ಹೊನ್ನಾಳಿ : ತಮಿಳುನಾಡಿನ ಕುನೂರಿನ ಸಮೀಪ ಸಂಭವಿಸಿದ ಸೇನಾ ಹೆಲಿಕಾಫ್ಟರ್ ದುರಂತದಲ್ಲಿ ಸಿಡಿಎಸ್ ಜನರನ್ ಬಿಪಿನ್ ರಾವತ್ ದಂಪತಿ ಸೇರಿದಂತೆ ಸೇನಾಧಿಕಾರಿ,ಸೇನಾಯೋಧರು ಸಾವನ್ನಪ್ಪಿದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ನೇತೃತ್ವದಲ್ಲಿ ಶ್ರದ್ದಾಂಜಲಿ ಸಲ್ಲಿಸಲಾಯಿತು..
ನಗರದ ಸಂಗೋಳ್ಳಿ ರಾಯಣ್ಣ ವೃತ್ತದಲ್ಲಿ ಬಿಪಿನ್ ರಾವತ್ ಅವರ ಭಾವಚಿತ್ರಕ್ಕೆ ಪುಪ್ಪನಮನ ಸಲ್ಲಿಸಿ, ಒಂದು ನಿಮಿಷ ಮೌನಾಚರಣೆ ಮಾತನಾಡಿ, ಮಾತನಾಡಿದರು.
ಬಿಪಿನ್ ರಾವತ್ ಭಾರತದ ಮೂರು ಸೇನಾ ಪಡೆಗಳ ಮುಖ್ಯಸ್ಥರಾಗಿದ್ದು ಅವರ ದುರಂತ ಸಾವು ಸಾಕಷ್ಟು ನೋವುಂಟು ಮಾಡಿದೆ ಎಂದರು.
ಅತ್ಯಂತ ದಕ್ಷತೆ, ಸೇವಾನಿಷ್ಟೆಗೆ ಹೆಸರಾಗಿದ್ದ ಬಿಪಿನ್ ರಾವತ್ ದೇಶದ ಭದ್ರತೆಗೆ, ಶಾಂತಿ, ಸುವ್ಯವಸ್ಥೆ ಕಾಪಾಡುವಲ್ಲಿ ವಿಶೇಷದ ಕೊಡುಗೆ ನೀಡಿದ್ದರು ಎಂದರು.
ಬಿಪಿನ್ ರಾವತ್ ಅವರ ಅಗಲಿಕೆ ನಿಜಕ್ಕೂ ದೇಶಕ್ಕೆ ತುಂಬಲಾರದ ನಷ್ಟವಾಗಿದೇ ಎಂದ ರೇಣುಕಾಚಾರ್ಯ ಅವರ ಅಗಲಿಕೆ ಇಡೀ ದೇಶವೇ ಅಶ್ರು ತರ್ಪಣ ಅರ್ಪಿಸುತ್ತಿದೆ ಎಂದರು.
ಈ ವೇಳೆ ಬಿಜೆಪಿ ತಾಲೂಕು ಅಧ್ಯಕ್ಷ ಜೆ.ಕೆ.ಸುರೇಶ್,ಪುರಸಭೆ ಅಧ್ಯಕ್ಷ ಬಾಬು ಓಬಳದಾರ್, ಉಪಾಧ್ಯಕ್ಷೆ ರಂಜಿತಾ ವಡ್ಡಿ ಚೆನ್ನಪ್ಪ, ಮುಖಂಡರಾದ ಅರಕೆರೆ ನಾಗರಾಜ್, ನೆಲವೊನ್ನೆ ಮಂಜುನಾಥ್ ಸೇರಿದಂತೆ ಪುರಸಭೆ ಸದಸ್ಯರು, ಪಕ್ಷದ ಮುಖಂಡರು,ಕಾರ್ಯಕರ್ತರು ಹಾಗೂ ಸಾರ್ವಜನಿಕರಿದ್ದರು.