ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಮತ್ತು ಜಿಲ್ಲಾ ವಕೀಲರ ಸಂಘ,
 ದಾವಣಗೆರೆ  ಇವರ ಸಂಯುಕ್ತಾಶ್ರಯದಲ್ಲಿ “ವಿಶ್ವ ಮಾನವ
ಹಕ್ಕುಗಳ ದಿನಾಚರಣೆ’’ ಕಾರ್ಯಕ್ರಮವನ್ನು ಡಿ.10 ರಂದು
ಬೆಳಿಗ್ಗೆ 10.30ಕ್ಕೆ  ಜಿಲ್ಲಾ ವಕೀಲರ ಸಂಘ, ದಾವಣಗೆರೆ ಇಲ್ಲಿ 
ಹಮ್ಮಿಕೊಳ್ಳಲಾಗಿದೆ.
  ಕಾರ್ಯಕ್ರಮವನ್ನು ಪ್ರಧಾನ ಜಿಲ್ಲಾ ಮತ್ತು ಸತ್ರ
ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ
ಅಧ್ಯಕ್ಷರಾದ ರಾಜೇಶ್ವರಿ ಎನ್ ಹೆಗಡೆ ಉದ್ಘಾಟಿಸುವರು.  ಜಿಲ್ಲಾ
ವಕೀಲರ ಸಂಘದ ಅಧ್ಯಕ್ಷ ಡಿ.ಪಿ. ಬಸವರಾಜ ಅಧ್ಯಕ್ಷತೆ ವಹಿಸುವರು.
  ಮುಖ್ಯ ಅತಿಥಿಗಳಾಗಿ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ
ನ್ಯಾಯಾಧೀಶರಾದ ಶ್ರೀಪಾದ್.ಎನ್., ಕೌಟುಂಬಿಕ
ನ್ಯಾಯಾಲಯ ನ್ಯಾಯಾಧೀಶರಾದ ದಶರಥ.ಬಿ, ಹಿರಿಯ ಸಿವಿಲ್
ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ
ಸದಸ್ಯ ಕಾರ್ಯದರ್ಶಿ ಪ್ರವೀಣ್ ನಾಯಕ್, ಜಿಲ್ಲಾ ವಕೀಲರ ಸಂಘದ
ಕಾರ್ಯದರ್ಶಿ ಪ್ರದೀಪ್ ಪಾಲ್ಗೊಳ್ಳುವರು. ಹಿರಿಯ ವಕೀಲ ಎಲ್.ಹೆಚ್
ಅರುಣ್ ಕುಮಾರ್ ಮಾನವ ಹಕ್ಕುಗಳ ಬಗ್ಗೆ ಉಪನ್ಯಾಸ ನೀಡುವರು.
ಸಂಪನ್ಮೂಲ ವ್ಯಕ್ತಿಗಳಾಗಿ ಹಿರಿಯ ವಕೀಲರಾದ ಮಂಜುಳಾ.ಐ.ಕೆ
ಮಹಿಳೆ ಮತ್ತು ಕಾನೂನು ಹಾಗೂ ಮಹಿಳೆಯರ ಮೇಲೆ ಲೈಂಗಿಕ
ದೌರ್ಜನ್ಯದ ವಿಷಯವಾಗಿ, ಹಾಗೂ ಅನಿತಾ.ಸಿ.ಪಿ ಮಹಿಳೆಯ ಆಸ್ತಿಯ
ಹಕ್ಕುಗಳು ಹಾಗೂ ಜೀವನಾಂಶದ ವಿಷಯವಾಗಿ, ಚರ್ಚಾಗೋಷ್ಠಿ
ನಡೆಸುವರೆಂದು ಪ್ರಕಟಣೆ ತಿಳಿಸಿದೆ.

Leave a Reply

Your email address will not be published. Required fields are marked *