ಹೊನ್ನಾಳಿ ತಾಲೂಕಿನ ಗೊಲ್ಲರಹಳ್ಳಿಯಲ್ಲಿರುವ ಶಂಕರ್ ರೈಸ್ ಮಿಲ್ ನಲ್ಲಿ ಇಂದು ಡಿ ಜಿ ಶಾಂತನಗೌಡ್ರುರವರ ಅಭಿಮಾನಿಗಳ ವತಿಯಿಂದ ಡಿ ಜಿ ಶಾಂತನಗೌಡ್ರು ರವರ 74ನೆಯ ಹುಟ್ಟುಹಬ್ಬವನ್ನು ಸರಳವಾಗಿ ಆಚರಿಸಲಾಯಿತು .
ಇದರ ಅಂಗವಾಗಿ ಡಿ ಜಿ ಶಾಂತನಗೌಡ್ರು ರವರ ಅಭಿಮಾನಿಗಳು ಹುಟ್ಟು ಹಬ್ಬದ ಪ್ರಯುಕ್ತ ರಕ್ತದಾನ ಶಿಬಿರವನ್ನು ಏರ್ಪಡಿಸಿದ್ದರು.
ಇದರಲ್ಲಿ ಸುಮಾರು 30 ಜನ ಅಭಿಮಾನಿಗಳು ರಕ್ತದಾನ ಮಾಡಿದರು.
ಇಲ್ಲಿ ನಡೆದ ರಕ್ತದಾನ ಶಿಬಿರದ ವಿಶೇಷತೆ ಏನೆಂದರೆ ಡಿ ಜಿ ಶಾಂತನಗೌಡ್ರುರವರ ಹಿರಿಯ ಪುತ್ರರಾದ ಡಿ ಎಸ್ ಪ್ರದೀಪ್ ಗೌಡ್ರುರವರು ತಮ್ಮ ತಂದೆಯ ಹುಟ್ಟುಹಬ್ಬದ ಪ್ರಯುಕ್ತ ರಕ್ತದಾನ ಶಿಬಿರಕ್ಕೆ ತೆರಳಿ ರಕ್ತದಾನ ಮಾಡಿರುವುದು ವಿಶೇಷವಾಗಿ ಕಂಡುಬಂತು.
ಡಿ ಜಿ ಶಾಂತನಗೌಡ್ರು ರವರು ಅಭಿಮಾನಿಗಳನ್ನು ಉದ್ದೇಶಿಸಿ ಮಾತನಾಡಿ, ನೀವುಗಳು ಅದ್ದೂರಿಯಾಗಿ ನನ್ನ ಹುಟ್ಟುಹಬ್ಬವನ್ನು ಮಾಡಬೇಕೆಂದು ನಿಮಗೆ ಆಸೆ ಇತ್ತು. ಆದರೆ ಸುಮಾರು 18 ತಿಂಗಳ ಕಾಲ ಕರೋನ ವೈರಸ್ ಬಂದು ಜನರನ್ನು ಆರ್ಥಿಕ ಸಂಕಷ್ಟಕ್ಕೆ ಈಡು ಮಾಡಿರುವ ಹಿನ್ನೆಲೆಯಲ್ಲಿ ದೇಶ ಮತ್ತು ರಾಜ್ಯ ನಮ್ಮ ಎರಡು ಅವಳಿ ತಾಲೂಕಿನ ಜನರು ಕಷ್ಟದಲ್ಲಿ ಇದ್ದಾಗ ನಮ್ಮ ಹುಟ್ಟುಹಬ್ಬವನ್ನು ಅದ್ದೂರಿ ಯಾಗಿ ನೀವುಗಳು ಮಾಡುವುದು ಬೇಡ ಎಂದು ಅಂತ ಹೇಳಿದ್ದು ವಿನಹ; ಬೇರೆ ಕಾರಣ ಇಲ್ಲ ಎಂದು ಮಾತನ್ನು ಮುಂದುವರಿಸುತ್ತಾ
ಇಷ್ಟಾದರೂ ನೀವುಗಳು ಹಟ ಬಿಡದೆ ಸ್ವಂತ ಖರ್ಚಿನಲ್ಲಿ ನನ್ನ ಹುಟ್ಟುಹಬ್ಬವನ್ನು ಎಲ್ಲಾ ಅಭಿಮಾನಿಗಳು ಜಾತ್ಯಾತೀತವಾಗಿ ಪಕ್ಷಾತೀತವಾಗಿ ಪಕ್ಷದ ಕಾರ್ಯಕರ್ತರುಗಳು ಸೇರಿ ನನ್ನ ಹುಟ್ಟು ಹಬ್ಬವನ್ನು ಸರಳವಾಗಿ ಆಚರಿಸುವುದು ತುಂಬಾ ಸಂತೋಷವಾಗಿದೆ .ನಿಮ್ಮ ರಿಣವನ್ನು ಯಾವ ರೀತಿ ತೀರಿಸಬೇಕು ಎಂಬುವುದು ನನಗೆ ತೋಚದಂತಾಗಿದೆ .ಎಂದು, ಅಷ್ಟೇ ಜವಾಬ್ದಾರಿನೂ ಕೂಡ ನನಗೆ ಹೆಚ್ಚಾಗಿದೆ ,ಎಂದು ಹೇಳುತ್ತಾ ಹೊನ್ನಾಳಿ ಮತ್ತು ನ್ಯಾಮತಿ ತಾಲೂಕಿನ ಪ್ರಭುಗಳಿಗೆ ಮತ್ತು ಅಭಿಮಾನಿಗಳಿಗೆ ಕೃತಜ್ಞತೆಯ ಜೊತೆಗೆ ಹೃದಯಪೂರ್ವಕ ಧನ್ಯವಾದಗಳು ತಿಳಿಸಿದರು.
ಉಪಸ್ಥಿತಿಯಲ್ಲಿ ಡಿ ಜಿ ಶಾಂತ ಗೌಡ್ರು ಮಾಜಿ ಶಾಸಕರು, ಹೊನ್ನಾಳಿ ಮತ್ತು ನ್ಯಾಮತಿ ಅವಳಿ ತಾಲೂಕಿನ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರುಗಳು ,ಅಭಿಮಾನಿಗಳು ,ಸ್ನೇಹಿತರುಗಳು ,ಸಂಬಂಧಿಕರುಗಳು,ಹಾಗೂ ಹಿರಿಯರು ಮತ್ತು ಕಿರಿಯರು ಸಹ ಭಾಗಿಯಾಗಿದ್ದರು