ಹೊನ್ನಾಳಿ ತಾಲೂಕು ದಿನಾಂಕ 13 /12 /2021 ರಂದು ತರಗನ ಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಅಧ್ಯಕ್ಷರು ಮತ್ತು ಉಪಾಧ್ಯಕ್ಷರುಗಳ ಗಾದಿಗಾಗಿ ಚುನಾವಣೆ ನಡೆಯಿತು.
ಅಧ್ಯಕ್ಷರ ಗಾದಿಗೆ ಹೆಸರು ಮನು ಗೌಡರವರು ಮತ್ತು ಉಪಾಧ್ಯಕ್ಷರ ಗಾದೆಗೆ ಸಿಂಗಟಗೆರೆ ರವಿಕುಮಾರ್ ರವರು ಅರ್ಜಿಯನ್ನು ಸಲ್ಲಿಸಿದರು .ಬೇರೆ ಯಾವ ಸದಸ್ಯರು ಕೂಡ ಅರ್ಜಿ ಯನ್ನು ಸಲ್ಲಿಸದೇ ಇರುವ ಕಾರಣ, ಚುನಾವಣಾ ಅಧಿಕಾರಿಯಾದ ಸತೀಶ್ ಕುಮಾರ್ ರವರು ಸರ್ವ ನಿರ್ದೇಶಕರುಗಳ ಒಪ್ಪಿಗೆ ಮೇರೆಗೆ ಅವಿರೋಧವಾಗಿ ಅಧ್ಯಕ್ಷರಾಗಿ ಮನುಗೌಡ ಎಸ್ ಜಿ ಅರಿಕೆರೆ ಮತ್ತು ಉಪಾಧ್ಯಕ್ಷರಾಗಿ ಸಿಂಗಟಗೆರೆ ರವಿಕುಮಾರ್ ಅವರನ್ನು ಆಯ್ಕೆ ಮಾಡಲಾಯಿತು.
ನೂತನ ಅಧ್ಯಕ್ಷರಾದ ಎಸ್ ಜಿ ಮನುಗೌಡ ರವರು ನಂತರ ಮಾತನಾಡಿ ತರಗನಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಅಧ್ಯಕ್ಷರಾಗಿ ಆಯ್ಕೆ ಮಾಡಿದಂತಹ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕರುಗಳಿಗೆ ಮತ್ತು ಏಳು ಗ್ರಾಮದ ಶೇರುದಾರರಿಗೆ ಹೃತ್ಪೂರ್ವಕ ಧನ್ಯವಾದಗಳನ್ನು ತಿಳಿಸಿದರು.
ತರಗನಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರು ಮತ್ತು ಉಪಾಧ್ಯಕ್ಷರು ಹಾಗೂ ಸದಸ್ಯರುಗಳ ವಿವರ ಈ ಕೆಳಗಿನಂತಿದೆ
ಅಧ್ಯಕ್ಷರು ಸನ್ಮಾನ್ಯ ಶ್ರೀ ಎಸ್ ಜಿ ಮನುಗೌಡ ಅರಕೆರೆ.
ಉಪಾಧ್ಯಕ್ಷರು s.g. ರವಿಕುಮಾರ್ ಸಿಂಗಟಗೆರೆ.
ನಿರ್ದೇಶಕರುಗಳಾದ
TG ರಮೇಶ್ ಗೌಡ್ರು ತರಗನಹಳ್ಳಿ ನಿರ್ದೇಶಕರು.
ಎಸ್ ಬಿ ದೇವೇಂದ್ರಪ್ಪ ನಿರ್ದೇಶಕರು .
ರುದ್ರಪ್ಪ ನಿರ್ದೇಶಕರು .
ಬಸವರಾಜಪ್ಪ ನಿರ್ದೇಶಕರು.
ಗಿರಿಜಮ್ಮ ನಿರ್ದೇಶಕರು.
ರತ್ನಮ್ಮ ನಿರ್ದೇಶಕರು .
ಮಂಜಪ್ಪ ನಿರ್ದೇಶಕರು .
ಗೌರಮ್ಮ ನಿರ್ದೇಶಕರು.
ಪದ್ಮ ನಾಯಕ ನಿರ್ದೇಶಕರು .
ತಿಮ್ಮೇಶ ನಿರ್ದೇಶಕರು.
ನೂತನವಾಗಿ ಆಯ್ಕೆ ಆದಂತಹ ಅಧ್ಯಕ್ಷರು ಮತ್ತು ಉಪಾಧ್ಯಕ್ಷರುಗಳಿಗೆ ಜಿಲ್ಲಾ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾದ ಎಚ. ಬಿ ಮಂಜಪ್ಪನವರು ಮತ್ತು ಹೊನ್ನಾಳಿ ತಾಲೂಕು ಕಾಂಗ್ರೆಸ್ ಪಕ್ಷದ ಮುಖಂಡರಾದ ಡಿ .ಎಸ್ ಪ್ರದೀಪ್ ಗೌಡ್ರು ರವರು ಬಂದು ಶ್ರೀಯುತರಿಗೆ ಪುಷ್ಪಹಾರ ಹಾಕುವುದರ ಮೂಲಕ ಶುಭಾಶಯಗಳನ್ನು ಕೊರವುದರ ಮುಖೇನ ಸನ್ಮಾನಿಸಿದರು.
ಉಪಸ್ಥಿತಿಯಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಎಚ್ ಬಿ ಮಂಜಪ್ಪ, ಕಾಂಗ್ರೆಸ್ ಪಕ್ಷದ ಮುಖಂಡರಾದ ಡಿ ಎಸ್ ಪ್ರದೀಪ್ ಗೌಡ್ರು, ಕಾಂಗ್ರೆಸ್ ಪಕ್ಷದ ಯುವ ಮುಖಂಡರುಗಳಾದ ಟಿ. ಜಿ ರಮೇಶ್ ಗೌಡ್ರು ತರಗನಹಳ್ಳಿ. ಎಸ ಜಿ ಮಧುಗೌಡ ಅರಿಕೆರೆ, ಪಟೇಲ್ ಚಂದ್ರಪ್ಪ , ಮಲ್ಲಿಕಾರ್ಜುನ್ ,ಬಸವನಗೌಡ ,ಲೋಹಿತ್ ,ಕರಿಬಸಪ್ಪ ಎಚ್ಎಸ್, ಎಸ್ಟಿ ಬಸರಾಜ್ ,ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಎಲ್ಲಾ ನಿರ್ದೇಶಕರುಗಳು ಹಾಗೂ ಕಛೇರಿಯ ಸಿಬ್ಬಂದಿ ವರ್ಗದವರು, ಷೇರುದಾರರು ,ಮತ್ತು ತರಗನಹಳ್ಳಿ ಗ್ರಾಮಸ್ಥರು ಸಹ ಭಾಗಿಯಾಗಿದ್ದರು.