹೊನ್ನಾಳಿ : ಮನುಷ್ಯ ಸತ್ತ ಮೇಲೂ ಆತನ ಹೆಸರು ಉಳಿಯ ಬೇಕಾದರೆ ಪ್ರತಿಯೊಬ್ಬರೂ ನೇತ್ರದಾನ ಮಾಡ ಬೇಕೆಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ವಿದ್ಯಾರ್ಥಿಗಳಿಗೆ ಕರೆ ನೀಡಿದರು…
ನಗರದ ಶ್ರೀ ಚನ್ನೇಶ್ವರ ಗ್ರಾಮಾಂತರ ಪದವಿ ಪೂರ್ವ ಕಾಲೇಜಿಗೆ ಭೇಟಿ ನೀಡಿ ವಿದ್ಯಾರ್ಥಿಗಳಿಗೆ ನೇತ್ರದಾನದ ಕುರಿತು ಮಾಹಿತಿ ನೀಡಿ ಮಾತನಾಡಿದರು..
ದಾನಗಳಲ್ಲಿ ನೇತ್ರದಾನ ಅತ್ಯಂತ ಪವಿತ್ರವಾದ ದಾನವಾಗಿದ್ದು, ಪ್ರತಿಯೊಬ್ಬರೂ ನೇತ್ರದಾನ ಮಾಡುವ ಮೂಲಕ ಅಂಧರ ಬಾಳಿಗೆ ಬೆಳಕಾಗ ಬೇಕೆಂದರು ಶಾಸಕರು ಕರೆ ನೀಡಿದರು..
ವಿದ್ಯಾರ್ಥಿಗಳು ಸ್ವಯಂ ಪ್ರೇರಿತವಾಗಿ ನೇತ್ರದಾನ ಮಾಡಲು ಮುಂದೆ ಬರ ಬೇಕೆಂದು ಕರೆ ನೀಡಿದ ರೇಣುಕಾಚಾರ್ಯ ನಾವು ಮಾಡುವ ಕೆಲಸ ಬೇರೆಯವರಿಗೆ ಪ್ರೇರಣೆಯಾಗ ಬೇಕೆಂದರು.
ಪುನೀತ್ ರಾಜ್ ಕುಮಾರ್ ಅವರು ನೇತ್ರದಾನಕ್ಕೆ ನಮಗೆಲ್ಲಾ ಪ್ರೇರಣೆಯಾಗಿದ್ದು ಪ್ರತಿಯೊಬ್ಬರೂ ನೇತ್ರದಾನ ಮಾಡಲು ಮುಂದೆ ಬರುವ ಮೂಲಕ ಅಂಧತ್ವವನ್ನು ನಿವಾರಣೆ ಮಾಡ ಬೇಕೆಂದು ಶಾಸಕರು ಕರೆ ನೀಡಿದರು..
ವಿದ್ಯಾದಾನ, ರಕ್ತದಾನ, ಅನ್ನದಾನ, ನೇತ್ರದಾನ ಅತ್ಯಂತ ಮಹತ್ವವಾದ ದಾನಗಳಾಗಿದ್ದು ಪ್ರತಿಯೊಬ್ಬರೂ ಇವುಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವಂತೆ ವಿದ್ಯಾರ್ಥಿಗಳಿಗೆ ಕವಿ ಮಾತು ಹೇಳಿದರು..
ಒಬ್ಬ ವಿದ್ಯಾರ್ಥಿ ಆದರ್ಶ ವಿದ್ಯಾರ್ಥಿಯಾದಾಗ ಮಾತ್ರ ಕಾಲೇಜಿಗೆ, ಕುಟುಂಬಕ್ಕೆ,ದೇಶಕ್ಕೆ ಹೆಸರು ಬರುತ್ತದೆಂದ ರೇಣುಕಾಚಾರ್ಯ, ವಿದ್ಯಾರ್ಥಿಗಳು ದುಶ್ಚಟ್ಟಗಳಿಂದ ದೂರವಿದ್ದು ಜೀವನದಲ್ಲಿ ಒಳ್ಳೆಯ ಗುಣಗಳನ್ನು ಅಳವಡಿಸಿಕೊಳ್ಳುವಂತೆ ಕರೆ ನೀಡಿದರು.
ಕೋರೊನಾ ಮೂರನೇ ಅಲೆ ಬರುತ್ತದೆಂದು ಹೇಳಲಾಗುತ್ತಿದ್ದು ವಿದ್ಯಾರ್ಥಿಗಳು ಕೊರೊನಾ ನಿಯಮಗಳನ್ನು ಪಾಲಿಸುವಂತೆ ರೇಣುಕಾಚಾರ್ಯ ಕರೆ ನೀಡಿದರು.
ಕೊರೊನಾ ಎರಡನೇ ಅಲೆಯಲ್ಲಿ ನನ್ನನ್ನು ನಾನು ಸಮರ್ಪಿಸಿಕೊಂಡಿದ್ದೇ, ನಾನು ಶಾಸಕನಾಗಿ ಕೇವಲ ಪ್ರಚಾರಕ್ಕಾಗಿ ಕೆಲಸ ಮಾಡಿಲ್ಲಾ ಎಂದ ರೇಣುಕಾಚಾರ್ಯ ನಾವು ಮಾಡಿದ ಕೆಲಸ ಪ್ರಚಾರವಾಗ ಬೇಕೆಂದರು..
ಕೋವಿಡ್ ಸಂದರ್ಭದಲ್ಲಿ ನಾನು ನನ್ನ ಕುಟುಂಬ ಎಂದು ಸುಮ್ಮನಿರ ಬಹುದಿತ್ತು, ಆದರೇ ನನಗೆ ಕುಟುಂಬ ಎಂದರೆ ನನ್ನ ಕ್ಷೇತ್ರ, ಅವರಿಗಾಗೀ ನಾನು ನನ್ನ ಜೀವವನ್ನೇ ಮುಡುಪಾಗಿಟ್ಟಿದ್ದೇನೆ ಎಂದರು..
ಈ ಸಂದರ್ಭ ಸಿಂಡಿಕೇಟ್ ಸದಸ್ಯರಾದ ಹಳದಪ್ಪ, ಕಾಲೇಜಿನ ಪ್ರಾಂಶುಪಾಲರಾದ ಬಸವರಾಜ್ ಉಪ್ಪಿನ್, ಚಾಮರಾಜ್, ಉಪನ್ಯಾಸಕರು, ಮುಖಂಡರಾದ ಚಂದ್ರು ಮತ್ತೀತತರಿದ್ದರು.