ಹೊನ್ನಾಳಿ; ಪಟ್ಟಣದ ಮೂರು ದಿನಗಳಿಂದ ಆರಂಭಗೊಂಡಿದ್ದ ಕುಸ್ತಿ ಪ್ರಥಮ ಬಹುಮಾನವನ್ನು 200 ಸಾವಿರ ರೂಗಳು ಹಾಗು 20 ಸಾವಿರ ಮೌಲ್ಯದ ಬೆಳ್ಳಿ ಗದೆಯನ್ನು ಶಿವಮೊಗ್ಗ ಕಿರಣ್ ಪಡೆದರು.
15 ಸಾವಿರ ರೂಗಳ ಹಾಗು 20 ಸಾವಿರ ರೂ ಮೌಲ್ಯದ ಬೆಳ್ಳಿಗದೆಯ 2 ನೇ ಬಹುಮಾನವನ್ನು ಕೊಲ್ಲಾಪುರ ಅರುಣ್,ತೃತಿಯ ಬಹುಮಾನ 10 ಸಾವಿರ ರೂಗಳು ಹಾಗು ಬೆಳ್ಳಿ ಗದೆಯನ್ನು ಬೆಳಗಾಂ ಅಬ್ಬು ಪೈಲ್ವಾನ್ ರವರುಗಳ ಪಡೆದರು.
ದೊಡ್ಡಕೇರಿ ಬೀರಲಿಂಗೇಶ್ವರ ದೇವರ ಕಾರ್ತೀಕೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ
3 ದಿನಗಳ ಕುಸ್ತಿ ಪ್ರದರ್ಶನದಲ್ಲಿ ಸಣ್ಣ ಪೈಲ್ವಾನರು, ಹಳೆಯ ಪೈಲ್ವಾನ್ ಪಟುಗಳು ಸೇರಿದಂತೆ 150 ಕ್ಕೂ ಹೆಚ್ಚು ಕುಸ್ತಿ ಪಟುಗಳ ಶಕ್ತಿ ಪ್ರದರ್ಶನವನ್ನು ಆಸಕ್ತರು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ವಿಕ್ಷಿಸಿದರು.
ಈ ಸಂದರ್ಭದಲ್ಲಿ ದೇವರ ಗಣಮಕ್ಕಳಾದ ಅಣ್ಣಪ್ಪ ಸ್ವಾಮಿ, ಕುಮಾರಸ್ವಾಮಿ, ಕುಸ್ತಿ ಕಮಿಟಿ ಅಧ್ಯಕ್ಷ ವಿಜೇಂದ್ರಪ್ಪ, ಗೌರವಾಧ್ಯಕ್ಷ ಫಾಲಾಕ್ಷಪ್ಪ, ಉಪಾಧ್ಯಕ್ಷರಾದ ಎಂ. ವಾಸಪ್ಪ,ರಂಗಪ್ಪ, ಗುಡ್ಡಜ್ಜಿ ತಮ್ಮಣ್ಣ, ಇಟ್ಟಿಗೆ ಬಸವರಾಜ್, ಕಾಡಸಿದ್ದಪ್ಪ, ಎಚ್.ಬಿ. ದೇವರಾಜ್,ಶಿವು ಚ್ವರಡಿ,ಕೆಂಚಪ್ಪ,ರಾಜಪ್ಪ,ವೆಂಕಟೇಶ,ಎನ್ ಕೆ ರಾಜಪ್ಪ, ಗುಡ್ಡಜ್ಜಿ ಮೂರ್ತೆಪ್ಪ, ಎಚ್.ಡಿ. ಮಲ್ಲಿಕಾರ್ಜುನ್ ಇತರರು ಮೂರು ದಿನಗಳ ಕುಸ್ತಿ ಪ್ರದರ್ಶನ ವ್ಯವಸ್ಥಿತವಾಗಿ ನಡೆಯಲು ಕ್ರಮ ಕೈಗೊಂಡಿದ್ದರು.
ವೇಧಿಕೆಯಲ್ಲಿ ಅಥಿತಿಗಳಾಗಿ ಶಾಸಕ ರೇಣುಕಾಚಾರ್ಯ ಪುರಸಭಾ ಅಧ್ಯಕ್ಷ ಬಾಬು ಹೋಬಳದಾರ,ಸಿಪಿಐ ದೇವರಾಜ್,ಎಸ್ ಐ ಬಸವನಗೌಡ ಬಿರಾದರ್,ಗೌಡ್ರು ನರಸಪ್ಪ,ಗಾಳಿ ನಾಗರಾಜ್,ಮೊಹನ್,ಧರ್ಮಪ್ಪ,ಕತ್ತಿಗೆ ನಾಗರಾಜ್,ದಿಡಗೂರು ಪಾಲಕ್ಷಪ್ಪ ಕೆವಿ ಚನ್ನಪ್ಪ,ವಿನಯ್ ಸೇರಿದಂತೆ ದೇವಸ್ಥಾನ ಸಮಿತಿ ಸದಸ್ಯರು ಕುಸ್ತಿ ಸಮಿತಿ ಪದಾಧಿಕಾರಿಗಳು ಮತ್ತಿತರರಿದ್ದರು.