ಹರಿಹರ ನಗರಸಭಾ ವ್ಯಾಪ್ತಿಯಲ್ಲಿ
ವಸತಿ ರಹಿತರ ಕೇಂದ್ರ ಪ್ರಾರಂಬಿಸಬೇಕಿದ್ದು, ಕಟ್ಟಡ ಬಾಡಿಗೆ
ನೀಡಲು ಆಸಕ್ತಿ ಹೊಂದಿರುವ ಮಾಲೀಕರು ದಾಖಲೆ ಸಲ್ಲಿಸಲು ಸೂಚನೆ
ನೀಡಲಾಗಿದೆ.
ಕೇಂದ್ರ ಪುರಷ್ಕøತ ಡೇ-ನಲ್ಮ್ ಯೋಜನೆಯಲ್ಲಿ ನಗರದ
ವಸತಿ ರಹಿತರ ಆಶ್ರಯ ಉಪಘಟಕದ ಆಶ್ರಯ ನಿರ್ವಹಣೆಯ
ಕಾರ್ಯಕ್ರಮದಡಿ ತಾತ್ಕಾಲಿಕವಾಗಿ ವಸತಿ ರಹಿತರ ಕೇಂದ್ರ
ಪ್ರಾರಂಬಿಸಬೇಕಿದ್ದು, ವಸತಿ ಯೋಗ್ಯ ಕಟ್ಟಡ ಹೊಂದಿರುವ ಹಾಗೂ
ಬಾಡಿಗೆ ನೀಡಲು ಆಸಕ್ತಿ ಹೊಂದಿರುವ ಮಾಲೀಕರು ದಾಖಲೆ ಸಲ್ಲಿಸಲು
ಸೂಚನೆ ನೀಡಲಾಗಿದೆ.
ಸರ್ಕಾರದ ಮಾರ್ಗಸೂಚಿಯನ್ವಯ ಎರಡು ಕೊಠಡಿಗಳು
ಹಾಗೂ ಎರಡು ಶೌಚಾಲಯಗಳನ್ನು ಹೊಂದಿರುವ ವಿಶಾಲವಾದ ವಸತಿ
ಯೋಗ್ಯವಾದ ಕಟ್ಟಡವನ್ನು ಹೊಂದಿರುವ ಕಟ್ಟಡದ ಮಾಲಿಕರು,
ಹದಿನೈದು ದಿನಗಳೊಳಗೆ ಅಂದರೆ ಡಿ. 21 ರ ಸಂಜೆ 04
ಗಂಟೆಯೊಳಗಾಗಿ, ಕಟ್ಟಡದ ಬಾಡಿಗೆಯ ದರ ಮತ್ತು ವಿಳಾಸ,
ಛಾಯಚಿತ್ರ ಹಾಗೂ ಕಟ್ಟಡಕ್ಕೆ ಸಂಬಂದಪಟ್ಟ ದಾಖಲೆಗಳನ್ನು
ಪೌರಾಯುಕ್ತರು, ನಗರಸಭೆ, ಹರಿಹರ ಇವರಿಗೆ ಸಲ್ಲಿಸಬಹುದು.
ಹೆಚ್ಚಿನ ಮಾಹಿತಿಗಾಗಿ ಕಛೇರಿಯ ಡೇ-ನಲ್ಮ್ ಶಾಖೆಯನ್ನು
ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.