ದಾವಣಗೆರೆ: ಕಾಂಗ್ರೆಸ್ ಪಕ್ಷದ ಸದಸ್ಯತ್ವ ನೊಂದಣಿ
ಅಭಿಯಾನಕ್ಕೆ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ
ಶಾಸಕರಾದ ಡಾ|| ಶಾಮನೂರು ಶಿವಶಂಕರಪ್ಪನವರು ಚಾಲನೆ
ನೀಡಿದರು.
ಇಂದು ಬೆಳಿಗ್ಗೆ ತಮ್ಮ ನಿವಾಸದಲ್ಲಿ ಪ್ರಾಥಮಿಕ ಸದಸ್ಯತ್ವ
ಪಡೆಯುವ ಮೂಲಕ ಸದಸ್ಯತ್ವ ನೋಂದಣಿ ಅಭಿಯಾನಕ್ಕೆ
ಚಾಲನೆ ನೀಡಿದ ಎಸ್ಸೆಸ್ ಅವರು ರಾಜ್ಯಾದ್ಯಂತ ಕಾಂಗ್ರೆಸ್ ಪಕ್ಷದ
ಸದಸ್ಯತ್ವ ನೊಂದಣಿ ಅಭಿಯಾನ ನಡೆಯುತ್ತಿದ್ದು, ದಾವಣಗೆರೆ
ಜಿಲ್ಲೆಯ 14 ಬ್ಲಾಕ್‍ಗಳಲ್ಲಿ 82 ಕಡೆಗಳಲ್ಲಿ ಅಭಿಯಾನ
ನಡೆಸಲಾಗುತ್ತಿದೆ ಎಂದರು.
ಇಂದಿನಿಂದ ಮಾರ್ಚ್ 31 ರವರೆಗೆ ಕಾಂಗ್ರೆಸ್ ಪಕ್ಷದ ಸದಸ್ಯತ್ವ
ನೋಂದಣಿ ನಡೆಯಲಿದ್ದು, ಪಕ್ಷದ ಎಲ್ಲಾ ಕಾರ್ಯಕರ್ತರು
ಸದಸ್ಯತ್ವ ಪಡೆಯಬೇಕೆಂದು ಕರೆ ನೀಡಿದ ಅವರು ಸದಸ್ಯತ್ವ
ನೋಂದಣಿಯಲ್ಲಿ ದಾವಣಗೆರೆ ಜಿಲ್ಲೆ 3ನೇ ಸ್ಥಾನದಲ್ಲಿದೆ ಎಂದರು.
ಈ ಸಂದರ್ಭದಲ್ಲಿ ವೀಕ್ಷಕರುಗಳಾದ ಸೈಯದ್ ಅಹ್ಮದ್,
ವಿಜಯಕುಮಾರ್, ವಿಧಾನ ಪರಿಷತ್ ಸದಸ್ಯ ಮೋಹನ್ ಕೊಂಡಜ್ಜಿ, ಜಿಲ್ಲಾ
ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಎಸ್.ಮಲ್ಲಿಕಾರ್ಜುನ್, ಬ್ಲಾಕ್ ಕಾಂಗ್ರೆಸ್
ಅಧ್ಯಕ್ಷರುಗಳಾದ ಅಯೂಬ್ ಪೈಲ್ವಾನ್, ಕೆ.ಜಿ.ಶಿವಕುಮಾರ್,
ಮಹಾನಗರ ಪಾಲಿಕೆ ವಿಪಕ್ಷ ನಾಯಕ ಎ.ನಾಗರಾಜ್, ಸದಸ್ಯ
ಜಿ.ಎಸ್.ಮಂಜುನಾಥ್, ಅಲ್ಪಸಂಖ್ಯಾತರ ಘಟಕದ ಆರೀಫ್ ಖಾನ್, ಸಾಮಾಜಿಕ
ಜಾಲತಾಣದ ಹರೀಶ್ ಕೆ.ಎಲ್.ಬಸಾಪುರ, ಎಂ.ಆರ್.ಮಾಲತೇಶ್, ಸೇವಾದಳದ
ಡೋಲಿ ಚಂದ್ರು, ಅಬ್ದುಲ್ ಜಬ್ಬಾರ್, ಯುವರಾಜ್ ಮತ್ತಿತರರಿದ್ದರು.