ದಾವಣಗೆರೆ ಜಿಲ್ಲಾ ಕಾಂಗ್ರೆಸ್ ಸಮಿತಿ ಪರಿಶಿಷ್ಟ ಜಾತಿ ವಿಭಾಗದ ವತಿಯಿಂದ ಕಾಂಗ್ರೆಸ್ ಪಕ್ಷದ ಸದಸ್ಯತ್ವ ನೋಂದಣಿ ಕಾರ್ಯಕ್ರಮವನ್ನು ಪರಿಶಿಷ್ಟ ಜಾತಿ ವಿಭಾಗದ ಜಿಲ್ಲಾಧ್ಯಕ್ಷರಾದ ಶ್ರೀಯುತ ಬಿ.ಹೆಚ್. ವೀರಭದ್ರಪ್ಪನವರು ಜಿಲ್ಲಾ ಕಾಂಗ್ರೆಸ್ ಕಾರ್ಯಾಲಯದಲ್ಲಿ ಚಾಲನೆ ನೀಡಿದರು.

ನಂತರ ಮಾತನಾಡಿದ ಅವರು ತಾವು 40 ವರ್ಷದಿಂದ ಪಕ್ಷದ ನಿಷ್ಠಾವಂತ ಕಾರ್ಯಕರ್ತರಾಗಿ ಪಕ್ಷ ವಹಿಸುವ ಯಾವುದೇ ಜವಾಬ್ದಾರಿ ನಿರ್ವಹಿಸಲು ಸದಾ ಸಿದ್ಧರಿದ್ದು, ಪಕ್ಷ ಅಧಿಕಾರ ನೀಡಲಿ ನೀಡದಿರಲು ಕೊನೆಯ ಉಸಿರಿರುವವರೆಗೂ ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತರಾಗಿ ಕಾರ್ಯನಿರ್ವಹಿಸುವುದಾಗಿ ತಿಳಿಸಿದ ಅವರು ತಾವು ಕೂಡ ಮಾಯಕೊಂಡ ವಿಧಾನಸಭಾ ಕ್ಷೇತ್ರದ ಆಕಾಂಕ್ಷಿಯಾಗಿದ್ದು ಹಿರಿತನವನ್ನು ಪಕ್ಷ ಪರಿಗಣಿಸಬೇಕೆಂದು ಮನವಿ ಮಾಡುವುದಾಗಿ ತಿಳಿಸಿದರು.

ಈ ಕಾರ್ಯಕ್ರಮದಲ್ಲಿ ರಾಜ್ಯ ಉಪಾಧ್ಯಕ್ಷರಾದ ನಾಗರಾಜ್ ಹೆಚ್, ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷರಾದ ಅನಿತಾ ಬಾಯಿ ಮಾಲ್ತೇಶ್, ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾದ ಎಸ್. ಮಲ್ಲಿಕಾರ್ಜುನ,ಮಹಾನಗರಪಾಲಿಕೆ ಸದಸ್ಯರುಗಳಾದ ಜಿ.ಡಿ. ಪ್ರಕಾಶ್, ಮೀನಾಕ್ಷಿ ಎಂ ಜಗದೀಶ್, ಸಾಮಾಜಿಕ ಜಾಲತಾಣದ ಜಿಲ್ಲಾಧ್ಯಕ್ಷರಾದ ಹರೀಶ್ ಕೆ.ಎಲ್ ಬಸಾಪುರ. ಎಸ್ಸಿ ಘಟಕದ ಉಪಾಧ್ಯಕ್ಷರುಗಳಾದ ಬಿ.ಎಂ ಈಶ್ವರ್, ಆದಾಪುರ ನಾಗರಾಜ್, ಪಿ ತಿಮ್ಮೇಶ್, ರಾಜ್ಯ ಸಂಚಾಲಕರಾದ ತಿಮ್ಮಪ್ಪ, ಕವಿತಾ ಚಂದ್ರಶೇಖರ್ ಮುಂತಾದವರು ಮಾತನಾಡಿದರು

ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಕೇಶ್ ಜಿ, ಜಿಲ್ಲಾ ಕಾರ್ಯದರ್ಶಿ ಡಾ, ರೇವಣಸಿದ್ದಪ್ಪ, ಉತ್ತರ ವಲಯ ಅಧ್ಯಕ್ಷರಾದ ಬಿ.ಎಂ. ರಂಗನಾಥಸ್ವಾಮಿ, ದಕ್ಷಿಣ ವಲಯ ಅಧ್ಯಕ್ಷರಾದ ಎಲ್ ವೀರೇಶ್, ಮಹಿಳಾ ಕಾಂಗ್ರೆಸ್ನ ಗೀತಾ .ಸಲ್ಮಾ ಬಾನು ಮುಖಂಡರುಗಳಾದ ಸವನ್ ಜೈನ್, ಅನಿಲ್ ಗೌಡ, ಅಲೆಕ್ಸಾಂಡರ್, ದಾದಾಪೀರ್. ನಾಗರಾಜ್ ಆನೆಕೊಂಡ, ಕರಿಬಸಪ್ಪ. ಇನ್ನೂ ಅನೇಕ ಹಿರಿಯ ಮುಖಂಡರು ಕಾರ್ಯಕರ್ತರು ಭಾಗವಹಿಸಿ ತಮ್ಮ ತಮ್ಮ ಬೂತ್ ಮಟ್ಟದಲ್ಲಿ ಸದಸ್ವತ್ವ ಅಭಿಯಾನ ಕಾರ್ಯಕ್ರಮವನ್ನು ನಿಷ್ಠೆಯಿಂದ ಮಾಡುತ್ತೇವೆಂದು ಪ್ರತಿಯೊಬ್ಬರು ವಿಶ್ವಾಸ ವ್ಯಕ್ತಪಡಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

Leave a Reply

Your email address will not be published. Required fields are marked *