ಕೋವಿಡ್-19 ಸಾಂಕ್ರಾಮಿಕ ರೋಗ ಹರಡುವಿಕೆಯನ್ನು
ತಡೆಗಟ್ಟಲು ಸರ್ಕಾರವು ಮಾರ್ಗಸೂಚಿಯನ್ನು ಪ್ರಕಟಿಸಿದ್ದು,
ಜಿಲ್ಲೆಯ ಸರ್ಕಾರಿ/ಅನುದಾನಿತ/ಅನುದಾನರಹಿತ ಶಾಲಾ-ಕಾಲೇಜುಗಳಲ್ಲಿ
ಮಾರ್ಗಸೂಚಿಯನ್ನು ಕಟ್ಟುನಿಟ್ಟಾಗಿ ಅನುಪಾಲನೆ ಮಾಡಬೇಕು,
ತಪ್ಪಿದಲ್ಲಿ ಅಂತಹ ಶಾಲಾ ಕಾಲೇಜುಗಳ ವಿರುದ್ಧ ನಿಯಮಾನುಸಾರ
ಕ್ರಮ ಕೈಗೊಳ್ಳಲಾಗುವುದೆಂದು ಜಿಲ್ಲಾಧಿಕಾರಿ ಮಹಾಂತೇಶ
ಬೀಳಗಿ ಎಚ್ಚರಿಕೆ ನೀಡಿದ್ದಾರೆ.
ಸರ್ಕಾರ ಹೊರಡಿಸಿರುವ ಮಾರ್ಗಸೂಚಿಯನ್ವಯ ಶಾಲಾ
ಕಾಲೇಜುಗಳಲ್ಲಿ ಸಾಮಾಜಿಕ ಅಂತರ ಕಾಪಾಡುವುದು,
ತರಗತಿಯಲ್ಲಿ ಒಂದು ಡೆಸ್ಕಿಗೆ ಇಬ್ಬರು ವಿದ್ಯಾರ್ಥಿಗಳನ್ನು
ಕೂಡಿಸುವುದು. ಸಾಮೂಹಿಕ ಪ್ರಾರ್ಥನೆಯನ್ನು ರದ್ದುಗೊಳಿಸಿ
ಆಯಾ ತರಗತಿಯ ಕೋಣೆಯಲ್ಲಿಯೇ ಪ್ರಾರ್ಥನೆಯನ್ನು
ನಡೆಸುವ ಕಾರ್ಯ ಆಗಬೇಕು.
ಶಾಲಾ ಶಿಕ್ಷಕರು/ಸಿಬ್ಬಂದಿ ಮತ್ತು ಮಕ್ಕಳು ಮಾಸ್ಕ್ ಧರಿಸುವುದು
ಕಡ್ಡಾಯ. ಪ್ರತಿದಿನ ಶಿಕ್ಷಕರು, ವಿದ್ಯಾರ್ಥಿಗಳು ಮತ್ತು
ಸಿಬ್ಬಂದಿಗಳನ್ನು ಕಡ್ಡಾಯವಾಗಿ ಥರ್ಮಲ್ ಸ್ಕ್ಯಾನ್ನಿಂಗ್‍ಗೆ
ಒಳಪಡಿಸುವುದು. ಮತ್ತು ಸ್ಯಾನಿಟೈಸರ್‍ನ್ನು ಬಳಸುವುದು.
ಪ್ರತಿ ಭಾನುವಾರ ತರಗತಿಗಳ ಕೊಠಡಿಗಳನ್ನು
ಸ್ಯಾನಿಟೈಜೇಷನ್ ಮಾಡಿಸುವುದು. ಶಿಕ್ಷಕರು ಮತ್ತು
ಸಿಬ್ಬಂದಿಯವರು ಹಾಗೂ ಮಕ್ಕಳ ಪೋಷಕರು ಕಡ್ಡಾಯವಾಗಿ 2
ಡೋಸ್ ಲಸಿಕೆ ಪಡೆಯಬೇಕು. ಶಾಲಾ-ಕಾಲೇಜುಗಳಲ್ಲಿ ಸಾಂಸ್ಕøತಿಕ
ಚಟುವಟಿಕೆಗಳು ಹಬ್ಬಗಳು ಮತ್ತು ಸಮಾರಂಭಗಳನ್ನು
ಮುಂದಿನ ಆದೇಶದವರೆಗೂ ನಿಷೇದಿಸಲಾಗಿದೆ. ಅನಗತ್ಯವಾಗಿ ಶಾಲಾ
ಕಾಲೇಜುಗಳಿಗೆ ಪೋಷಕರÀ/ಸಾರ್ವಜನಿಕ ಪ್ರವೇಶವನ್ನು
ನಿರ್ಬಂಧಿಸುವುದು. ಈ ಸೂಚನೆಗಳನ್ನು ತಪ್ಪದೇ ಕಟ್ಟುನಿಟ್ಟಾಗಿ
ಪಾಲಿಸಲು ಶಾಲಾ ಕಾಲೇಜುಗಳು ಹಾಗೂ ವಸತಿ ನಿಲಯಗಳ
ಮುಖಸ್ಥರಿಗೆ ತಿಳಿಸಲಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ವಿಪತ್ತು ನಿರ್ವಹಣಾ
ಪ್ರಾಧಿಕಾರದ ಅಧ್ಯಕ್ಷರಾದ ಮಹಾಂತೇಶ ಬೀಳಗಿ ಪ್ರಕಟಣೆಯಲ್ಲಿ
ತಿಳಿಸಿದ್ದಾರೆ.