ಹರಿಹರ ತಾಲ್ಲೂಕು ಮಲೇಬೆನ್ನೂರು ಪುರಸಭೆಯ 23
ವಾರ್ಡ್‍ಗಳಿಗೆÉ (ಕೌನ್ಸಿಲರುಗಳ ಚುನಾವಣೆ) ಚುನಾಯಿತ
ಸದಸ್ಯರಗಳ ಸ್ಥಾನಗಳನ್ನು ತುಂಬಲು ಸಾರ್ವತ್ರಿಕ ಚುನಾವಣೆ
ನಡೆಸುವ ಸಲುವಾಗಿ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಅವರು
ಅಧಿಸೂಚನೆ ಹೊರಡಿಸಿದ್ದಾರೆ.
ವೇಳಾಪಟ್ಟಿಯನ್ವಯ ಚುನಾವಣೆಗಾಗಿ ನಾಮಪತ್ರ ಸಲ್ಲಿಸಲು
ಡಿ.15 ಕೊನೆಯ ದಿನವಾಗಿದೆ. ಡಿ.16 ರಂದು ನಾಮಪತ್ರಗಳ
ಪರಿಶೀಲಿಸಲನೆ ನಡೆಯಲಿದೆ. ಉಮೇದುವಾರಿಕೆ ಹಿಂಪಡೆಯಲು ಡಿ.18
ಕೊನೆಯ ದಿನ. ಮತದಾನ ಅವಶ್ಯವಿದ್ದರೆ ಮತದಾನವನ್ನು ಡಿ.27
ರಂದು ಬೆಳಿಗ್ಗೆ 7 ಗಂಟೆಯಿಂದ ಸಂಜೆ 5 ಗಂಟೆಯವರೆಗೆ
ನಡೆಸಲಾಗುವುದು. ಡಿ.30 ರೊಳಗೆ ಚುನಾವಣೆ ಪ್ರಕ್ರಿಯೆ
ಮುಕ್ತಾಯಗೊಳ್ಳಲಿದೆ.
ಮಲೆಬೆನ್ನೂರು ಪುರಸಭೆಯ 23 ವಾರ್ಡ್‍ಗಳ ಸಂಖ್ಯೆ
ಹಾಗೂ ಹೆಸರು ಮತ್ತು ಮೀಸಲಾತಿ ಪ್ರಕಟಿಸಲಾಗಿದ್ದು, ವಿವರ
ಇಂತಿದೆ. ವಾರ್ಡ್ ಸಂಖ್ಯೆ-01-ಕಲ್ಲುಭಾವಿ ಬಡಾವಣೆ-ಸಾಮಾನ್ಯ. ವಾರ್ಡ್ ಸಂಖ್ಯೆ-
2 ಸೊಪ್ಪಿನರಕೇರಿ ಮತ್ತು ಬೀರಲಿಂಗೇಶ್ವರ ಬಡಾವಣೆ-ಹಿಂದುಳಿದ
ವರ್ಗ-ಎ(ಮಹಿಳೆ). ವಾರ್ಡ್ ಸಂಖ್ಯೆ-03 ಮಾರುತಿ ಬೀದಿ ಬಡಾವಣೆ- ಸಾಮಾನ್ಯ.
ವಾರ್ಡ್ ಸಂಖ್ಯೆ-04 ದೇಶಪಾಂಡೆ ಬಡಾವಣೆ -ಹಿಂದುಳಿದ ವರ್ಗ-ಬಿ(ಮಹಿಳೆ).
