ಕರ್ನಾಟಕ ವಿಧಾನ ಪರಿಷತ್ತಿನ ಸದಸ್ಯ ಸ್ಥಾನಕ್ಕೆ ಸ್ಥಳೀಯ
ಸಂಸ್ಥೆಗಳಿಂದ ಚುನಾವಣೆ ನಡೆಸುವ ನಿಮಿತ್ತ ದಾವಣಗೆರೆ
ಜಿಲ್ಲೆಯಾದ್ಯಂತ ಮತದಾನವು ಡಿ.10 ರಂದು ನಿಗಧಿಪಡಿಸಲಾಗಿದ್ದು,
ಶಾಂತಿಯುತ ಮತದಾನಕ್ಕಾಗಿ ಡಿ. 08 ರಿಂದ 10 ರವರೆಗೆ
ಜಿಲ್ಲೆಯಾದ್ಯಂತ ಮದ್ಯ ಮಾರಾಟ ನಿಷೇಧಿಸಲಾಗಿದೆ.
ಚುನಾವಣೆ ಪ್ರಕ್ರಿಯೆಯು ಮುಕ್ತ, ಶಾಂತಿಯುತ
ನಿಷ್ಪಕ್ಷಪಾತ ಹಾಗೂ ಸುಸೂತ್ರವಾಗಿ ನಡೆಯಬೇಕೆಂಬ
ಉದ್ದೇಶದಿಂದ ಡಿ.08 ರಂದು ಸಂಜೆ 4 ಗಂಟೆಯಿಂದ ಡಿ. 10 ರ ಸಂಜೆ 6
ಗಂಟೆಯವರೆಗೆ ಜಿಲ್ಲೆಯಾದ್ಯಂತ ಮದ್ಯ ಮಾರಾಟ ನಿಷೇಧಿಸಿದೆ.
ಇದರನ್ವಯ ಜಿಲ್ಲೆಯಾದ್ಯಂತ ಮದ್ಯವನ್ನು ಮದ್ಯದಂಗಡಿ, ಬಾರ್
ಮತ್ತು ರೆಸ್ಟೋರೆಂಟ್, ಹೋಟೆಲ್, ಕ್ಲಬ್, ಡಾಬ, ಛತ್ರ ಇನ್ನಿತರೆ
ಸ್ಥಳಗಳಲ್ಲಿ ಹಾಗೂ ಯಾವುದೇ ಇತರ ಸಾರ್ವಜನಿಕ ಅಥವಾ ಖಾಸಗಿ
ಸ್ಥಳದಲ್ಲಿ ಮಾರಾಟ ಮಾಡಬಾರದು. ನೀಡಬಾರದು ಅಥವಾ
ವಿತರಿಸಬಾರದು ಹಾಗೂ ಈ ದಿವಸಗಳನ್ನು ಶುಷ್ಕದಿವಸಗಳೆಂದು
ಘೋಷಿಸಿಲಾಗಿರುತ್ತದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ
ಮಹಾಂತೇಶ ಬೀಳಗಿ ಆದೇಶದಲ್ಲಿ ತಿಳಿಸಿದ್ದಾರೆ.