ಕೋಲಾರ ಸಂಸದರಾದ ಎಸ್.ಮುನಿಸ್ವಾಮಿಯವರು ಅವರು ಒಂದು ಖಾಸಗಿ ಕಾರ್ಯಕ್ರಮದ ವಿಚಾರವಾಗಿ ಕಮ್ಮಸಂದ್ರ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಶ್ರೀನಿವಾಸ ರೆಡ್ಡಿಯವರನ್ನು ಮೊಬೈಲ್ ಫೋನ್ ಮೂಲಕ ಅವಾಚ್ಯ ಶಬ್ದಗಳನ್ನು ಬಳಸಿ ತೀವ್ರ ತರಾಟಗೆ ತೆಗೆದುಕೊಂಡಿರುವ ಆಡಿಯೋ ಕ್ಲಿಪ್ ಈಗಾಗಲೇ ಸಮಾಜಿಕ ಜಾಲತಾಣಗಳಲ್ಲಿ ವ್ಯರಲ್ ಆಗಿದೆ,
ಕೆಲವು ದಿನಪತ್ರಿಕೆಗಳಲ್ಲಿಯೂ ಇದರ ವರದಿ ಪ್ರಕಟವಾಗಿದೆ,ಸದರಿ ಸಂಭಾಷಣೆಯ ವೇಳೆ ಕೋಲಾರ ಸಂಸದರಾದ ಶ್ರೀ ಮುನಿಸ್ವಾಮಿಯವರು ಸರ್ಕಾರಿ ಅಧಿಕಾರಿ ಶ್ರೀನಿವಾಸ ರೆಡ್ಡಿಯವರನ್ನು ನೀವು ಏಕವಚನದಲ್ಲಿ ಪ್ರಶ್ನೆ ಮಾಡಿರುವುದಲ್ಲದೇ ಅನೇಕ ಅವಾಚ್ಯ ಶಬ್ದಗಳನ್ನು ಬಳಸಿ ಸರ್ಕಾರಿ ಅಧಿಕಾರಿಯನ್ನು ನಿಂದಿಸಿದ್ದಾರೆ, ಮುನಿಸ್ವಾಮಿರವರ ಈ ವರ್ತನೆ ಸಂಸತ್ ಸದನದಲ್ಲಿ ಅವರು ಸಂಸದರಾಗಿ ಅಧಿಕಾರ ಸ್ವೀಕರಿಸುವ ವೇಳೆ ತೆಗೆದುಕೊಂಡ ಪ್ರಮಾಣವಚನದ ಉಲ್ಲಂಘನೆಯಾಗಿರುತ್ತದೆ,
ಸಂಸದ ಮುನಿಸ್ವಾಮಿಯವರು ಅಣತಿ ಮಾಡಿದಂತೆ ಕೇಳಲು ಸರ್ಕಾರಿ ಅಧಿಕಾರಿಗಳೇನು ಅವರ ಕೈಗೊಂಬೆಗಳಲ್ಲ ಹಾಗಾಗಿ ತಾವುಗಳು ಈ ವಿಚಾರದಲ್ಲಿ ಮಧ್ಯಪ್ರವೇಶಿಸಿ ಕೋಲಾರ ಸಂಸದರಾದ ಶ್ರೀ.ಎಸ್ ಮುನಿಸ್ವಾಮಿಯವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕೆಂದು ಗುರುನಾಥ ರೆಡ್ಡಿ ರಾಜ್ಯ ಪ್ರಧಾನ ಕಾರ್ಯದರ್ಶಿ ಅಖಿಲ ಭಾರತ ರೆಡ್ಡಿ ಒಕ್ಕೂಟ (ರಿ) ಕರ್ನಾಟಕ ರಾಜ್ಯ ಘಟಕ ಆಗ್ರಹಿಸಿದರು.

Leave a Reply

Your email address will not be published. Required fields are marked *