ವಾರ್ಡ್ ಸಂಖ್ಯೆ-05 ಪಿಡಬ್ಲ್ಯೂಡಿ ಶಾಲೆ ಹಿಂಭಾಗದ ಬಡಾವಣೆ-ಸಾಮಾನ್ಯ
(ಮಹಿಳೆ). ವಾರ್ಡ್ ಸಂಖ್ಯೆ-06 ಕೆ.ಈ.ಬಿ ಮತ್ತು ಪಿಡಬ್ಲ್ಯೂಡಿ ಬಡಾವಣೆ-
ಹಿಂದುಳಿದ ವರ್ಗ-ಎ. ವಾರ್ಡ್ ಸಂಖ್ಯೆ-07 ವಾಲ್ಮೀಕಿ ಬಡಾವಣೆ-ಹಿಂದುಳಿದ
ವರ್ಗ-ಬಿ. ವಾರ್ಡ್ ಸಂಖ್ಯೆ-08 ಕುರುವತ್ತಿ ಸಾಮಿಲ್ ಬಡಾವಣೆ-ಹಿಂದುಳಿದ
ವರ್ಗ-ಎ(ಮಹಿಳೆ). ವಾರ್ಡ್ ಸಂಖ್ಯೆ-09 ದಾದಾಪೀರ್ ಸಾಬ್-ಪರಿಶಿಷ್ಟ ಜಾತಿ(ಮಹಿಳೆ).
ವಾರ್ಡ್ ಸಂಖ್ಯೆ-10 ಮೇದೂರ್ ಗಲ್ಲಿ ಬಡಾವಣೆ-ಪರಿಶಿಷ್ಟ ಜಾತಿ(ಮಹಿಳೆ).
ವಾರ್ಡ್ ಸಂಖ್ಯೆ-11 ಭೋವಿ ಕಾಲೋನಿ ಬಡಾವಣೆ-ಸಾಮಾನ್ಯ. ವಾರ್ಡ್ ಸಂಖ್ಯೆ-
12 ಬಸ್ ಸ್ಟ್ಯಾಂಡ್ ಹಿಂಭಾಗದ ಬಡಾವಣೆ-ಸಾಮಾನ್ಯ(ಮಹಿಳೆ). ವಾರ್ಡ್ ಸಂಖ್ಯೆ-
13 ಕೆರೆಮೈದಾನ ಬಡಾವಣೆ-ಹಿಂದುಳಿದ ವರ್ಗ-ಎ. ವಾರ್ಡ್ ಸಂಖ್ಯೆ-14 ಗೌಸ್
ನಗರ-ಸಾಮಾನ್ಯ(ಮಹಿಳೆ). ವಾರ್ಡ್ ಸಂಖ್ಯೆ-15 ಟಿಪ್ಪುನಗರ-
ಹಿಂದುಳಿದ ವರ್ಗ-ಎ(ಮಹಿಳೆ). ವಾರ್ಡ್ ಸಂಖ್ಯೆ-16 ಬಸವೇಶ್ವರ ಬಡಾವಣೆ-
01-ಸಾಮಾನ್ಯ. ವಾರ್ಡ್ ಸಂಖ್ಯೆ-17-ಬಸವೇಶ್ವರ ಬಡಾವಣೆ-02
ಸಾಮಾನ್ಯ(ಮಹಿಳೆ). ವಾರ್ಡ್ ಸಂಖ್ಯೆ-18 ಬಸವೇಶ್ವರ ಬಡಾವಣೆ-03-
ಹಿಂದುಳಿದ ವರ್ಗ-ಎ. ವಾರ್ಡ್ ಸಂಖ್ಯೆ-19 ಬಸವೇಶ್ವರ ಬಡಾವಣೆ-04 –
ಸಾಮಾನ್ಯ(ಮಹಿಳೆ). ವಾರ್ಡ್ ಸಂಖ್ಯೆ-20 ಅಜಾದ್ ನಗರ-01-ಸಾಮಾನ್ಯ.
ವಾರ್ಡ್ ಸಂಖ್ಯೆ-21 ಅಜಾದ್ ನಗರ-02-ಸಾಮಾನ್ಯ(ಮಹಿಳೆ). ವಾರ್ಡ್ ಸಂಖ್ಯೆ-22
ಅಜಾದ್ ನಗರ-03-ಸಾಮಾನ್ಯ. ವಾರ್ಡ್ ಸಂಖ್ಯೆ-23 ಆಶ್ರಯ ಕಾಲೋನಿ-
ಪರಿಶಿಷ್ಟ ಪಂಗಡ ಅಭ್ಯರ್ಥಿ ಮೀಸಲಾತಿ ನಿಗದಿಪಡಿಸಲಾಗಿರುತ್ತದೆ ಎಂದು
ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.