ದಾವಣಗೆರೆ ಡಿ.12
ನಮಗೆ ಠೇವಣಿದಾರ ಮೊದಲು ಎಂಬುದು ಕೇಂದ್ರ
ಸರ್ಕಾರದ ನಿಲುವಾಗಿದ್ದು ಬ್ಯಾಂಕ್ ಗ್ರಾಹಕರ ಹಿತ ಕಾಪಾಡಲು
ಅದರಲ್ಲಿಯೂ ಬಡ ಮಧ್ಯಮ ವರ್ಗದವರ ರಕ್ಷಣೆಗೆ
ಸರ್ಕಾರ ಉತ್ತರದಾಯಿ ಆಗಿದೆ ಎಂದು ಕೇಂದ್ರದ ಎಲೆಕ್ಟ್ರಾನಿಕ್ಸ್,
ಮಾಹಿತಿ ತಂತ್ರಜ್ಞಾನ,ಕೌಶಲಾಭಿವೃದ್ದಿ ಮತ್ತು ಉದ್ಯಮಶೀಲತೆ
ಖಾತೆ ರಾಜ್ಯ ಸಚಿವರಾದ ರಾಜೀವ್ ಚಂದ್ರಶೇಖರ್ ಹೇಳಿದರು.
ಜಿಲ್ಲಾಡಳಿತ ಭವನದ ತುಂಗಭದ್ರಾ ಸಭಾಂಗಣದಲ್ಲಿ
ಭಾನುವಾರ ಆಯೋಜಿಸಲಾಗಿದ್ದ ನಮಗೆ ಠೇವಣಿದಾರ
ಮೊದಲು, ರೂಪಾಯಿ ಐದು ಲಕ್ಷದವರಗೆ ಖಾತರಿಪಡಿಸಿದ ಠೇವಣಿ
ವಿಮೆ ಪಾವತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು
ಬ್ಯಾಂಕಿಂಗ್ ವಲಯದಲ್ಲಿ ಗ್ರಾಹಕರೇ ಅತಿಮುಖ್ಯ ಸ್ಟೇಕ್
ಹೋಲ್ಡರ್ ಗಳು,ಇಂತಹ ಗ್ರಾಹಕರ ಹಿತ ಕಾಪಾಡಲು 2014
ರಲ್ಲಿ 1 ಲಕ್ಷ ಹಣಕ್ಕೆ ವಿಮೆ ಗ್ಯಾರಂಟಿ ನೀಡಲಾಯಿತು ಪ್ರಸ್ತುತ 5
ಲಕ್ಷ ಹಣಕ್ಕೆ ವಿಮೆ ಗ್ಯಾರಂಟಿ ನೀಡುವುದರೊಂದಿಗೆ ಬಡ ಹಾಗೂ
ಮಧ್ಯಮ ವರ್ಗದವರ ಹಣಕ್ಕೆ ಸರ್ಕಾರ ಗ್ಯಾರಂಟಿ ನೀಡುತ್ತಿದೆ
ಎಂದರು.
ಕೆಲ ಸಂದರ್ಭಗಳಲ್ಲಿ ಬ್ಯಾಂಕ್ ಗಳ ಅಸಮರ್ಪಕ
ನಿರ್ವಹಣೆಯಿಂದ ಮುಚ್ಚಲ್ಪಟ್ಟಾಗ ಬಹಳಷ್ಟು ಬಡ
ಮಧ್ಯಮ ವರ್ಗದವರು ತಮ್ಮ ಜೀವನದ
ಅವಶ್ಯಕತೆಗಳಾದ ಮನೆ ಕಟ್ಟುವುದು,ಮಕ್ಕಳ ಮದುವೆ
ಮುಂತಾದ ಉದ್ದೇಶಗಳಿಗೆ ಇಟ್ಟಿದ್ದ ಹಣ ಕಳೆದುಕೊಂಡು
ಸಂಕಷ್ಟಕ್ಕೆ ಸಿಲುಕುತ್ತಾರೆ ಆದರೆ ಸರ್ಕಾರದ ಈ ಕ್ರಮದಿಂದಾಗಿ
ಗ್ರಾಹಕರು ನಿರಾಳರಾಗುತ್ತಾರೆಂದರು.
ಸಂಸದ ಜಿ ಎಂ ಸಿದ್ಧೇಶ್ವರ ಮಾತನಾಡಿ ಈ ಹಿಂದೆ ಬ್ಯಾಂಕ್
ಗ್ರಾಹಕರು ತಾವು ಇಟ್ಟ ಹಣ ವ್ಯತ್ಯಯವಾದರೆ
ಆತಂಕಕ್ಕೊಳಗಾಗುತ್ತಿದ್ದರು ಪ್ರಧಾನಿ ನರೇಂದ್ರ ಮೋದಿ
ಯವರ ಸಬ್ ಕಾ ಸಾತ್ ಸಬ್ ಕಾ ವಿಕಾಸ್ ಎಂಬಂತೆ ಯಾವೊಬ್ಬ ಬ್ಯಾಂಕ್

ಗ್ರಾಹಕರು ತೊಂದರೆಗೆ ಸಿಲುಕಬಾರದೆಂದು 5 ಲಕ್ಷ ದ
ವರೆಗಿನ ಹಣಕ್ಕೆ ವಿಮೆ ಸಿಗುವಂತೆ ಮಾಡಿದ್ದಾರೆಂದರು
ದಾವಣಗೆರೆ ಮಿಲ್ಲತ್ ಬ್ಯಾಂಕ್ ನಲ್ಲಿ ಠೇವಣಿ ಇರಿಸಿದ್ದ 662
ಗ್ರಾಹಕರಿಗೆ 5.36 ಕೋಟಿ ಹಣ ಪಾವತಿಯಾಗಿದ್ದು ಉಳಿದವರ
ಹಣವೂ ವಾಪಸ್ ಬರಲಿದ್ದು ಯಾರೂ ಆತಂಕಪಡಬೇಕಿಲ್ಲ
ಎಂದರು.
ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿ ಅವರು
ದೆಹಲಿಯ ವಿಜ್ಞಾನ ಭವನದಿಂದ ವರ್ಚುಯಲ್ ಮೂಲಕ
ಮಾತನಾಡಿದರು.
ಕಾರ್ಯಕ್ರಮದಲ್ಲಿ ಜಿ.ಪಂ.ಸಿಇಓ ವಿಜಯ ಮಹಾಂತೇಶ
ದಾನಮ್ಮನವರ್,ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಕೆನರಾ
ಬ್ಯಾಂಕ್ ಸಹಾಯಕ ಪ್ರಭಂದಕ ರಘುರಾಜ್ ಸೇರಿದಂತೆ ವಿವಿಧ
ಬ್ಯಾಂಕುಗಳು ಮುಖ್ಯಸ್ಥರು ಫಲಾನುಭವಿಗಳು
ಹಾಜರಿದ್ದರು.

Leave a Reply

Your email address will not be published. Required fields are marked *